ಭಾರತ ವಿಶ್ವ ಗುರು ದಿಶೆಯಲ್ಲಿ ಸಾಗಿದೆ : ಪಾಟೀಲ
ತಾಳಿಕೋಟೆ 16: ಸ್ವಾತಂತ್ರ ಬಂದು 75 ವರ್ಷಗಳ ಸಂಭ್ರಮದ ಕಾಲದಲ್ಲಿದ್ದೇವೆ. ನಮ್ಮೆಲ್ಲರಿಗೆ ಈ ಅಮೃತಗಳಿಗೆ ಅನುಭವಿಸುವ ಸೌಭಾಗ್ಯ ದೊರಕಿದೆ. ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹಲವಾರು ಹೋರಾಟಗಾರರು ತಮ್ಮ ಪ್ರಾಣವನ್ನು ಬಲಿದಾನ ನೀಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಜಗತ್ತಿನಲ್ಲಿ ಭಾರತ ಅಭಿವೃದ್ಧಿಪರ ಹಾಗೂ ಬಲಿಷ್ಠ ದೇಶ ಆಗುವುದರಲ್ಲಿ ದಾಪುಗಾಲಿಡುತ್ತಿದೆ. ಯುವಕರು ದೇಶಕ್ಕಾಗಿ ತಮ್ಮದೇ ಆದ ಕೊಡುಗೆ ನೀಡುವುದು ಅತ್ಯಮೂಲ್ಯವಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ತಿಳಿಸಿದರು. ಪಟ್ಟಣದಲ್ಲಿ ತಾಲೂಕ ಆಡಳಿತ ಹಮ್ಮಿಕೊಂಡಿರುವ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧನೆ ಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಶ್ರೀಧರ್ ಗೋಟೂರ ತಾಳಿಕೋಟಿ ತಾಲೂಕು ದಂಡಾಧಿಕಾರಿಗಳು, ಪುರಸಭೆ ಅಧ್ಯಕ್ಷರಾದ ಸಂಗಮೇಶ ಇಂಗಳಗಿ, ಉಪಾಧ್ಯಕ್ಷರಾದ ಮುಸ್ತಪಾ ಚೌದ್ರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ ಆರ್ ಬಿರಾದಾರ, ಸುರೇಶ ನಾಯಕ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಊರಿನ ಗಣ್ಯರು ಹಲವರು ಉಪಸ್ಥಿತರಿದ್ದರು