ಸರ್ವ ಧರ್ಮಗಳ, ಸರ್ವ ಭಾಷೆಗಳ ಬೀಡು ಭಾರತ
ತಾಳಿಕೋಟೆ04: ಸರ್ವ ಧರ್ಮಗಳ, ಸರ್ವ ಭಾಷೆಗಳ ಬೀಡು ಭಾರತ ದೇಶವಾಗಿದೆ. ದೇಶ ಮೊದಲು ಎನ್ನುವ ಭಾವನೆ ಬರಲಿ ಎನ್ನುವ ಉದ್ದೇಶದಿಂದ ಯುವ ಸಂಕಲ್ಪ ನಡಿಗೆಯನ್ನು ಹಮ್ಮಿಕೊಳ್ಳಲಾಗದೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಅವರು ಪಟ್ಟಣದ ಎಸ್.ವಿ.ಎಮ್ ಪ್ಯಾರಾ ಮೆಡಿಕಲ್ ಕಾಲೇಜು, ಅಂಜುಮನ್ ಪದವಿ ಪೂರ್ವ ಕಾಲೇಜು, ಜೆಎಸ್‌ಗಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯುವ ಸಂಕಲ್ಪ ನಡಿಗೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ ಸುಮ್ಮನೆ ಬಂದಿಲ್ಲ. ಹಲವಾರು ಹೋರಾಟಗಾರರ ಬಲಿದಾನದಿಂದ ಸ್ವಾತಂತ್ರ ಸಿಕ್ಕಿದೆ. ಸ್ವಾತಂತ್ರ-್ಯ ಹೋರಾಟಗಾರರ ಸ್ಮರಣೆ ನಿಮಿತ್ತ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶ ವಿಷಯ ಬಂದಾಗ ಸರ್ವ ತ್ಯಾಗಕ್ಕೂ ಸಿದ್ದವಾಗಬೇಕು. ನಡಿಗೆಯಲ್ಲಿ ಪಾಲ್ಗೋಳ್ಳಲು 15 ಸಾವಿರ ಯುವಕರು, 11 ಸಾವಿರ ಯುವತಿಯರು ನೊಂದಣಿ ಮಾಡಿಸಿದ್ದಾರೆ.
ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಪ್ರತಿಕ. ದೇಶದ ರಕ್ಷಣೆ ಹಾಗೂ ದೇಶದ ಅಭಿವೃದ್ದಿ ಸಂಕಲ್ಪ ಮಾಡೋಣ. ದೇಶ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತ ಎನ್ನುವ ಭಾವನೆ ಮೂಡಲಿ. ದೇಶ ಭಕ್ತಿಯ ಸಂಕಲ್ಪ ಮೊದಲು ಬರಲಿ. ಅ.12 ರಂದು ಯುವ ಸಂಕಲ್ಪ ನಡಿಗೆ ಪಟ್ಟಣಕ್ಕೆ ಆಗಮಿಸಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ ಅಬೂತಪೂರ್ವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಲ್ಲ ಕಾರ್ಯಕ್ರಮಗಳಿಗೆ ಯುವ ಜನತೆ ಬೆಂಬಲ ವ್ಯಕ್ತಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಸದಸ್ಯರಾದ ವಾಸುದೇವ ಹೆಬಸೂರ, ಜೈಸಿಂಗ ಮೂಲಿಮನಿ, ಮುದಕಣ್ಣ ಬಡಿಗೇರ, ನಿಂಗರಾಜ ಕುಂಟೋಜಿ, ಶರಣಗೌಡ ಗೋಟಖಂಡ್ಕಿ, ರಾಘು ವಿಜಯಪುರ, ಮುಖಂಡರಾದ ಕೆ.ಎಸ್.ಮುರಾಳ, ಡಾ.ಎಸ್.ಎಂ.ಸಜ್ಜನ, ದಿನಕರ ಜೋಶಿ, ಕಸಾಪ ಅದ್ಯಕ್ಷ ಆರ್.ಎಲ್.ಕೊಪ್ಪದ, ದಯಾನಂದ ಮೂಗಡ್ಲಿಮಠ. ಶಿವಶಂಕರ ಹಿರೇಮಠ ಸೇರಿದಂತೆ ಇತರರು ಇದ್ದರು.