ಗೋಕಾಕ್

ವಿಜ್ಞಾನಿ ಶಿವಾನಂದ ಕಮತಗೆ ಮೌನಮಲ್ಲಿಕಾರ್ಜುನ ಶ್ರೀಗಳಿಂದ ಸತ್ಕಾರ

ವಿಜ್ಞಾನಿ ಶಿವಾನಂದ ಕಮತಗೆ ಮೌನಮಲ್ಲಿಕಾರ್ಜುನ ಶ್ರೀಗಳಿಂದ ಸತ್ಕಾರ

ಲೋಕದರ್ಶನ ವರದಿ

ಬೆಟಗೇರಿ 01: :ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿ ಸಾಧನೆ ಹಿನ್ನಲೆಯ ಇಸ್ರೋ ವಿಜ್ಞಾನಿಗಳ ತಂಡದಲ್ಲ್ಲಿರುವ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ವಿಜ್ಞಾನಿ ಶಿವಾನಂದ ಮಲ್ಲಪ್ಪ ಕಮತ ಅವರನ್ನು ಗೋಕಾಕ ತಾಲೂಕಿನ ಮಮದಾಪೂರ ಮೌನ ಮಲ್ಲಿಕಾರ್ಜುನ ಮಠದಲ್ಲಿ ಈಚೆಗೆ ಮೌನ ಮಲ್ಲಿಕಾಜರ್ುನ ಶಿವಯೋಗಿಗಳು ಶಾಲು ಹೊದಿಸಿ ಸನ್ಮಾನಿಸಿ ಆರ್ಶಿವದಿಸಿದರು. 

  ಸ್ಥಳೀಯ ಶ್ರೀಮಠದ ಶರಣ ಮಂಜುನಾಥ ಶರಣರು ಮಾತನಾಡಿ, ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಭಾರತದ ಹಾಗೂ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಸ್ಥಳೀಯ ವಿಜ್ಞಾನಿ ಶಿವಾನಂದ ಕಮತ ಅವರ ಸಾಧನೆಯನ್ನು ಶ್ಲಾಘಿಸಿದರು. ಸ್ಥಳೀಯ ಶ್ರೀಮಠದ ಭಕ್ತರು, ಹಿರಿಯ ನಾಗರಿಕರು, ಯುವಕರು, ಇದ್ದರು. 

ಸುದ್ದಿ ಓದಿ