ಪ್ರೊಜೆಕ್ಟ ಪ್ರಜಾ ಪ್ರತಿನಿಧಿ ಕಾರ್ಯಕ್ರಮ ಉದ್ಘಾಟನೆ
ಶಿಗ್ಗಾವಿ 16: ಕಾಂಗ್ರೆಸ್ ಪಕ್ಷ ತನ್ನದೇ ಆದ ತತ್ವ ಸಿದ್ಧಾಂತವನ್ನು ಪಾಲಿಸುವ ಪಕ್ಷವಾಗಿದೆ ಆ ಪಕ್ಷದ ವಿಷಯಗಳ ಕುರಿತು ಪಕ್ಷದ ವೇದಿಕೆಯ ಚೌಕಟ್ಟಿನಲ್ಲಿ ಚರ್ಚಿಸದೇ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದಲ್ಲಿ ಅಂತವರ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್. ಎಮ್. ಹಿರೇಮಠ ಆಗ್ರಹಿಸಿದರು.
ತಾಲೂಕಿನ ಹುಲಗೂರ ಗ್ರಾಮದ ಶಾದಿ ಮಹಲ್ನಲ್ಲಿ ಪ್ರೊಜೆಕ್ಟ ಪ್ರಜಾ ಪ್ರತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗಾಗಲೇ ಪಕ್ಷದ ನಿಷ್ಟೆಗೆ ಬದ್ದವಾಗಿಲ್ಲ ಮತ್ತು ಕಾರ್ಯಕ್ರಮಕ್ಕೆ ಸರಿಯಾಗಿ ಬಂದಿಲ್ಲ ಅವರಿಗೆ ನೋಟೀಸ್ ನೀಡಲಾಗಿದೆ, ಪಕ್ಷದ ಶಿಸ್ತನ್ನು ಕಾಪಾಡಬೇಕು ಪಕ್ಷವಿದ್ದರೆ ನಾವು, ತಳ ಮಟ್ಟದ ಕಾರ್ಯಕರ್ತನಿಗೂ ಪಕ್ಷದಲ್ಲಿ ಮಹತ್ವವಿದೆ ಎಂದರಲ್ಲದೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರ ನೇತ್ರತ್ವದಲ್ಲಿ 3 ಅಂಶಗಳನ್ನೊಂಡ ಪ್ರೋಜೆಕ್ಟ ಪ್ರಜಾ-ಪ್ರತಿನಿಧಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು ಮೊದಲನೆದಾಗಿ ಆರೋಗ್ಯ ಸಹಾಯ ಹಸ್ತ ಕಾರ್ಯಕ್ರಮ, ಕೋವಿಡನಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಸಾಂತ್ವನ ಹೇಳುವುದರ ಜೊತೆಗೆ ಸರ್ಕಾರಕ್ಕೆ ಎಚ್ಚರಿಸುವ ಕಾರ್ಯವನ್ನು ಮಾಡಲಾಗುತ್ತಿದೆ, 44 ಸದಸ್ಯರನ್ನೊಳಗಂಡ ಎಲ್ಲಾ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ಅಧ್ಯಕ್ಷ, ಉಪಾದ್ಯಕ್ಷ, ಕಾರ್ಯದರ್ಶಿಗಳನ್ನು ಆಯ್ಕೆ ಮಾಡಬೇಕು, 25 ಮುಂಚೂಣಿ ಎಲ್ಲ ಘಟಕಗಳಲ್ಲಿ ಅಧ್ಯಕ್ಷ, ಉಪಾದ್ಯಕ್ಷ, ಕಾರ್ಯದರ್ಶಿಗಳನ್ನು ಆ ಭಾಗದ ಪಕ್ಷದ ಮುಖಂಡರೇ ಯಾವುದೇ ವೈಮನಿಸಿಲ್ಲದೇ ಮುಕ್ತವಾಗಿ ಆಯ್ಕೆ ಮಾಡಿ ಇದೇ ತಿಂಗಳ 30 ರೊಳಗೆ ತಾಲೂಕಾ ಅಧ್ಯಕ್ಷರಿಗೆ ನೀಡಬೇಕು ಎಂದರು.
ಗ್ರಾಮೀಣ ಭಾಗದಲ್ಲಿಯ ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿಯ ದುರಾಡಳಿತ ತಿಳಿಸುವ ಮೂಲಕ ಜನರನ್ನು ಎಚ್ಚರಿಸುವ ಕಾರ್ಯ ಮಾಡಬೇಕಿದೆ, ಅಂದಾಗ ಪಕ್ಷ ಸಂಘಟನೆ ಸಾದ್ಯ, ಕೋವಿಡ್ ವಿಷಯದಲ್ಲಿಯೂ ಬಿಜೆಪಿ ಅದನ್ನೇ ಮಾಡಿದೆ ಸೊಂಕಿನಿಂದ ಸತ್ತವರ ಮಾಹಿತಿಯ ಸಂಖ್ಯೆಗೂ ಮತ್ತು ಪರಿಹಾರ ವಿತರಣೆಯಲ್ಲಿಯ ಸಂಖ್ಯೆಗೂ ಹೊಂದಾಣಿಕೆಯೇ ಇಲ್ಲ, ಇದರಿಂದ ಬಿಜೆಪಿಯ ಭ್ರಷ್ಟಾಚಾರ, ಸುಳ್ಳು, ತಾರತಮ್ಯ ಹೇಳಿಕೆಗಳು ಎದ್ದು ಕಾಣಿಸುತ್ತದೆ ಎಂದರು.
ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ ಮಾತನಾಡಿ, ಸರಕಾರ ನೀಡಿರುವ ಪರಿಹಾರದ ಅಂಕಿ ಸಂಖ್ಯೆಯಲ್ಲಿ ಗೊಂದಲ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸ್ವತ ಕಾಂಗ್ರೇಸ್ ಈ ಕಾರ್ಯವನ್ನು ಮಾಡಿ ಸೊಂಕಿತರ ಅಂಕಿ ನೀಡಿ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದರು.
ಅದ್ಯಕ್ಷತೆಯನ್ನು ಬ್ಲಾಕ್ ಅದ್ಯಕ್ಷ ಎಂ ಎನ್ ವೆಂಕೋಜಿ ವಹಿಸಿ ಮಾತನಾಡಿದರು, ಶ್ರೀನಿವಾಸ ಹಳ್ಳಳ್ಳಿ, ಎಸ್.ಎಸ್.ಶಿವಳ್ಳಿ, ಶ್ರೀಕಾಂತ ದುಂಡಿಗೌಡ್ರ, ಪ್ರೇಮಾ ಪಾಟೀಲ್, ಪ್ರಕಾಶ ಹಾದಿಮನಿ, ಡಾ.ಎಫ್.ಜಿ. ಪಾಟೀಲ, ಚಂದ್ರಣ್ಣ ನಡುವಿನಮನಿ, ಶಿವಾನಂದ ಬಾಗೂರ, ಹನುಮರೆಡ್ಡಿ ನಡುವಿನಮನಿ, ಮಲ್ಲಿಕಾರ್ಜುನಗೌಡ ಪಾಟೀಲ, ಗುರುನಗೌಡ ಪಾಟಿಲ, ಜಾವೇದ ಸವಣೂರ, ಸಿದ್ದಣ್ಣ ಮೊರಬದ, ಶ್ರೀಕಾಂತ ಪೂಜಾರ, ಎಫ್ ಸಿ ಪಾಟೀಲ, ಬಿ ಸಿ ಪಾಟೀಲ, ಕಿರಣಗೌಡ ಪಾಟೀಲ, ಬಾಬರ ಬಾವೋಜಿ, ಶಂಬೂ ಆಜೂರ, ವಸಂತಾ ಬಾಗೂರ, ರಬ್ಬಾನಿ ತರೀನ, ತಹಮೀದ ಖಾಜಿ, ಬಂಗಾರೆಪ್ಪ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.