ರಾಣೆಬೆನ್ನೂರ

ಮಣ್ಣಿಗೆ ಹೋಗುವ ಬದಲು ಮತ್ತೊಬ್ಬರಿಗೆ ಬೆಳಕಾಗಿ

ಮಣ್ಣಿಗೆ ಹೋಗುವ ಬದಲು ಮತ್ತೊಬ್ಬರಿಗೆ ಬೆಳಕಾಗಿ

ಎಂ.ಎಸ್ ಅರಕೇರಿ  ಹೇಳಿಕೆ | ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ   

ರಾಣೆಬೆನ್ನೂರು 13: ನೇತ್ರದಾನ ಮಹಾದಾನ ಮಣ್ಣಲ್ಲಿ ಮಣ್ಣಾಗಿ ಹೋಗುವ ಬದಲು ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಅದು ನಿಜವಾದ ಪುಣ್ಯದ ಕೆಲಸವಾಗುತ್ತದೆ ಎಂದು ಎಂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್ ಅರಕೇರಿ ಹೇಳಿದರು. ಅವರು ಮೇಡ್ಲೇರಿ ರಸ್ತೆ  ಲಯನ್ಸ್ ಭವನದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಸೇವಾ ಸಂಸ್ಥೆ ಶಂಕರ್ ಕಣ್ಣಿನ ಆಸ್ಪತ್ರೆ, ಕರವೇ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಇಂತಹ ಶಿಬಿರಗಳ ಮೂಲಕ  ಸಾಕಷ್ಟು ಶಿಬಿರಗಳನ್ನು ಆಯೋಜಿಸಿ ಆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತದೆ ಎಂದ ಅವರು ನೇತ್ರದಾನ ಎಲ್ಲ ದಾನ ಗಳಿಗಿಂತಲೂಶ್ರೇಷ್ಠವಾದ.  ದಾನವಾಗಿದೆ ಎಂದರು. 

 ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಘಟಕದ ನೇತ್ರತಜ್ಞ ಜೆ ಎಂ ರಾಜಶೇಖರ್ ಅವರು ಸರಕಾರ ಅಂದರೆ ಬಾಳಿಗೆ ಬೆಳಕಾಗಲು. ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಿದೆಅದರ ಪ್ರಯೋಜನ ಪಡೆಯಲು ಪ್ರತಿಯೊಬ್ಬರೂ ಮುಂದಾಗಬೇಕುಎಂದ ಅವರುಕಣ್ಣಿನ ತಪಾಸಣೆಬಹುಮುಖ್ಯವಾಗಿದ್ದುಮೇಲಿಂದ ಮೇಲೆತಪಾಸಣೆಗಳ ಪಡಬೇಕುಇದರಿಂದದೃಷ್ಟಿಯಲ್ಲಿ ಇರುವ ನೂನ್ಯತೆಯನ್ನು ಕಂಡುಹಿಡಿಯಬಹುದಾಗಿದೆ ಅಗತ್ಯವಿರುವವರಿಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದ ಅವರು ಬಡವರು ಯಾವುದೇ. ಶುಲ್ಕ ವೆಚ್ಚವಿಲ್ಲದೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದರು. 

 ಲಯನ್ಸ್ ಅಧ್ಯಕ್ಷಟಿ ವೀರಣ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿನಿತ್ಯಾನಂದ ಕುಂದಾಪುರ, ರಾಜು ಅಡಿ ದಪ್ಪ ನವರ, ಅಶೋಕ ಹೊಟ್ಟಿ ಗೌಡ್ರು, ಶಿವಪ್ಪ ಗುರಿಕಾರ್, ಅನುರಾಧಾ ಕುಲಕಣರ್ಿ, ವಿಕ್ರಂ ಸಣ್ಣಮನಿ, ಶರಣ ರಾಜ ಚೌದರಿ, ಸೇರಿದಂತೆ ಸಂಸ್ಥೆಯ ಅನೇಕ ಗಣ್ಯರು,ಪದಾಧಿಕಾರಿಗಳುಉಪಸ್ಥಿತರಿದ್ದರು.ಶಿಬಿರದಲ್ಲಿ350ಕ್ಕೂ ಹೆಚ್ಚು ಜನರುತಪಾಸಣೆ ಒಳಪಡಿಸಲಾಯಿತು ಅದರಲ್ಲಿ 250ಕ್ಕೂ ಹೆಚ್ಚು ನೇತ್ರ  ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು 

ಸುದ್ದಿ ಓದಿ