ಯರಗಟ್ಟಿ

ಅಮಾಯಕ ಜನ ಇನ್ನೂ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ: ಜೂಗನವರ ವಿಷಾದ

ಅಮಾಯಕ ಜನ ಇನ್ನೂ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ: ಜೂಗನವರ ವಿಷಾದ

ಯರಗಟ್ಟಿ 18: ವೈಜ್ಞಾನಿಕವಾಗಿ ನಾವು ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಮೂಢನಂಬಿಕೆಗಳು ವಿರಾಜಮಾನವಾಗಿ ರಾರಾಜಿಸುತ್ತಿವೆ. ಅಮಾಯಕ ಜನರು ಇನ್ನೂ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ನಿವೃತ್ತ ಶಿಕ್ಷಕ ಆರ್ ಎಲ್ ಜೂಗನವರ ವಿಷಾದಿಸಿದರು.

ಪಟ್ಟಣದ ಬಸವೇಶ್ವರ ಪ್ರೌಢಯಲ್ಲಿ ಶನಿವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇವರ ಆಯೋಜಿಸಿದ್ದ ಮೌಢ್ಯ ನಿವಾರಣೆಗಾಗಿ ಪವಾಡ ರಹಸ್ಯ ಬಯಲು  ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರು ವಿದ್ಯಾವಂತರಾಗುತ್ತಿರುವುದು ಸಂತೋಷದ ಸಂಗತಿ. ಅಕ್ಷರಸ್ಥರಾಗುತ್ತಿದ್ದಂತೆ ಮೌಢ್ಯವೂ ಹೆಚ್ಚಾಗುತ್ತಿರುವುದು ದುರಂತ. ದೇವರ ಹೆಸರಿನಲ್ಲಿ ಮೋಸ ಮಾಡುವವರು, ಶಾಸ್ತ್ರ, ಭವಿಷ್ಯ ಹೇಳುವಂತಹ ಆಚರಣೆಗಳು ಸಮಾಜದಲ್ಲಿ ಕಾಣಿಸುತ್ತಿವೆ ಎಂದರು.

ಎಲ್ಲಿಯ ತನಕ ಮೋಸ ಹೋಗುವವರು, ಇಂತಹ ಆಚರಣೆಯನ್ನು ನಂಬುವವರು ಇರುತ್ತಾರೋ ಅಲ್ಲಿಯವರೆಗೂ ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವವರೂ ಇರುತ್ತಾರೆ ಎಂದು ವೈಜ್ಞಾನಿ ಪರಿಷತ್ ತಾಲೂಕಾ ಅಧ್ಯಕ್ಷ ಡಾ. ಕುಮಾರ ದಾಸರ ಎಚ್ಚರಿಸಿದರು. ಮಾಧ್ಯಮಗಳು ಕೂಡ ಮೂಢನಂಬಿಕೆಗಳನ್ನು ವಿಜೃಂಭಣೆಯಿಂದ ತೋರಿಸುತ್ತಿವೆ. ಮೂಢನಂಬಿಕೆಗಳಿಂದ ಸಾಕಷ್ಟು ಮೋಸ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ನಾವು ಮೌಢ್ಯದಿಂದ ಆಚೆ ಬರಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಪಿ. ಎಚ್. ಪಾಟೀಲ ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳು ಇಂದಿಗೂ ಆಚರಣೆಯಲ್ಲಿವೆ. ಜನರೂ ನಂಬುತ್ತಿದ್ದಾರೆ. ಗ್ರಾಮೀಣ ಭಾಗದ ಅನಕ್ಷರಸ್ಥ ಜನರು ಇವೆಲ್ಲವನ್ನು ನಂಬಿ ಮೋಸ ಹೋಗುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಇಂದು ನಡೆಯುತ್ತಿರುವ ಕಾರ್ಯಕ್ರಮ ಅರ್ಥಗರ್ಭಿತವಾಗಿದೆ ಎಂದು ಹೇಳಿದರು.

ಪವಾಡ ರಹಸ್ಯ ಬಯಲು ಮಾಡುವ ಕರ್ನಾಟಕ ವೈಜ್ಞಾನಿಕ ಪರಿಷತ್ ಮೂಢನಂಬಿಕೆಗಳು ಯಾವ ರೀತಿ ಆಚರಣೆ ಆಗುತ್ತಿವೆ ಮತ್ತು ಅಮಾಯಕರನ್ನು ಯಾವ ರೀತಿ ನಂಬಿಸಿ ವಂಚನೆ ಮಾಡುತ್ತಾರೆ ಎಂಬ ಬಗ್ಗೆ ಜಾಗೃತಿ ಮೂಡಿಸಿದರು.

ಸಂಸ್ಥೆಯ ಅಧ್ಯಕ್ಷ ಆರ್. ಜಿ. ದೇವರೆಡ್ಡಿ , ಮುಖ್ಯೋಪಾಧ್ಯಯ ಬಿ. ಎಸ್. ಆಲದಕಟ್ಟಿ, ಡಿ. ಎಮ್. ಪಾಟೀಲ, ಎನ್. ಎಸ್. ಕಾಂಬ್ಳೆ, ಎಸ್. ಜಿ. ಸತ್ತಿಗೇರಿ, ವಿ. ಆರ್. ಅಂತಾಪೂರ, ಎಲ್. ಎಚ್. ಹೊನ್ನಾಪುರ, ಆರ್. ಬಿ. ಗಾಣಿಗೇರ, ಎಂ. ಎಸ್. ಗುಘರನಟ್ಟಿ, ಜಿ. ಆಯ್. ದಮ್ಮಣಗಿ, ಎಂ. ವಿ. ಸೊನ್ನದ ಸೇರಿದಂತೆ ಅನೇಕ ಇದ್ದರು 

ಸುದ್ದಿ ಓದಿ