ಅಥಣಿ

ಅಶ್ವಾರೂಢ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪನೆ

ಅಶ್ವಾರೂಢ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪನೆ

ಅಥಣಿ 19: ಅಥಣಿಯ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಮಹಾರಾಜರ ಅಶ್ವಾರೂಢ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ನಮ್ಮ ಕನಸು ಶಿವ ಜಯಂತಿಯಂದು ಈಡೇರಿದೆ ಎಂದು ಮರಾಠಾ ಸಮಾಜದ ಹಿರಿಯ ಮುಖಂಡ ಭಾವುಸಾಹೇಬ ಜಾಧವ ಹೇಳಿದರು.   

ಅವರು ಶಿವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 2004 ರಲ್ಲಿ ಈ ವೃತ್ತಕ್ಕೆ ಸಿವಾಜಿ ಮಹಾರಾಜರ ಹೆಸರು ಇಡಲಾಯಿತು ನಂತರ 2015 ರಲ್ಲಿ ಈ ವೃತ್ತದಲ್ಲಿ ಶಿವಾಜಿ ಮಹಾರಾಜರ ಅಶ್ವಾರೂಢ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಸಂಕಲ್ಪ ಮಾಡಿಕೊಂಡಾಗ ಸ್ಥಳೀಯ ಮರಾಠಾ ಸಮಾಜದ ದಿ.ಅಣ್ಣಾಸಾಹೇಬ ಪಾಟೀಲ ಸ್ಮರಣಾರ್ಥ ಅವರ ಮಕ್ಕಳಾದ ಬಾಳಾಸಾಹೇಬ, ಶಿವಾಜಿ ಮತ್ತು ರಾಜಾರಾಮ ಪಾಟೀಲ ಈ ಮೂವರು ಸ್ಥಳ ದಾನ ಮಾಡಿದರು ಇದರ ಪರಿಣಾಮವೇ ಇಂದು ಶಿವಾಜಿ ಮಹಾರಾಜರ ಭವ್ಯ ಪುತ್ಥಳಿ ಅನಾವರಣಗೊಂಡಿದೆ ಎಂದರು.  

ಶಿವ ಪ್ರತಿಷ್ಠಾನದ ವಿನಾಯಕ ದೇಸಾಯಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ 394 ನೇ ಜಯಂತಿ ಅಂಗವಾಗಿ ಅಥಣಿ ಜನತೆಯ ಸಹಕಾರದಿಂದ ಶಿವಾಜಿ ಮಹಾರಾಜರ 23 ಅಡಿ ಎತ್ತರದ ಕಂಚಿನ ಪುತ್ಥಳಿ ಶಿವಾಜಿ ವೃತ್ತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಕೂಡಿಸಲಾಗಿದ್ದು, ಲೋಕಸಭಾ ಚುನಾವಣೆ ನಂತರ ಶಿವಾಜಿ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.  

 ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ, ಬಿಜೆಪಿ ಧುರೀಣ ಮುರುಘೇಶ ಕುಮಠಳ್ಳಿ, ದಿಗ್ವಿಜಯ ಪವಾರ ದೇಸಾಯಿ, ಪುರಸಭಾ ಸದಸ್ಯರಾದ ದತ್ತಾ ವಾಸ್ಟರ್, ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ರಾವಸಾಹೇಬ ಐಹೊಳೆ, ವೀಲೀನರಾಜ ಯಳಮೇಲಿ ಉಪಸ್ಥಿತರಿದ್ದರು.  

ಧುರೀಣರಾದ ಎಲ್‌.ಜಿ.ಪಾಟೀಲ, ಸಂದೀಪ ಪಾಟೀಲ, ನಾನಾಸಾಹೇಬ ಅವತಾಡೆ, ಪ್ರಕಾಶ ಕದಂ, ರವಿ ದೇಸಾಯಿ, ಸಿದ್ದು ಪಾಟೀಲ, ಸಂಜೀವ ಜಾಧವ, ಅವಿನಾಶ ಜಾಧವ, ಪ್ರಭಾಕರ ಚವ್ಹಾಣ, ಸಚೀನ್ ದೇಸಾಯಿ, ನಾನಾಸಾಹೇಬ ಜಾಧವ, ಡಾ.ರಾಹುಲ ಭೋಸಲೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ