ತಾಳಿಕೋಟಿ

ಘನತಾಜ್ಯ ವಿಲೇವಾರಿ ಘಟಕ ಸ್ಥಾಪನೆ

ಘನತಾಜ್ಯ ವಿಲೇವಾರಿ ಘಟಕ ಸ್ಥಾಪನೆ
ತಾಳಿಕೋಟೆ ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ ಆವರಣದಲ್ಲಿ ಕಸಸಂಗ್ರಹಣಾ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು.

ತಾಳಿಕೋಟೆ 11: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ಕನಸು ನನಸು ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯತ ಕೇಂದ್ರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಪಂಚಾಯತ ವ್ಯಾಪ್ತಿಯ ಪ್ರತಿ ಮನೆ ಮನೆಗೂ ಕಸ ಸಂಗ್ರಹ ಮಾಡಿ, ಕಸ ವಿಲೇವಾರಿ ಮಾಡಲು ಗ್ರಾಪಂ ಆಡಳಿತ ಮುಂದಾಗಿದೆ. ಸ್ವತ್ಛತಾ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪಂಚಾಯತ ಅಭಿವೃದ್ದಿ ಅಧಿಕಾರಿ ಶಂಕರ ತಳವಾರ ಹೇಳಿದರು. 

ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ ಆವರಣದಲ್ಲಿ ಸ್ವಚ್ಚ ಭಾರತ ಮಿಷನ್‌ದಡಿಯಲ್ಲಿ ಕಸ ಸಂಗ್ರಹಣಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.  

ಸ್ವಚ್ಛ ಭಾರತ ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಗ್ರಾ.ಪಂ. ಮಟ್ಟದಲ್ಲೇ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಿಸಲಿವೆ ಎಂದರು. 

ಕಾರ್ಯದರ್ಶಿ ಶಿವಾನಂದ ದೊಡಮನಿ ಮಾತನಾಡಿ, ಗ್ರಾ.ಪಂ. ಮಟ್ಟದಲ್ಲೂ ಘನತಾಜ್ಯ ಘಟಕ ನಿರ್ಮಿಸುವ ಮೂಲಕ ರಾಜ್ಯ ಸರ್ಕಾರ ಕ್ರಾಂತಿಕಾರಿ ಯೋಜನೆಗೆ ಕೈ ಹಾಕಿದೆ. ಪ್ರತಿ ಮನೆಯಲ್ಲಿ ಕಸ ಹಾಕುವ ಮೊದಲು ಹಸಿ, ಒಣ, ಮರು ಬಳಕೆಯಾಗುವ ಕಸ ಎಂದು ವಿಂಗಡಣೆ ಮಾಡಬೇಕು. ಗ್ರಾ.ಪಂ. ಸಿಬ್ಬಂದಿ ಕಸ ಸಾಗಣೆ ವಾಹನಗಳ ಮೂಲಕ ಮನೆಗಳ ಬಳಿಗೆ ಹೋಗಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಿವಪ್ಪ ಗೋನಾಳ, ಪರಶುರಾಮ ನಾಗೂರ, ಬಾಬುಪಟೇಲ ಗುಡ್ನಾಳ, ಶ್ರೀಶೈಲ ಬಿರಾದಾರ, ಸೋಮನಿಂಗಪ್ಪ ಚಲವಾದಿ, ಮೈಬುಬಸಾಬ ಮುಜಾವರ, ಸಿದ್ದಪ್ಪ ಮೂಕಿಹಾಳ, ಗಿರೇವ್ವ ಹಗರಗುಂಡ,  ನಾಗೇಶ ಹರನಳ, ಸಿಬ್ಬಂದಿಗಳಾದ ಡಿ.ಎಸ್‌.ಹಿರೇಮಠ, ಕುಮಾರ ಬೊಮ್ಮನಹಳ್ಳಿ, ರವಿ ಡಂಬಳ, ನಿಂಗಪ್ಪ ವಾಲಿಕಾರ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ