ಶಿಗ್ಗಾವ್

ವೈದ್ಯಕೀಯ ತುತು ಪರಿಸ್ಥಿತಿ ಘೋಷಣೆ ಮಾಡಲು ಒತ್ತಾಯ

ವೈದ್ಯಕೀಯ ತುತು  ಪರಿಸ್ಥಿತಿ ಘೋಷಣೆ ಮಾಡಲು ಒತ್ತಾಯ

ಶಿಗ್ಗಾವಿ 22: ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸಕರ್ಾರ ವಿಫಲವಾಗಿದೆ ಆದರಿಂದ ಸಕರ್ಾರ ಕೂಡಲೇ ವೈದ್ಯಕೀಯ ತುತರ್ು ಪರಿಸ್ಥಿತಿಯನ್ನು ಘೋಷಣೆ ಮಾಡಬೇಕು ಎಂದು ನ್ಯಾಯವಾದಿ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದಶರ್ಿ ಹನುಮಂತ ಬಂಡಿವಡ್ಡರ ಸಕರ್ಾರವನ್ನು ಒತ್ತಾಯಿಸಿದರು.ಪಟ್ಟಣದ ಪಕ್ಷದ ಕಾಯರ್ಾಲಯದಲ್ಲಿ ಕಾಂಗ್ರಸ್ ಪಕ್ಷದ ವತಿಯಿಂದ ಭಾರತದ ಧೀಮಂತ ನಾಯಕ ಹಾಗೂ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ತಾಲೂಕಿನ ವರದಿಗಾರರಿಗೆ ಸಹಾಯಾರ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದರೆ ಅದಕ್ಕೆ ರಾಜೀವ್ ಗಾಂಧೀಯವರ ಅಭಿವೃದ್ದಿ ಪರ ಕಾರ್ಯಕ್ರಮಗಳೇ ಕಾರಣವಾಗಿವೆ, ಇಂದು ಕೋವಿಡ್ನಿಂದ ಸಾಕಷ್ಟು ಜನ ಮರಣ ಹೊಂದುತ್ತಿದ್ದಾರೆ ಇದಕ್ಕೆ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ನಿಷ್ಕಾಳಜಿಯೇ ಕಾರಣವಾಗಿದೆ, ಒಂದನೆ ಅಲೆಯನ್ನು ಅನುಭವಿಸಿದ ನಮಗೆ 2 ನೇ ಅಲೆಗೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಸಕರ್ಾರ ತೆಗೆದುಕೊಳ್ಳಬೇಕಿತ್ತು, ಅಲ್ಲದೆ ವೈದಾಧಿಕಾರಿಗಳ ಕೊರತೆ ಇದ್ದು ಕೂಡಲೇ ವೈಧ್ಯರ ನೇಮಕವಾಗಬೇಕು, ಲಾಕ್ಡೌನಿಂದ ಜನತೆ ತಿಂಗಳಾನುಗಟಲೇ ಮನೆಯಲ್ಲಿಯೇ ಕುಳಿತಿದೆ ಇಂತಹ ಸಮಯದಲ್ಲಿ ಅವರಿಗೆ ವಿಶೇಷ ಪ್ಯಾಕೇಜ ಘೋಷಣೆ ಮಾಡಿದ್ದು ಅದು ಬೋಗಸ್ ಆಗಿದೆ, ಜನತೆ ದುಡಿಮೆ ಇಲ್ಲದೆ ಉಪವಾಸ ಜೀವನ ಮಾಡುತ್ತಿದ್ದಾರೆ, ಸಕರ್ಾರ ಪ್ರತಿ ಬಡ ಕುಟುಂಬಕ್ಕೆ 20 ಸಾವಿರ ರೂ ಆಥರ್ಿಕ ಸಹಾಯ ನೀಡಬೇಕು, ವರಿದಿಗಾರರಿಗೆ ಹಾಗೂ ಆಶಾ ಕಾರ್ಯಕತ್ರೆಯರಿಗೆ ಸೇರಿದಂತೆ ಉಳಿದ ಕಾಮರ್ಿಕರಿಗೂ ಸಕರ್ಾರ ವಿಶೇಷ ಪ್ಯಾಜೇಜ್ ಘೋಷಣೆ ಮಾಡಬೇಕು, ಪಟ್ಟಣದಲ್ಲಿ ಆಥರ್ಿಕವಾಗಿ ಸದೃಡರಿರುವರು ಇಂತಹ ಸಮಯದಲ್ಲಿ ಬಡವರ ಸಹಾಯಕ್ಕೆ ಮುಂದೆ ಬರಬೇಕು ಎಂದರು.

ತಾಲೂಕಾ ವಕ್ತಾರ ಮಂಜುನಾಥ ಮಣ್ಣಣ್ಣವರ ಮಾತನಾಡಿ, ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿ ರಾಜೀವ ಗಾಂಧೀ, ಇಂದಿನ ಆನ್ಲೈನ್ ವ್ಯವಸ್ಥೆ ರಾಜೀವ ಗಾಂಧೀಯವರ ನಿರ್ಣಯವೇ ಕಾರಣವಾಗಿದೆ, ಇಂದು ಕೋರೊನಾ ನಿರ್ವಹಣೆಯಲ್ಲಿ ಸಕರ್ಾರ ಸೋತಿದೆ, ಹೊಸ ರೋಗಗಳು ಹುಟ್ಟುಕೊಳ್ಳುತ್ತಿವೆ, ಆದರಿಂದ ಸಕರ್ಾರ ಜನತೆಗೆ ವೈಧ್ಯಕೀಯ ಸಹಕಾರವನ್ನು ರಾಜಕೀಯ ಬಿಟ್ಟು ಕೋಡಬೇಕು, ನಮ್ಮ ಪಕ್ಷ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ, ಸಕರ್ಾರ ವ್ಯವಸ್ಥಿತವಾಗಿ ಇದನ್ನು ನಿಭಾಯಿಸಬೇಕು ಮತ್ತು ವರದಿಗಾರರಿಗೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದರು. ಗ್ರಾಪಂ ಸದಸ್ಯ ಬಿ ಸಿ ಪಾಟೀಲ್, ಸಾಮಾಜಿಕ ಜಾಲತಾಣದ ಸಂಚಾಲಕ ಮಹಾಂತೇಶ ಸಾಲಿ, ವಿದ್ಯುತ್ ಗುತ್ತಿಗೆದಾರರ ಸಂಘದ ಅದ್ಯಕ್ಷ ನಾಗಭೂಷಣ ಹಿರೇಮಠ, ವಿರೇಶ ಯಲಿಗಾರ ಉಪಸ್ಥಿತರಿದ್ದರು 

ಸುದ್ದಿ ಓದಿ