ಬೇಸಿಗೆಯ ಧಾರ್ಮಿಕ ಶಿಬಿರ ಉದ್ಘಾಟನೆ
ರಾಣಿಬೆನ್ನೂರ 29: ಶಾಲಾ ರಜಾ ದಿನಗಳಾದ ಬೇಸಿಗೆಯಲ್ಲಿ ನಡೆಯುವ ಧಾರ್ಮಿಕ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸಿ ತರಬೇತಿ ಪಡೆದಲ್ಲಿ ಒಳ್ಳೆಯ ಸಂಸ್ಕಾರದ ಜೊತೆಗೆ ಮಾನವೀಯ ಗುಣಗಳು ದೊರೆಯುತ್ತವೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಚೆನ್ನಮಲ್ಲಿಕಾರ್ಜುನ ಶಿವಾರ್ಚಾಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಚನ್ನೇಶ್ವರ ಮಠದಲ್ಲಿ ನಡೆದ 250 ನೇಯ ಜ್ಞಾನವಾಹಿನಿ ಧರ್ಮಸಭೆ ಮತ್ತು ಬೇಸಿಗೆಯ ಧಾರ್ಮಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜೀವನವೆಂಬುವುದು ಗಣಿತವಿದ್ದಂತೆ, ಓಳೇಯ ಗುಣಗಳೆಂಬ ಅಂಕಿಗೆ ಸಾತ್ವಿಕ ಗುಣವೆಂಬ ಅಂಕಿಯನ್ನು ಕೂಡಿಸಬೇಕು, ಕೆಟ್ಟಗುಣಗಳೆಂಬ ಅಂಕಿಯನ್ನು ಕಳೆಯಬೇಕು, ಸಂಸ್ಕಾರವೆಂಬ ಅಂಕಿಯನ್ನು ಗುಣಿಸುತ್ತಾ ಹೋಗಿ ದುರ್ಗಗುಣಗಳನ್ನು ಬಾಗಿಸಿ ಹುಳಿಯುವ ಶೇಷವೆ ಧರ್ಮಗುಣವಾಗಿದೆ ಎಂದು ನುಡಿದರು.
ಮಗುವಿನ ಸಂಸ್ಕಾರ ಗರ್ಭಧಾರಣೆಯಿಂದ ಹಿಡಿದು ಭೂಗರ್ಭಕ್ಕೆ ಹೊಗುವತನಕ ಸಂಸ್ಕಾರವಿರಬೇಕು. ಪ್ರಾಣಿಪಕ್ಷಿಗಳಲ್ಲಿ ನಾವು ಸಂಸ್ಕಾರವನ್ನು ಕಾಣುತ್ತೇವೆ ಆದರೆ ಅರಿವಿನ ಜನ್ಮ ತಾಳಿದ ಮನುಷ್ಯ ಸಂಸ್ಕಾರದಿಂದ ವಂಚಿತನಾಗಬಾರದು. ಬೇಕು ಬೇಕು ಎನ್ನುವ ಗುಣದ ಅಂಕಿಯನ್ನು ಕೂಡಿಸುತ್ತಾ ಹೋದರೆ ದುಃಖವೆ ಪ್ರಾಪ್ತಿಯಾಗುತ್ತದೆ. ದುಃಖದಿಂದ ಮುಕ್ತಿಪಡೆಯಬೇಕಾದರೆ ಬೇಕು ಎಂಬ ಅಂಕಿಯನ್ನು ಕಳೆದು ಸಾಕು ಎಂಬ ಅಂಕಿಯನ್ನು ಕೂಡಿಸಿದಾಗ ಲೇಕ್ಕ ಪರಿಪೂರ್ಣವಾಗುತ್ತದೆ. ಆಗ ಶಾಂತಿ ಎಂಬ ಶ್ರೇಣಿಯಿಂದ ಗಣಿತದಲ್ಲಿ ಪಾಸಾಗಿ ಮುಕ್ತಿಯಂಬ ರಾ್ಯಂಕ್ ಜೀವನದಲ್ಲಿ ದೊರಕುತ್ತದೆ ಎಂದು ಶ್ರೀಗಳು ವಿವರಿಸಿದರು.
ಸಾನಿಧ್ಯ ವಹಿಸಿದ್ದ ಶಿವಲಿಂಗೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಅ.ಸಿ. ಹಿರೇಮಠ, ಸುನಂದಮ್ಮ ತಿಳವಳ್ಳಿ, ಪ್ರೊ. ಸಾಯಿಲತಾ, ಕೋಮಲ ಪಾಟೀಲ, ರುದ್ರಮ್ಮ ರಾಮಣ್ಣ, ಗಾಯತ್ರಮ್ಮ ಕುರವತ್ತಿ, ಗುಡ್ಡಪ್ಪ ಹಿಂದಿನಮನಿ, ಮಹಾಂತೇಶ ಚಿಕ್ಕಮಠ, ಕಾಂತರಾಜ ಹರಿಹರ, ಬಸವರಾಜ ಪಟ್ಟಣಶೆಟ್ಟಿ, ಹಾಲಸ್ವಾಮಿ ಶಾಸ್ತ್ರೀ ಸೇರಿದಂತೆ ಶಿಬಿರಾರ್ಥಿಗಳು ಮತ್ತು ಮತ್ತಿತರರು ಇದ್ದರು.