ರಾಣೆಬೆನ್ನೂರ

ವಿದ್ಯಾರ್ಥಿ ಶ್ರೀಷ್ಮಾಗೆ ಭಾರತದ ರಕ್ಷಾಮಂತ್ರಿ ಪದಕ ಪ್ರದಾನ

ವಿದ್ಯಾರ್ಥಿ ಶ್ರೀಷ್ಮಾಗೆ ಭಾರತದ ರಕ್ಷಾಮಂತ್ರಿ ಪದಕ ಪ್ರದಾನ

ರಾಣಿಬೆನ್ನೂರ 30: ತಾಲೂಕಿನ ಕುಮಾರಪಟ್ಟಣ ಆದಿತ್ಯ ಬಿರ್ಲಾ ವಿದ್ಯಾಲಯದ ವಿದ್ಯಾರ್ಥಿ ಶ್ರೀಷ್ಮಾ ಹೆಗಡೆ ಇವರಿಗೆ ಭಾರತದ ರಕ್ಷಾ ಮಂತ್ರಿ ಪದಕವನ್ನು  ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಗಣರಾಜ್ಯೋತ್ಸವ ಅಂಗವಾಗಿ ಜ. 21 ರಂದು ನವದೆಹಲಿಯ  ಜನರಲ್ ಕರಿಯಪ್ಪ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನೀಡಿದರು. 

ಕಳೆದ ಬಾರಿ ಶ್ರೀಷ್ಮಾ ಹೆಗಡೆ ಸೀನಿಯರ್ ಅಂಡರ್ ಆಫೀಸರ್, ಕರ್ನಾಟಕ ಗೋವಾ ರೆಜಿಮೆಂಟಿನ ದಾವಣಗೆರೆಯ 33 ಕರ್ನಾಟಕ ಬೆಟಾಲಿಯನ್ ಯುನಿಟ್ ನಿಂದ ದೇಹಲಿಯಲ್ಲಿ ನಡೆದ ಎನ್‍ಸಿಸಿ ತಂಡದ ನಾಯಕಿಯಾಗಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಸಾಧನೆಗೆ ಭಾಜನರಾಗಿದ್ದರು.

ಸುದ್ದಿ ಓದಿ