ಸಾಲಕ್ಕೆ ಸಿಲುಕಿದ ರೈತ: ಜಗದೀಶ್ ನೇಣಿಗೆ ಶರಣು
ರಾಣೆಬೆನ್ನೂರು 20: ಸಾಲದ ಸುಳಿಗೆ ಸಿಲುಕಿ ಅದರಿಂದ ಹೊರಬರಲಾರದೆ ಸಂಪೂರ್ಣ ಆತ್ಮಸ್ಥೈರ್ಯವನ್ನು ಕಳೆದುಕೊಂಡ ಯುವ ರೈತ ನೂರ್ವನು ನೇಣಿಗೆ ಶರಣಾದ ದುರಂತ ಘಟನೆ ತಾಲೂಕಿನ ಚಳಿಗೇರಿ ಗ್ರಾಮದಲ್ಲಿ ನಡೆದಿದೆ. ಮೃತ ರೈತ ಜಗದೀಶ್ ನಾಗಪ್ಪ ಪೋರಮ್ಮನವರ (32) ಎಂದು ಗುರುತಿಸಲಾಗಿದೆ. ರೈತ ಮುಖಂಡರ ಆಗ್ರಹ:-ತಾಲೂಕು ಸೇರಿದಂತೆ ಜಿಲ್ಲೆ ಮತ್ತು ನಾಡಿನಲ್ಲಿ ಸರಕಾರದ ದ್ವಂದ್ವ ನೀತಿ ವಿರೋಧಿಸಿ ಅನೇಕ ರೈತಪರ ಸಂಘಟನೆಗಳು, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ, ಧರಣಿ ಪ್ರತಿಭಟನೆ ನಡೆಸುತ್ತಲೇ ಸಾಗಿದ್ದಾರೆ.. ಆದರೆ ಸರಕಾರ ಯಾವುದನ್ನು ಪರಿಗಣಿಸದೆ,ಅ ವೈಜ್ಞಾನಿಕ ಬೆಳೆ ನಷ್ಟ ಪರಿಹಾರ ಘೋಸಿಸಿ, ಕೈಚೆಲ್ಲಿ ಕುಳಿತಿದೆ. ಇದರ ಪರಿಣಾಮ ಸ್ವಾಭಿಮಾನಕ್ಕೆ ಅಂಜುವ ರೈತ ನಿತ್ಯವೂ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು, ಈ ಕೂಡಲೇ, ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಘೋಷಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.