ಭಾರತ ದೇಶ ವರ್ಗ, ವರ್ಣ, ಜಾತಿ, ರಹಿತ ದೇಶ: ಸತ್ತಾರ್ಖಾನ್ ಪಾಟೀಲ
ರಾಣೀಬೆನ್ನೂರ 27: ಜಾತಿ, ಮತ, ಧರ್ಮ, ಬೇಧ-ಭಾವ ಭಾರತದಲ್ಲಿ ಇಲ್ಲವೇ ಇಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಅವರ ನಿರಂತರ ವೈಚಾರಿಕ ಚಿಂತನೆಯಿಂದಾಗಿ ಗಣತಂತ್ರ ವ್ಯವಸ್ಥೆ ದೇಶವಾಗಿ ಇಂತಹ ವಿಭಿನ್ನ ಸಂಸ್ಕೃತಿ ಆಚರಣೆಗಳನ್ನು ಆಚರಿಸಲು ಸಾಧ್ಯವಾಗಿದೆ. ಇದಕ್ಕೆ ಅಂಬೇಡ್ಕರ್ ಅವರು ರಚಿಸಿದ ವರ್ಗ ವರ್ಣ ಜಾತಿ ರಹಿತ ಸಂವಿಧಾನವೇ ಕಾರಣವಾಗಿದೆ ಎಂದು ಅಲ್ಪ ಸಂಖ್ಯಾತರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸತ್ತಾರ್ ಖಾನ್ ಮೆಹಬೂಬ್ ಖಾನ್ ಪಾಟೀಲ ಹೇಳಿದರು. ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಸಭಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬಾಬಣ್ಣ ಮುಲ್ಲಾನವರ, ಪ್ರೊ. ಬಿ.ಬಿ.ನಂದ್ಯಾಲ, ಕವಿ ಜೆ.ಹೆಚ್.ಭಾವಿಕಟ್ಟಿ, ಎ.ಜೆ.ಕ್ಯಾಲಕೊಂಡ ಎಂ.ಎ.ಖಾಜಿ, ಆಶಾ ಬಿ ಲೋಹಾರ್, ನಜೀರ್ಸಾಬ್ ದಾರುಗಾರ, ಎಂ.ಸಿ.ಪಾಟೀಲ, ಜಾಂಗೀರ್ಸಾಬ್ ಟೇಲರ್, ಇಸ್ಮಾಯಿಲ್ಸಾಬ್ ಸಿಗ್ಗಾವಿ, ಅಮೀರ್ಖಾನ್ ಪಾಟೀಲ, ಬಸೀರ್ ಕಠಾರಿ, ನಜೀರ್ಸಾಬ್ ಪಾಟೀಲ, ಸಯ್ಯದ್ ಪೀರ್ ನಂದಗಾವ್, ಜಬ್ಬರ್ಖಾನ್ ನಂದಗಾವ್, ಶಿವಣ್ಣ ಇಟಗಿ, ವಾಸುದೇವಾಚಾರ್ ಬಡಿಗೇರ, ಚಂದ್ರಪ್ಪ ಕಡೂರು ಸೇರಿದಂತೆ ಮತ್ತಿತರ ಗಣ್ಯರು ವೇದಿಕೆಯ ಪದಾಧಿಕಾರಿಗಳು, ಶಾಮಿಲ್ನ ಕಾರ್ಮಿಕರು ಉಪಸ್ಥಿತರಿದ್ದರು.