ಪ್ರಾರ್ಥನಾ ವಿದ್ಯಾ ಮಂದಿರದಲ್ಲಿ ಸಂಭ್ರಮದಿಂದ ಭಾರತೀಯ ಸಂವಿಧಾನ ದಿನಾಚರಣೆ
ಮುದ್ದೇಬಿಹಾಳ 28 : ಪಟ್ಟಣದ ಬಸವ ವಿದ್ಯಾ ಪ್ರಸಾರಕ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾರ್ಥನಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಭಾರತೀಯ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನದ ಪೀಠಿಕೆಯನ್ನು ಬೋಧಿಸಿ, ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.'
ಈ ಸಂದರ್ಭದಲ್ಲಿ ಶಿಕ್ಷಕಿ ರೂಪರಾಣಿ ಪಟಗಾರ ಅವರು ಭಾರತೀಯ ಸಂವಿಧಾನದ ರಚನೆ, ಅದರ ಮಹತ್ವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಮೂಲಭೂತ ಹಕ್ಕುಗಳ ಕುರಿತು ತಮ್ಮ ಅನಿಸಿಕೆ ಹಾಗೂ ಮಾಹಿತಿಯನ್ನು ಹಂಚಿಕೊಂಡರು.ಸಂವಿಧಾನ ದಿನದ ವಿಶೇಷವಾಗಿ ಪುಟಾಣಿ ವಿದ್ಯಾರ್ಥಿಗಳು ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ವಿವಿಧ ಮಹಾಪುರುಷರ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯಗುರು ವಿನೋದ ಪಟಗಾರ, ಮುಖ್ಯ ಗುರುಮಾತೆ ದಿವ್ಯಾ ಹೆಬ್ಬಾರ, ಶಿಕ್ಷಕರಾದ ಪ್ರಭು ತುರಡಗಿ, ರವಿ ಭೋವಿ, ರಾಮನಗೌಡ ಬಿರಾದಾರ ಹಾಗೂ ಶಿಕ್ಷಕಿಯರಾದ ಗೀತಾ ಉಗ್ಗನ್ನವರ, ತ್ರಿವೇಣಿ ರಾಠೋಡ, ಶಾರದಾ ಗೌಡ, ಚರಿತ್ರ್ರಭಾ, ಅಂಜನಾ ಬಸರಕೋಡ, ಸನ್ಮತಿ ಶೆಟ್ಟಿ, ನೀಲಮ್ಮ ಧೋಲೆ, ಜಗದೇವಿ ಬಡಿಗೇರ, ಅಂಜುಮ್ ಮಮದಾಪುರ, ಸುಗ್ಲಾ ಕಂಠಿ, ಆಶಾ ಪಾಟೀಲ್ ಹಾಗೂ ಕಾವ್ಯ ರಾಜನಾಳ ಉಪಸ್ಥಿತರಿದ್ದರು.**ಸಂವಿಧಾನದ ಆಶಯಗಳನ್ನು ಅರಿತು, ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಪಾಲಿಸುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.