ಜಯ ಕರ್ನಾಟಕ ಸಂಘಟನೆಯ ತಾಲೂಕು ಕಾರ್ಯಾಲಯ ಉದ್ಘಾಟನೆ
ತಾಳಿಕೋಟೆ : ಸಂಘಟನೆ ಬಡ ಹಾಗೂ ನೊಂದ ದಿನ ದಲಿತರ ಕುಂದು ಕೊರತೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುವ ನಿಟ್ಟಿನಲ್ಲಿ ಹೊರಹೊಮ್ಮ ಬೇಕಾಗಿದೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಅಧ್ಯಕ್ಷರಾದ ಎ ಎಸ ಪಾಟೀಲ( ನಡಹಳ್ಳಿ) ತಿಳಿಸಿದರು. ಪಟ್ಟಣದಲ್ಲಿ ಶುಕ್ರವಾರ ಜಯ ಕರ್ನಾಟಕ ಸಂಘಟನೆಯ ತಾಲೂಕು ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಹೇಶ ನಾಯಕ ಸಮಾರಂಭ ಉದ್ಘಾಟಿಸಿ ಮಾತನಾಡಿ ಯುವಕರು ಸಂಘಟನೆಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜದಲ್ಲಿ ನೊಂದವರ ನಿರ್ಗತೀಕರ ಸೇವೆಗಾಗಿ ಜಯ ಕರ್ನಾಟಕ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು. ಸಮಾರಂಭದ ಅತಿಥಿಗಳಾಗಿ ಆಗಮಿಸಿದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಾಕೇಶ ಕಲ್ಲೂರು ಮಾತನಾಡಿ ಸಂಘಟನೆ ರಾಜ್ಯದ ಪ್ರತಿಯೊಂದು ಜಿಲ್ಲೆ ತಾಲೂಕು ಹೋಬಳಿ ವಲಯ ಸೇರಿದಂತೆ ಎಲ್ಲಾ ಕಡೆಗೆ ಸಂಘಟನೆಯ ಶಾಖೆಗಳನ್ನು ತೆರೆದು ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿದೆ. ಹೋರಾಟಗಳಿಂದಲೇ ಜನಸಾಮಾನ್ಯರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಈ ಸಮಯದಲ್ಲಿ ಬಿ ಎಸ ಪಾಟೀಲ(ಯಾಳಗಿ)ಕೆ ಪಿ ಸಿ ಸಿ ಸದಸ್ಯರು ಬೆಂಗಳೂರು, ರಾಜುಗೌಡ ಪಾಟೀಲ( ಕುದರಿ ಸಾಲೋಡಗಿ)ಜೆ ಡಿ ಎಸ ಮುಖಂಡರು, ಸುರೇಶಬಾಬುಗೌಡ ಬಿರಾದಾರ ಮಾಜಿ ಕೃ ಉ ಮಾ ಸ ಸದಸ್ಯರು ತಾಳಿಕೋಟೆ, ಬಿ ಬಿ ಇಂಗಳಗಿ ರಾಜ್ಯ ಕಾರ್ಯದರ್ಶಿಗಳು, ಪಿಂಟು ಗಬ್ಬೂರ ಜಿಲ್ಲಾ ಉಪಾಧ್ಯಕ್ಷರು ವಿಜಯಪುರ, ಸಂಗಮೇಶಗೌಡ ದಾಶ್ಯಾಳ ಜಿಲ್ಲಾ ಕಾರ್ಯಕ್ಷರು, ಶಿವನಗೌಡ ಬಿರಾದಾರ(ಅಸ್ಕಿ) ಜಿಲ್ಲಾ ಮುಖಂಡರು, ಬಸವರಾಜ ಸಿಂಗನಳ್ಳಿ ತಾಳಿಕೋಟಿ ತಾಲೂಕ ಅಧ್ಯಕ್ಷರು, ಚನ್ನಗೌಡ ಪಾಟೀಲ, ಬಸವಂತ್ರಾಯ ಬಿರಾದಾರ, ಮಲ್ಲನಗೌಡ ಆನೆಸುರ, ನಿಂಗನಗೌಡ ಬಿರಾದಾರ, ಭೀಮನಗೌಡ ಟಕ್ಕಳಕಿ, ಯಮನೂರಿ ಸವದಿ, ವೀರೇಶ್ ಹಿರೇಮಠ, ಬಾಲಪ್ಪ ಗೌಡ ಲಿಂಗದಳ್ಳಿ, ಹಣಮಂತ್ರಾಯ ಹಾಲರೆಡ್ಡಿ, ರುದ್ರಗೌಡ ಬಿರಾದಾರ, ರವಿ ಐನಾಪುರ, ನಿಂಗನಗೌಡ ಪಾಟೀಲ, ರಾಮನಗೌಡ ತಂಬಗಿ, ಸಂಗನಗೌಡ ಮೂಲಿಮನಿ, ದೇವಾನಂದಗೌಡ ಪಾಟಿಲ ಹಲವರು ಉಪಸ್ಥಿತರಿದ್ದರು.