ಮಾಜಿ ಶಾಸಕರ ಹೆಸರು ತೆರವು, ನೂತನ ಶಾಸಕರ ನಾಮಫಲಕ ಅಳವಡಿಕೆ
ಬ್ಯಾಡಗಿ 22: ಬಸವರಾಜ ಶಿವಣ್ಣನವರ ಅವರು ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ತಾಲೂಕಾ ಪಂಚಾಯತ್ ಕಾರ್ಯಾಲಯದ ಎದುರು ಇರುವ ಶಾಸಕರ ನಾಮ ಫಲಕದಲ್ಲಿದ್ದ ಹಿಂದಿನ ಶಾಸಕರಾಗಿದ್ದ ವೀರುಪಾಕ್ಷ ಬಳ್ಳಾರಿ ಅವರ ಹೆಸರಿನ ನಾಮಫಲಕವನ್ನು ಸಿಬ್ಬಂದಿಗಳು ತೆರವುಗೊಳಿಸಿ ಆ ಜಾಗಕ್ಕೆ ನೂತನ ಶಾಸಕರಾದ ಬಸವರಾಜ ಶಿವಣ್ಣನವರ ಅವರ ಹೆಸರಿನ ನಾಮ ಫಲಕವನ್ನು ಅಳವಡಿಸಲಾಗಿದೆ.
ಇಷ್ಟು ದಿನ ಶಾಸಕರಾಗಿದ್ದ ವಿರುಪಾಕ್ಷಪ್ಪ ಬಳ್ಳಾರಿ ಅವರ ಹೆಸರಿನಲ್ಲಿ ನಾಮಫಲಕವಿತ್ತು. ಈಗ ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾಜಿ ಶಾಸಕರಾಗಿದ್ದರಿಂದ ನಾಮಫಲಕದಲ್ಲಿದ್ದ ಹೆಸರನ್ನು ತೆರೆವುಗೊಳಿಸಿ ನೂತನ ಶಾಸಕರಾದ ಬಸವರಾಜ ಶಿವಣ್ಣನವರ ಅವರ ಹೆಸರು ಅಳವಡಿಸಲಾಗಿದೆ.
ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಅವರು ಹಾಗೂ 8 ಜನ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ ಭಾಗಿಯಾಗಿದ್ದಾರೆ.