ಸಿವಿಲ್ ಕಾಮಗಾರಿಗಳ ಪರಿಶೀಲನೆ
ಇಂಡಿ 12: ತಾಲೂಕಿನ ಅಗರಖೇಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣದ ಕಾರ್ಯಪ್ರಗತಿಯನ್ನು ಧಾರವಾಡದ ಸಿಸ್ಲೇಪ ನಿರ್ದೇಶಕರಾದ ಬಿ.ಎಸ್. ರಘುವೀರ ಅವರು ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಕಟ್ಟಡದ ಕಾಮಗಾರಿ ಕೆಲಸಗಳ ಯೋಜನೆ,ಕಟ್ಟಡದ ಸ್ಥಿತಿ,ಬಳಸಿದ ಸಾಮಗ್ರಿಗಳ ಗುಣಮಟ್ಟ ಮುಂತಾದವನ್ನು ಪರಿಶೀಲಿಸಿ ಗಮನ ಸೆಳೆದರು.ಇದೇ ಸಂದರ್ಭದಲ್ಲಿ ಸಂಪೂರ್ಣ ಕಾಮಗಾರಿಯ ಕುರಿತಾಗಿ ಮಾಹಿತಿ ಪಡೆದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇಂಡಿ ಬಿಇಓ ವಸಂತ ರಾಠೋಡ,ಸಿವಿಲ್ ಕಾಮಗಾರಿ ನೋಡಲ್ ಅಧಿಕಾರಿ ಎ.ಜಿ. ಚೌಧರಿ,ಸಿ ಆರ್.ಪಿ. ಎಂ ಎಸ್ ಚವ್ಹಾಣ,ಶಾಲಾ ಮುಖ್ಯ ಶಿಕ್ಷಕ ಬಿ.ಎನ್. ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.