ರಾಣೆಬೆನ್ನೂರ

ಭಾರತೀಯ ವೈದ್ಯಕೀಯ ಸಂಘ: ಸ್ವಾತಂತ್ರ್ಯ ಧ್ವಜಾರೋಹಣ

ಭಾರತೀಯ ವೈದ್ಯಕೀಯ ಸಂಘ: ಸ್ವಾತಂತ್ರ್ಯ ಧ್ವಜಾರೋಹಣ

ರಾಣೆಬೆನ್ನೂರು 21:  ದೇಶಕ್ಕೆ ಸ್ವಾತಂತ್ರ  ಸುಮ್ಮನೆ ಸಿಕ್ಕಿಲ್ಲ. ದೊರಕಿರುವ ಸ್ವಾತಂತ್ರ್ಯವನ್ನು ನಾವೆಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ: ಪ್ರವೀಣ್ ಖನ್ನೂರ್ ಹೇಳಿದರು. ಅವರು ಇಲ್ಲಿನ ಸಂಗಮ್ ವೃತ್ತದಲ್ಲಿನ. ಐಎಂಎ  ಮತ್ತು ನೀಡ್ಸ್‌ ಆವರಣದಲ್ಲಿ ನಡೆದ ಅಮೃತ ಮಹೋತ್ಸವದ 75ನೇ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.ಭಾರತೀಯರು ಭಾವೈಕ್ಯತೆ ಹರಿಕಾರರು ಇಲ್ಲಿ ಜಾತಿ ಮತ ಭೇದ ಭಾವ ಯಾವುದು ಇಲ್ಲ, ಇತ್ತೀಚಿನ ಕೆಲವು ದಿನಗಳಿಂದ  ನಡೆಯುತ್ತಿರುವ ಘಟನೆಗಳು ನಾಗರಿಕ ಸಮುದಾಯಕ್ಕೆ ಮುಜುಗರ ತರುತ್ತಲಿದೆ, ಇದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅನೇಕ ಪದಾಧಿಕಾರಿಗಳು, ಗಣ್ಯರು ವೈದ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ