ಜಮಖಂಡಿ

ಸ್ವಾತಂತ್ರ್ಯ ದಿನಾಚರಣೆ: ಶಾಲೆಗೆ ಹೋಗಲು ಮಕ್ಕಳ ಹರಸಾಹಸ

ಸ್ವಾತಂತ್ರ್ಯ ದಿನಾಚರಣೆ: ಶಾಲೆಗೆ ಹೋಗಲು ಮಕ್ಕಳ ಹರಸಾಹಸ

ಶಶಿಕಾಂತ ತೇರದಾಳ, 

ಜಮಖಂಡಿ 16: ಸ್ವಾತಂತ್ರ್ಯ ದಿನಾಚರಣೆ ದಿನವನ್ನು ಆಚರಣೆ ಮಾಡಲು ಶಾಲಾಮಕ್ಕಳು ಶಾಲೆಗೆ ಹೋಗಬೇಕಾದರೆ ದಾರಿ ಯಾವುದಯ್ಯ....! ಶಾಸಕ ಜಗದೀಶ ಗುಡಗುಂಟಿ ಅವರೆ....? ಎಂದು ಪ್ರಶ್ನಿಸಿದ ಸ್ಥಳೀಯರು. 

ನಗರದ ಮುಧೋಳ, ಜಮಖಂಡಿ ಮಾರ್ಗದ ಬೈಪಾಸ್ ರಸ್ತೆಯು ಮಳೆಯ ನೀರಿನಿಂದ ತುಂಬಿಕೊಂಡು ಹೊಂಡದಂತೆ ಆಗಿರುವ ಬೈಪಾಸ್ ರಸ್ತೆಯಲ್ಲಿ ಶಾಲಾಮಕ್ಕಳು ರಸ್ತೆಯನ್ನು ದಾಟಬೇಕಾದರೆ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ದುಸ್ಥಿತಿ ಸರಕಾರಿ ಮಾದರಿ ಪ್ರಾಥಮಿಕ ನೂತನ ಶಾಲೆಯ ಮಕ್ಕಳ ಗೋಳು ಕೇಳುವರು ಯಾರು? 

ಶಾಲಾಮಕ್ಕಳು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಹೋಗಬೇಕಾದರೆ ನೀರಿನ ಹೊಂಡದಂತೆ ತುಂಬಿರುವ ರಸ್ತೆಯನ್ನು ದಾಟಲು ಶಾಲಾಮಕ್ಕಳು ಹರಸಾಹಸ ಪಡಬೇಕಾದ ದೃಶ್ಯ ಸಾಮಾನ್ಯವಾಗಿತು. ಸಾವಿರಾರು ವಾಹನಗಳು, ಮೋಟರ್ ಬೈಕ್‌ಗಳು ಬೈಪಾಸ್ ರಸ್ತೆಯಲ್ಲಿ ಸಂಚರಿಸುವ ಹಿನ್ನಲೆ. ಶಾಲಾಮಕ್ಕಳ ಸಮವಸ್ತ್ರಗಳು ರಸ್ತೆಯ ಮೇಲೆ ನಿಂತಿರುವ ನೀರಿನಿಂದ ಎಡಗಡೆ ಹಾಗೂ ಬಲಗಡೆಯಿಂದ ಚಲಿಸುವ ವಾಹನಗಳ ರಭಸಕ್ಕೆ ಮಳೆಯ ನೀರು ಸಿಡಿದ್ದು. ಬಟ್ಟೆಗಳು ಗಲಿಜುಗಳಾಗುತ್ತವೆ ಎಂದು ಮಕ್ಕಳು ತಮ್ಮ ಅಳಲನ್ನು ತೊಂಡಿಕೊಂಡರು. 

ಶಾಲೆಯ ಸಮವಸ್ತ್ರಗಳು ಕೊಳೆಯಾಗಿದ್ದು, ಅವುಗಳನ್ನು ಸಾಂಯಕಾಲ ಬಟ್ಟೆಗಳನ್ನು ತೊಳೆದು ಹಾಕಿದರೆ ಅವುಗಳು ಹಸಿಯಾಗಿರುತ್ತವೆ. ಬೇರೆ ಬಟ್ಟೆಗಳನ್ನು ಧರಿಸಿಕೊಂಡು ಶಾಲೆಗೆ ಹೋದರೆ ಶಿಕ್ಷಕರು ಅವಾಜು ಹಾಕುತ್ತಾರೆ. ಇದರಿಂದ ಸರಕಾರಿ ಶಾಲೆಗೆ ನಮ್ಮಂತ ಬಡಮಕ್ಕಳು ಶಾಲೆಗೆ ಬರುವುದು ಕಷ್ಟಕರವಾಗಿದೆ. ಖಾಸಗಿ ಶಾಲೆಯಲ್ಲಿ ವಾಹನದ ವ್ಯವಸ್ಥೆ ಇರುತ್ತದೆ. ನಮ್ಮಗೆ ಮೊದಲು ಮಳೆಯ ನೀರು ರಸ್ತೆಯ ಮೇಲೆ ನಿಲ್ಲದಂತೆ ಶಾಸಕರು ಹಾಗೂ ಅಧಿಕಾರಿಗಳು ಮಾಡಿಕೊಂಡಬೇಕೆಂದು ಸರಕಾರಿ ಶಾಲೆಯ ಮಕ್ಕಳ ಅಳಲು. 

ಟಾಟಾಎಸ್ ವಾಹನ ಸಹಾಯ : 

ಮಳೆಯಾದರೆ ಬೈಪಾಸ್ ರಸ್ತೆಯು ಹೊಂಡದಂತೆ ಆಗುತ್ತದೆ. ಶಾಲಾಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ಆದರೆ ಶಾಲಾಮಕ್ಕಳು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಬಿಳಿ ಬಟ್ಟೆಯ ಸಮವಸ್ತ್ರಗಳನ್ನು ಧರಿಸಿಕೊಂಡು ಹೋಗಬೇಕಾದರೆ ನೀರಿನ ಹೊಂಡದಂತೆ ತುಂಬಿರುವ ರಸ್ತೆಯನ್ನು ದಾಟಲು ಮಕ್ಕಳ ಹರಸಾಹಸ ಪಡುವಂತಾಯಿತು. ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಒಂದು ಟಾಟಾಎಸ್ ಮೂಲಕ ಮಕ್ಕಳನ್ನು ರಸ್ತೆಯನ್ನು ದಾಟಿಸಲಾಯಿತು. 

ಸ್ಥಳೀಯರ ಆಕ್ರೋಶ ;  

ಹೊಂಡದಂತೆ ತುಂಬಿಕೊಂಡಿರುವ ರಸ್ತೆ ಸುಧಾರಣೆಯನ್ನು ಮಾಡಲು ಸಾಕಷ್ಟು ಬಾರಿ ಶಾಸಕ ಜಗದೀಶ ಗುಡಗುಂಟಿ ಅವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೆ ಮಾಡುತ್ತಿಲ್ಲ. ರಸ್ತೆಯ ಮೇಲೆ ಮಳೆಯ ನೀರು ನಿಲ್ಲದಂತೆ ರಸ್ತೆ ಸುಧಾರಣೆ ಮಾಡಿದರೆ ಒಳ್ಳೆಯದು. ಇಲ್ಲದೇ ಹೋದರೆ ಶಾಲಾಮಕ್ಕಳ ಪಾಲಕರು ಹಾಗೂ ಶಾಲಾಮಕ್ಕಳೊಂದಿಗೆ ಶಾಸಕ ಜಗದೀಶ ಗುಡಗುಂಟಿ ಅವರ ಮನೆಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಸ್ಥಳೀಯ ಸಾರ್ವಜನಿಕರು. 

ಸುರಕ್ಷಿತ ರಸ್ತೆ ಇಲ್ಲ ಬಡವರ ಮಕ್ಕಳಿಗೆ : 

ಬಡವರ ಮಕ್ಕಳು ಸರಕಾರಿ ಶಾಲೆಗೆ ಹೋಗುತ್ತಾರೆ. ಅವರಿಗೆ ಖಾಸಗಿ ಶಾಲೆಗಳ ಹಾಗೆ ವಾಹನಗಳ ವ್ಯವಸ್ಥೆ ಇರುವುದಿಲ್ಲ. ಆದರೆ ಅಂತಹ ಮಕ್ಕಳಿಗೆ ಸಿಗುತ್ತಿಲ್ಲ ಸುರಕ್ಷಿತ ರಸ್ತೆ. ಸಾಕಷ್ಟು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಶಾಸಕ ಜಗದೀಶ ಗುಡಗುಂಟಿ ಅವರ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ಹಿಡಿಶಾಪ ಹಾಕುವ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು. 


ಸುದ್ದಿ ಓದಿ