ಗೋಕಾಕ್

ಕರೆಸಿದ್ದೇಶ್ವರ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ

ಕರೆಸಿದ್ದೇಶ್ವರ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ

ಹಾರೂಗೇರಿ 16: ಪಟ್ಟಣದ ಕರೆಸಿದ್ದೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಅತಿ ಸಡಗರದಿಂದ ಆಚರಿಸಲಾಯಿತು.   

ಸಂಸ್ಥೆಯ ಅಧ್ಯಕ್ಷರಾದ ಭಗವಂತ ಬಂತಿ ದ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಕಾಂತ ಚೌಗಲಾ ರಾಷ್ಟ್ಷನಾಯಕರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಸಂಸ್ಥೆಯ ನಿರ್ದೇಶಕರಾದ ಸಿದ್ದಪ್ಪ ಹಾಡಕಾರ, ದುಂಡಪ್ಪ ಹಾಡಕಾರ, ನ್ಯಾಯವಾದಿ ಎಮ್ ಜಿ ಹಾಡಕಾರ, ಹನಮಂತ ಬನಾಜ, ಸತ್ಯಪ್ಪ ರಬಕವಿ, ಮಹಾದೇವ ಹಾಡಕಾರ, ಮಾರುತಿ ಪೂಜೇರಿ ಉಪಸ್ಥಿತಿತರಿದ್ದರು.  

ಶಿಕ್ಷಕರಾದ ಡಿ ಎಸ್ ಬಸಗೌಡರ, ಎನ್ ಎಲ್ ತಟ್ಟಿಮನಿ ಎಲ್ಲ ಶಿಕ್ಷಕರು ಉಪಸ್ಥಿತಿತರಿದ್ದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆಯ್ ಬಿ ಬಿರಾದಾರ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ  ಜೆ. ಜೆ. ಗಡಾದ ಮಕ್ಕಳಿಂದ ಪಂಥ ಸಂಚಲನ ನಡೆಯಿಸಿಕೊಟ್ಟರು. ಎಸ್ ಎ ಕಾಂಬಳೆ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ