ರೈತರಿಗೆ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದರ ಕುರಿತು ಮಾಹಿತಿ
ಯರಗಟ್ಟಿ 25: ಮುಂಗಾರು ಹಂಗಾಮಿನಲ್ಲಿ ಬೆಳೆಗಳು ಉತ್ತಮ ಸ್ಥಿತಿಯಲ್ಲಿ ಇದ್ದು ತಾಲೂಕಿನಾದ್ಯಂತ ಕಳೆದ ಎಂಟು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳೆಗಳನ್ನು ರೋಗ ಮತ್ತು ಕೀಟ ಬಾಧೆಯಿಂದ ರಕ್ಷಿಸಲು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ವಿಶೇಷ ತಿಳಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ ಪ್ರತಿ ತಾಲೂಕಿನ 10,000 ರೈತರಿಗೆ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದರ ಕುರಿತು ಇ ಗವರ್ನನ್ಸ್ ಸಹಾಯದಿಂದ ಗ್ರೂಪ್ ಕಾಲ್ ಮುಖಾಂತರ ಮಾಹಿತಿ ನೀಡಿದರು.
ಅಲ್ಲಲ್ಲಿ ಕಪ್ಪು ಜಮೀನಿನಲ್ಲಿ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿದ್ದಲ್ಲಿ ಬಸಿ ಕಾಲುವೆ ಮುಖಾಂತರ ನೀರನ್ನು ಹೊರಗೆ ಹಾಕುವಂತೆ ಕ್ರಮ ವಹಿಸಬೇಕು, ತಂಪು ಹೆಚ್ಚಾಗಿ ಬೆಳೆಗಳು ಬೆಳವಣಿಗೆ ಹೊಂದಲು ಶಕ್ತಿ ಕಡಿಮೆಯಾಗಿರುತ್ತದೆ ಇಂತಹ ಸಂದರ್ಭದಲ್ಲಿ ನೀರಿನಲ್ಲಿ ಕರಗುವ ಗೊಬ್ಬರಗಳಾದ 19:19:19 ಅಥವಾ 13:0:45 ದ್ರಾವಣವನ್ನು 80 ಗ್ರಾಂ ಪ್ರತಿ ಪಂಪಿಗೆ ಅಂಟು ದ್ರಾವಣ ಬೆರೆಸಿ ಸಿಂಪರಣೆ ಮಾಡುಬೇಕೆಂದು ತಿಳಿಸಿದರು.ಒಂದು ವೇಳೆ ಮಣ್ಣು ಜಾಸ್ತಿ ಹಸಿ ಇದ್ದು ಸಿಂಪರಣೆ ಕೈಗೊಳ್ಳಲು ಸಾಧ್ಯವಾಗದಿದ್ದರೆ ಡ್ರೋನ್ ಮುಖಾಂತರ ಸಿಂಪರಣೆ ಕೈಗೊಳ್ಳಬಹುದು ಮತ್ತು ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಸಲು ಜುಲೈ 31 ಕೊನೆಯ ದಿನಾಂಕ ವಾಗಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರು.ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಕೃಷಿ ಅಧಿಕಾರಿ ಎಂ.ಜಿ. ಕಳಸಪ್ಪನವರ, ಆತ್ಮ ಸಿಬ್ಬಂದಿ ಉಮೇಶ ಯರಗಟ್ಟಿ ಹಾಗೂ ಕೃಷಿ ಸಂಜೀವಿನಿ ಸಿಬ್ಬಂದಿ ವರ್ಗದವರು ಹಾಜರಿದ್ದರು