ದ್ರಾಕ್ಷಿ ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯ
ತಾಳಿಕೋಟೆ 29: ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಪ್ರಕೃತಿ ವಿಕೋಪ ಉಂಟಾಗಿ ದ್ರಾಕ್ಷಿ ಬೆಳೆ ಹಾಳಾಗಿದ್ದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ದ್ರಾಕ್ಷಿ ಬೆಳೆದ ರೈತರು ತಹಶಿಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಇತ್ತಿಚಿಗೆ ಪ್ರಕೃತಿ ವಿಕೋಪದಿಂದ ವಾಯುಭಾರ ಕುಸಿತ ಆಗಿ ಅಕಾಲಿಕ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ನಿರ್ಮಾಣವಾಗಿ ತಾಲೂಕಿನಾಧ್ಯಂತ ದ್ರಾಕ್ಷಿ ಬೆಳೆ ಹಾಳಾಗಿದೆ. ತಾಲೂಕಿನ ಗೋಟಖಂಡ್ಕಿ, ಭಂಟನೂರ, ಹೂವಿನಹಳ್ಳಿ, ಹೊಸಹಳ್ಳಿ, ಕಾರಗನೂರ, ತುಂಬಗಿ, ಪತ್ತೆಪೂರ, ಕೊಣ್ಣೂರ, ತಮದಡ್ಡಿ, ಸಾಸನೂರ, ಬಿಂಜಲಬಾವಿ, ಕೆಸರಟ್ಟಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಂದು ವಾರಗಳ ಕಾಲ ಸುರಿದ ಅಕಾಲಿಕ ಮಳೆಯಿಂದ ರೈತರ ಹಲವು ಬೆಳೆಗಳು ಹಾಳಾಗಿವೆ. ಇದರ ಜೊತೆಗೆ ಅಕಾಲಿಕ ಮಳೆ ಮತ್ತು ಮೋಡಕವಿದ ವಾತಾವರಣ, ದಟ್ಟ ಮಂಜು ಇತ್ಯಾದಿ ಪ್ರಾಕೃತಿಕ ವೈಪರಿತ್ಯಗಳಿಂದ 150 ಕ್ಕೂ ಹೆಚ್ಚು ಎಕರೆ ದ್ರಾಕ್ಷಿ ಬೆಳೆ ಹೂ ಬಿಡುವ ಮತ್ತು ಕಾಯಿ ಹಿಡಿಯುವ ಹಂತದಲ್ಲಿದ್ದು ಮಂಜಿನಿಂದ ಹೂವುಗಳು ಕರಗಿ ಹೋಗಿದೆ ಮತ್ತು ಕಾಯಿಗಳು ಹಿಡಿಯುವ ಸಮಯದಲ್ಲೇ ಸಂಪೂರ್ಣವಾಗಿ ಹಾನಿಯಾಗಿದೆ. ಲಕ್ಷಾಂತರ ಖರ್ಚು ಮಾಡಿ ದ್ರಾಕ್ಷಿ ಬೆಳೆಯನ್ನು ಬೆಳೆದ ರೈತರು ಸಾಲದ ಸೂಲದಲ್ಲಿ ಸಿಲುಕುವಂತೆ ಮಾಡಿದೆ. ಇಲ್ಲಿಯವರೆಗೂ ಸರ್ಕಾರದ ಅಧಿಕಾರಿಗಳು ಸ್ಥಾನಿಕ ಚೌಕಾಶಿ ಮಾಡಿಲ್ಲದಿರುವದು ರೈತರ ಆತಂಕಕ್ಕೆ ಕಾರಣವಾಗಿದೆ.
ಆದ್ದರಿಂದ ತಾವುಗಳು ಅಧಿಕಾರಿಗಳಿಂದ ಸ್ತಾನಿಕ ಪರೀಶೀಲನೆ ನಡೆಸಿ ದ್ರಾಕ್ಷಿ ಬೆಳೇಯಿಂದ ಆಗಿರುವ ನಷ್ಟದ ಕುರಿತು ಸರಕಾರಕ್ಕೆ ವಿವಿರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ರೈತರಿಗೆ ಪರಿಹಾರವನ್ನು ಒದಗಿಸಲು ಸೂಕ್ತ ಕ್ರಮವನ್ನು ಕೈಕೊಳ್ಳಬೇಕು ಎಂದು ಮನವಿಯನ್ನು ಸಲ್ಲಿಸಿದರು. ತಹಶಿಲ್ದಾರ ಅನೀಲಕುಮಾರ ಢವಳಗಿ ಮನವಿಯನ್ನು ಸ್ವಿಕರಿಸಿದರು.
ಈ ಸಂದರ್ಭದಲ್ಲಿ ರೈತರಾದ ಸೋಮನಗೌಡ ಹಾದಿಮನಿ, ಶಾಂತಗೌಡ ಹಾದಿಮನಿ, ಕುಂಠಪ್ಪಗೌಡ ಪಾಟೀಲ, ನಿಂಗನಗೌಡ ಪಾಟೀಲ, ರಾಮಚಂದ್ರ ನಾಯ್ಕೋಡಿ, ಮಡಿವಾಳಪ್ಪ ಹಡಪದ, ಶಾಂತಗೌಡ ಬಿರಾದಾರ, ದೇವಿಂದ್ರ ಬಿರಾದಾರ, ರಾಮನಗೌಡ ಬಿರಾದಾರ, ಶಿವನಗೌಡ ಹೆಗರಡ್ಡಿ, ರಾಮನಗೌಡ ಭಂಟನೂರ, ರಾಮನಗೌಡ ಬಿರಾದಾರ, ಶರಣಗೌಡ ಪಾಟೀಲ, ಬಸಣ್ಣ ಚೌದ್ರಿ, ಶಿವನಗೌಡ ಪಾಟೀಲ, ಚಂದ್ರಶೇಖರ ಬಿರಾದಾರ, ಅಂಬ್ರೇಶಪ್ಪಗೌಡ ಕೋಣ್ಯಾಳ, ವಾಸುದೇವ ಹೆಬಸೂರ, ಕಾಶಿರಾಯಗೌಡ ಕೋಣ್ಯಾಳ, ವೆಂಕನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.