ರಾಣೆಬೆನ್ನೂರ

ಸ್ವಾತಂತ್ರ್ಯ ದಿನಾಚರಣೆ: ಯೋಧರಿಗೆ ಸನ್ಮಾನ

ಸ್ವಾತಂತ್ರ್ಯ ದಿನಾಚರಣೆ: ಯೋಧರಿಗೆ ಸನ್ಮಾನ

ರಾಣಿಬೆನ್ನೂರು 17:  ಸ್ಥಳೀಯ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲಾ ಮಕ್ಕಳ ಹಾಗೂ ನಿವೃತ್ತ ಯೋಧರ ಮಧ್ಯ ಸಂಭ್ರಮದಿಂದ ನೆರವೇರಿಸಲಾಯಿತು. ಮುಖಂಡ ಮಂಜುನಾಥ ಗೌಡಶಿವಣ್ಣನವರ ದ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಹೋರಾಟಗಾರರ ಫಲಶೃತಿಯಿಂದಾಗಿ ದೊರೆತಿರುವ ಈ ಸ್ವಾತಂತ್ರ್ಯವನ್ನು ನಾವಿಂದು ಬೆಳೆಸಿಕೊಳ್ಳಬೇಕು ಎಂದರು. ಯೋಧರಿಗೆ ಸನ್ಮಾನಿಸಿ ಗೌರವಿಸಿದರು. ಹುತಾತ್ಮ ಮೆಣಸಿನಹಾಳ ತಿಮ್ಮೆನಗೌಡರ ಪ್ರತಿಮೆಗೆ ಮಾಲಾರೆ​‍್ಣ ಮಾಡಲಾಯಿತು. ಪಕ್ಷದ ಪದಾಧಿಕಾರಿಗಳು ಮತ್ತಿತರರು ಇದ್ದರು. 


ಸುದ್ದಿ ಓದಿ