ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 15: ದಾಸಶ್ರೇಷ್ಠ ಕನಕದಾಸ ಸೇವಾ ಸಮಿತಿ, ಶಿಗ್ಗಾಂವ, ಜೆ ಸಿ ಐ ಶಿಗ್ಗಾಂವ, ಶರಣ ಸಾಹಿತ್ಯ ಪರಿಷತ್ತು, ಶಿಗ್ಗಾಂವ ಜಂಟಿ ಆಶ್ರಯದಲ್ಲಿ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.
ನಂತರ ಈ ವರ್ಷ ನಿವೃತ್ತಿಹೊಂದಿದ ಬಾಲ್ಯ ಮಿತ್ರರೆಲ್ಲರೂ ಒಂದೇ ಭಾರಿ ಸನ್ಮಾನಿಸುವ ಅದ್ಭುತವಾದ ಕಾರ್ಯಕ್ರಮದ ಆಯೋಜನೆಯನ್ನು ಮಲ್ಲಪ್ಪ ರಾಮಗೇರಿ ಹಮ್ಮಿಕೊಂಡಿದ್ದು ಇವರ ನೇತೃತ್ವದಲ್ಲಿ ಡಾ. ಡಿ ಎ. ಗೊಬ್ಬರಗುಂಪಿ, ಕೆ. ಎಚ್. ಸಿದ್ದಣ್ಣನವರ, ಶ್ರೀಕಾಂತ ಯಲಿಗಾರ, ಎಲ್. ಕೆ. ಶಿರಗಂಬಿ, ಸಿ. ಎನ್. ಕುಂಬಾರ ಇವರೆಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿ ಜಿ. ಎನ್. ಯಲಿಗಾರ, ಜೆಸಿ ಬಸವರಾಜ ಬಸರೀಕಟ್ಟಿ, ಶಶಿಧರ ಯಲಿಗಾರ, ವಸಂತ. ಬಂಕಾಪುರ, ವೀರನಗೌಡ ಪಾಟೀಲ, ಜೆಸಿ ಅರುಣ ಮುಳೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು