ಹುಕ್ಕೇರಿಮಠದ ಶಿವಬಸವ ಮಹಾಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆ
ಜಮಖಂಡಿ 29: ಹಾವೇರಿ ಹುಕ್ಕೇರಿಮಠದ ಶಿವಬಸವ ಮಹಾಶಿವಯೋಗಿಗಳು ಹಾಗೂ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ವೀರಶೈವ ಲಿಂಗಾಯತ ಸಮಾಜ ಎಡಗೈ ಬಲಗೈಯಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿರುವವರು, ಇವರು ದೇಹದಿಂದ ಎರಡಾದರೂ ಆತ್ಮದಿಂದ ಒಂದೇ ಆಗಿರುವುದು. ಸಮಾಜ ದೇವೋಭವ ಎಂದು ಬಾಳಿ ಬದುಕಿದವರು ಎಂದು ಓಲೇಮಠದ ಡಾ. ಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ನಗರದ ಓಲೇಮಠದ ಆವರಣದಲ್ಲಿ ಹಾವೇರಿ. ಹುಕ್ಕೇರಿಮಠದ ಶಿವಬಸವ ಮಹಾಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.ಸಮಾಜ, ಸಮಾಜವೆಂದು ಸುಸಮಾಜ ನಿರ್ಮಾಣಕ್ಕಾಗಿ ಜೀವ ಸವೆಸಿದ, ವಿಶ್ವಸ್ಯ ಗೋ ಮಾತರಂ ಎಂಬಂತೆ ಗೋರಕ್ಷಣೆಗಾಗಿ ಗೋಶಾಲೆಯನ್ನು, ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸುಮಾರು 150 ವರ್ಷಗಳ ಹಿಂದೆಯೇ ದೂರದೃಷ್ಠಿಯಿಂದ ವಿದ್ಯಾಸಂಸ್ಥೆಗಳನ್ನು ನಿರ್ಮಿಸಿ, ಭರತ ಭೂಮಿ ಕೃಷಿ ಪ್ರಧಾನ ದೇಶವಾದ ಹಿನ್ನೆಲೆಯಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಪ್ರೇರಣೆ ನೀಡಿ, ಅಖಂಡ ಭಾರತದಾದ್ಯಂತ ವಿಶೇಷವಾಗಿ ಕರ್ನಾಟಕದ ಬಹುತೇಕ ಮಠಗಳಿಗೆ ಮಠಾಧಿಪತಿಗಳನ್ನು ತಯಾರು ಮಾಡುವ ಪಾಠಶಾಲೆ ಶಿವಯೋಗಮಂದಿರದ ಸಂಸ್ಥಾಪಕರು.ಮಠಾಧಿಪತಿಗಳಷ್ಟೇ ಅಲ್ಲದೇ ಪಂ.ಪಂಚಾಕ್ಷರಿ ಗವಾಯಿಗಳು, ಪಂ. ಪುಟ್ಟರಾಜ ಕವಿ ಗವಾಯಿಗಳಂತಹ ಸಂಗೀತ ಸಾಧಕರನ್ನು, ಸಮಾಜವನ್ನು ಸತ್ಪಥದತ್ತ ಕೊಂಡಯ್ಯುವ ಶ್ರೇಷ್ಠ ಪ್ರವಚನಕಾರರನ್ನು, ಧರ್ಮ ಪ್ರಸಾರಕರನ್ನು, ಪ್ರಚಾರಕರನ್ನು ನೀಡಿ, ಸಂಸ್ಕಾರ-ಸಂಸ್ಕೃತಿಯನ್ನು ಬಿತ್ತಿದ ಮಹಾತ್ಮ ಯುಗಪುರುಷ, ದ್ವಿತೀಯ ಬಸವಣ್ಣ ಹಾನಗಲ್ಲ ಕುಮಾರೇಶ್ವರರ ಶ್ರೀಗಳು. ಅವರ ಸಕಲ ಕಾರ್ಯಕ್ಕೂ ಬೆನ್ನೆಲುಬಾಗಿ ನಿಂತ ಹಾವೇರಿ ಶಿವಬಸವ ಮಹಾಸ್ವಾಮಿಗಳು ಎಂದರು.
ಬಾಕ್ಸ : ನಗರದ ಮುಧೋಳ ರಸ್ತೆಯ ವೀರಭದ್ರೇಶ್ವರ ದೇವಸ್ಥಾನದಿಂದ ತೆರದ ಅಲಂಕೃತ ವಾಹನದಲ್ಲಿ ಹಾವೇರಿ ಹುಕ್ಕೇರಿ ಮಠದ ಶಿವಬಸವ ಮಹಾಶಿವಯೋಗಿಗಳ ಮೂರ್ತಿಯನ್ನು ವಾಧ್ಯ ಮೇಳ ಹಾಗೂ ಮಹಿಳೆಯರ ಆರತಿಯೊಂದಿಗೆ ಭವ್ಯ ಮೆರವಣಗೆಯ ಮೂಲಕ ಮಠದ ಆವರಣದವರೆಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಕಾಡಪ್ಪ ದೇಸಾಯಿ ನಾಗಪ್ಪ ಮುತ್ತಕ್ಕನವರ ಶ್ರೀಶೈಲ ಗೊಂಗನವರ ಅಪ್ಪಾಸಾಬ ದೇವರವರ ಮಲ್ಲಯ್ಯ ಮಠಪತಿ ರಾಚಯ್ಯ ಮಠಪತಿ ಹಾವೇರಿಯ ರಾಜಯೋಗಿ ಶಿವಬಸವ ಸೇವಾ ಸಮಿತಿಯ ಸಿದ್ದಲಿಂಗಪ್ಪ ಮೆಣಸಿಹಾಳ ಲಿಂಗರಾಜ ಸೆಡೆನೂರ ಕಾಂತೇಶ ತಳವಾರ ಬಸವರಾಜ ಬೆಳಗಾವಿ ಮಲ್ಲಪ್ಪ ಗೊಂಗನವರ ಶ್ರೀಶೈಲ ನ್ಯಾಮಗೌಡ ಶ್ರೀಶೈಲ ದೂಳಶೆಟ್ಟಿ ಚಂದು ನಾಗರಾಳ ಶಿವಪ್ಪ ಮದಾಪೂರ ಬಸಪ್ಪ ರಾಂಬಳ್ಳಿ ಸುಭಾಷ ದೇವರವರ ಬಸಯ್ಯ ಹಿರೇಮಠ ಸಗರೆಪ್ಪ ಅತ್ತೇಪ್ಪನವರ ಶಂಕರ ಹೊಳೇಪ್ಪಗೋಳ ಮಂಜು ಗೌಡನವರ ಸಂಗಮೇಶ ಕೋಲಾರಮಠ ಸಂಜು ಗೌಡನವರ ಚಿನ್ನಕ್ಕ ಹಿರೇಮಠ ಅಶ್ವಿನಿ ಕೋಲಾರಮಠ ಶಿಲ್ಪಾ ತಿಪ್ಪಿಮಠ ಮಂಗಲಾ ಕಲಕತ್ತಿಮಠ ಶ್ರೀದೇವಿ ಕಲಕತ್ತಿಮಠ ಗೀತಾ ಮಹಾಲಿಂಗಪೂರಮಠ ಉಷಾ ಮಸಳಿ ಪ್ರೀಯಾ ಮಸಳಿ ಶೇಖವ್ವ ಚೌತ್ರಿ ಗೀತಾ ಗೌಡನವರ ಮಾದೇವಿ ಸರೂರ ಇತರರು ಇದ್ದರು.