ಸಿಎಂ ಕಾರ್ಯಕ್ರಮದ ಸಿದ್ಧತೆ ಪರೀಶೀಲನೆ
ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನಯೆ ಎರಡನೆ ಹಂತದ ಕಾಮಗಾರಿಗೆ ಚಾಲನೆ
ತಾಳಿಕೋಟೆ22: ತಾಲೂಕಿನ ಕೊಡಗಾನೂರದಲ್ಲಿ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಏ.26 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಹೇಳಿದರು.
ತಾಲೂಕಿನ ಕೊಡಗಾನೂರ ಬಳಿ ಮುಖ್ಮಮಂತ್ರಿಗಳ ಕಾರ್ಯಕ್ರಮದ ಹಿನ್ನಲೆಯಲ್ಲಿ ಸಿದ್ಧತೆಗಳನ್ನು ಪರೀಶೀಲಿಸಿ ಮಾತನಾಡಿದ ಅವರು, ದೇವರ ಹಿಪ್ಪರಗಿ ಮತಕ್ಷೇತ್ರದ ಬಹುನೀರಿಕ್ಷಿತ ಯೋಜನೆಯಾದ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ 796 ಕೋಟಿ ಅನುದಾನ ಮಂಜುರಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಸ್ಕಾ-್ವಡಾ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಕಾಮಗಾರಿ ಇದಾಗಿದ್ದು ಏ.26 ರಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಮುಖಮಂತ್ರಿಗಳ ಜೊತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಭಾಗವಹಿಸಲಿದ್ದಾರೆ. ವೇದಿಕೆ ಹಾಗೂ ಹೆಲಿಪ್ಯಾಡ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಒಟ್ಟು 55 ಸಾವಿರ ಹೆಕ್ಟರ್ ಜಮೀನುಗಳಿಗೆ ನೀರು ಹರಿಸುವ ಕಾಮಗಾರಿ ಆರಂಭವಾಗಲಿದ್ದು, ಒಂದು ವರ್ಷದಲ್ಲಿ ರೈತರ ಜಮೀನುಗಳಿಗೆ ನೀರು ಹರಿಯಲಿದೆ ಎಂದ ಅವರು ನಿಮಾಣ ಕಾರ್ಯದಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಿಎಂಗೆ ಗೋವು ದಾನ :- ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿಯ ಏರಡನೇ ಹಂತದ ಕಾಮಗಾರಿಗೆ ಅಗತ್ಯ ಅನುದಾನ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಏತ ನೀರಾವರಿ ಯೋಜನೆಯ ಫಲಾನುಭವಿ ರೈತರು ಒಟ್ಟಾಗಿ ಗೋವು ದಾನ ನೀಡುವದಾಗಿ ತಿಳಿಸಿದರು. ರೈತರ ಹೊಲಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಕೊಂಡಿದ್ದಾರೆ. ಅವರಿಗೆ ನಾವೇನು ಕೊಡಲು ಸಾಧ್ಯವಿಲ್ಲ. ಹಿಗಾಗಿ ಯೋಜನೆಯ ರೂವಾರಿಗಳಾದ ಶಾಸಕ ಸೋಮನಗೌಡ ಪಾಟೀಲ ಅವರಿಗೆ ಜವಾರಿ ಜೋಡೆತ್ತುಗಳು ಹಾಗೂ ಮುಖ್ಯಮಂತ್ರಿಗಳಿಗೆ ಗೋವು ದಾನವನ್ನು ನೀಡುವದಾಗಿ ರೈತರು ತಿಳಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಕೆಬಿಜೆಎನ್ಎಲ್ ಕಾರ್ಯಪಾಲಕ ಅಬಿಯಂತರ ಬಿ.ಟಿ.ಪಾಟೀಲ, ಸಹಾಯಕ ಇಂಜಿನಿಯರ್ ವಿಶ್ವನಾಥ ಬಿರಾದಾರ, ಡಿವಾಯ್ಎಸ್ಪಿ ಅರುಣಕುಮಾರ ಕೋಳೂರ, ಸಿಪಿಆಯ್ ಆನಂದ ವಾಗ್ಮೋಡೆ, ಮುಖಂಡರಾದ ಸಂಗನಗೌಡ ಹೆಗರಡ್ಡಿ, ಬಸನಗೌಡ ಬಿರಾದಾರ, ಎಸ್.ಎಮ್.ಸಜ್ಜನ, ಶರಣಗೌಡ ಗೋಂಟಖಂಡ್ಕಿ, ರಾಮನಗೌಡ ನಾವದಗಿ, ಮತ್ತುಗೌಡ ಮಾಳಿ ಸೇರಿದಂತೆ ಇತರರು ಇದ್ದರು.