ಸಿಂಧಗಿ

ಸಿಂದಗಿ ಬಂಡಾಯವಾದದ್ದು ಒಂದು ಇತಿಹಾಸ: ಬಿರಾದಾರ

ಸಿಂದಗಿ ಬಂಡಾಯವಾದದ್ದು ಒಂದು ಇತಿಹಾಸ: ಬಿರಾದಾರ

ಸಿಂದಗಿ 14:  ಬ್ರಿಟಿಷ್‍ರು ಮತ್ತು ಹೈದ್ರಬಾದ ನಿಜಾಮನ ವಿರುದ್ಧವಾಗಿ ತೆರಿಗೆ ನೀತಿಗೆ ಸಂಬಂಧಿಸಿದಂತೆ ಸಿಂದಗಿಯಲ್ಲಿ 1824 ರ ಸಮಯದಲ್ಲಿ ಸಿಂದಗಿ ಬಂಡಾಯವಾದದ್ದು ಒಂದು ಇತಿಹಾಸ ಎಂದು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಹೇಳಿದರು.

ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ  ಹಮ್ಮಿಕೊಂಡ ಸಿಂದಗಿ ಬಂಡಾಯ-1824 ರ ಕುರಿತಾಗಿರುವ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸಿಂದಗಿಯ ಕೊಡುಗೆ ಅಪಾರವಿದೆ. ಸಿಂದಗಿ ಬಂಡಾಯವಾಗಿರುವ ಬಗ್ಗೆ ಹೆಚ್ಚು ಅಧ್ಯಯನವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿ, ಬ್ರಿಟಿಷರ ಪ್ರತಿನಿಧಿ ಹೈದ್ರಾಬಾದ ನಿಜಾಮನು ಬ್ರಿಟಿಷರ ಆದೇಶದಂತೆ 1824 ರಲ್ಲಿ ಈ ಭಾಗದಲ್ಲಿ ತೆರಿಗೆ ವಸೂಲಿ ಮಾಡುತ್ತಿದ್ದನು. ಅದರ ವಿರುದ್ದವಾಗಿ ಸಿಂದಗಿಯ ಚಿದಂಬರ ದೀಕ್ಷಿತ, ದಿವಾಕರ ದೀಕ್ಷಿತ, ಬಾಳಪ್ಪ ದೇಶಪಾಂಡೆ,  ರಾವುದಿ ಸತ್ತಾಲ ಸೇರಿದಂತೆ ಅನೇಕ ನೇತೃತ್ವದಲ್ಲಿ ಬಂಡಾಯದ ಬಿಸಿ ಪ್ರಾರಂಭವಾಯಿತು. ಇದರ ಮಧ್ಯದೇಶದ್ರೋಹಿ ಅಣ್ಣಪ್ಪ ಫಡಕೆ ಅವರನ್ನು ಕೊಲೆ ಮಾಡಿ ಜೈಲು ಸೇರಿದರು. ಆದರೆ ಸಿಂದಗಿ ಬಂಡಾಯ ಇತಿಹಾಸದಲ್ಲಿ ಇದ್ದರು ಅದು ವ್ಯಾಪಕ ಪ್ರಚಾರ ಪಡೆದುಕೊಂಡಿರದು ದುರಂತ ಇದರ ಬಗ್ಗೆ ಸುದೀರ್ಘವಾಗಿ ಅಧ್ಯಯನ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ 1824 ರ ಕುರಿತಾದ ಸಿಂದಗಿ ಬಂಡಾಯದ ಕುರಿತಾಗಿ ಚರ್ಚಾಕೂಟ, ರಂಗೋಲಿ, ಪ್ರಭಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.

ಭಾಷಣ ಸ್ಪರ್ಧೆಯಲ್ಲಿ ಅಶ್ವಿನಿ ಭಜಂತ್ರಿ ಪ್ರಥಮ, ಶಿವಲಿಲಾ ಬಿರಾದಾರ ದ್ವೀತಿಯ, ಮಲ್ಲಿಕಾರ್ಜುನ ಸಾಸನೂರ ತೃತೀಯ ಸ್ಥಾನ ಪಡೆದರು. ಪ್ರಭಂದ ಸ್ಪರ್ಧೆಯಲ್ಲಿ ಆಕಾಶ ನಾಯ್ಕೋಡಿ ಪ್ರಥಮ, ಅಮರೇಶ ಯಳಮೇಲಿ ದ್ವೀತಿಯ, ಸುಷ್ಮೀತಾ ಕೋರಿ ತೃತೀಯ ಸ್ಥಾನ ಪಡೆದರು, ರಂಗೋಲಿ ಸ್ಪರ್ಧೆಯಲ್ಲಿ ಅನಿತಾ ಕುಂಬಾರ ಪ್ರಥಮ, ಅಪೂರ್ವ ಬಿದರಿ ದ್ವೀತಿಯ, ಸುನೀತಾ ಪಾಟೀಲ ತೃತೀಯ ಸ್ಥಾನ ಪಡೆದುಕೊಂಡರು. ವೇದಿಕೆ ಮೇಲೆ ಉಪನ್ಯಾಸಕರಾದ ಆರ್.ಬಿ.ಹೊಸಮನಿ, ಆರ್.ಸಿ.ಕಕ್ಕಳಮೇಲಿ, ಬಿ.ಎಸ್.ಬಿರಾದಾರ, ಸತೀಶ ಪಾಟೀಲ, ಶಾಂತೂ ಬಿರಾದಾರ ಹಾಗೂ ಇತರರು ಇದ್ದರು. 

ಉಪನ್ಯಾಸಕ ಆರ್.ವೈ.ಪರೀಟ್ ನಿರೂಪಿಸಿದರು, ಸಿದ್ದಲಿಂಗ ಕಿಣಗಿ ಸ್ವಾಗತಿಸಿದರು, ಮುಕ್ತಾಯಕ್ಕಕತ್ತಿ ವಂದಿಸಿದರು. 


ಸುದ್ದಿ ಓದಿ