ನೂತನ ಸಂಘ ಮತ್ತು ಕಾರ್ಯಾಲಯ ಉದ್ಘಾಟನೆ
ಶಿಗ್ಗಾವಿ 08: ಆಟೋ ಚಾಲಕರು ತಾವು ಬದಲಾವಣೆ ಬಯಸಿ ನೂತನ ಎಲೆಕ್ಟ್ರೀಕಲ್ ಆಟೋ ಖರೀದಿಗೆ ಮುಂದಾದರೆ ನಮ್ಮ ಸಿ ಬಿ ಯಲಿಗಾರ ಸೇವಾ ಸಂಸ್ಥೆಯಿಂದ ಉಚಿತ 10 ಸಾವಿರ ಸಹಾಯಧನ ನೀಡುತ್ತೇನೆ ಎಂದು ಗಂಗೇಬಾವಿ ಸಿ ಬಿ ಯಲಿಗಾರ ಸೇವಾ ಸಂಸ್ಥೆ ಅದ್ಯಕ್ಷ ಶಶಿಧರ ಯಲಿಗಾರ ಪುನರವೃಚ್ಚರಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ನೂತನ ಶಂಕರ್ನಾಗ್ ಆಟೋ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಹಮ್ಮಿಕೊಂಡ ನೂತನ ಸಂಘ ಮತ್ತು ಕಾರ್ಯಾಲಯ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಆಟೋ ಚಾಲಕರ ಸಂಘದ ಸದಸ್ಯರಾಗಿದ್ದರೆ ಅಂತಹ ಟೋ ಚಾಲಕರಿಗೆ ಮಾತ್ರ ಪ್ರೋತ್ಸಾಹ ಪೂರಕ ಸಹಾಯ ಮಡಲಾಗುವುದು, ಆಟೋ ಚಾಲಕರ ಜೊತೆಗೆ ಎರಡು ವರ್ಷಗಳಿಂದ ಆತ್ಮೀಯತೆ ಬ್ರಾತೃತ್ವವಾಗಿ ಬೆಳದಿದೆ, ಆಟೋ ಚಾಲಕರು ಮಳೆ, ಚಳಿ, ಹಗಲು, ರಾತ್ರಿಯೆನ್ನದೇ ನಿಶ್ವಾರ್ಥ ಸೇವೆ ಮಾಡಿ ಜೀವನ ಸಾಗಿಸುವ ಆಟೋ ಚಾಲಕರು ತಾಂತ್ರಿಕವಾಗಿ ಬದಲಾಗುತ್ತಾ ಹೋಗಬೇಕಿದೆ ಎಂದರು.
ಪಿಎಸ್ಐ ಸಂಪತ್ಕುಮಾರ ಮಾತನಾಡಿ ಸಂಘ ರಚನೆ ಆಗಿದ್ದರಿಂದ ಜವಾದ್ಬಾರಿ ಹೆಚ್ಚಾಗುತ್ತದೆ. ಚಾಲಕರು ಪೋಲಿಸ್ ಇಲಾಖೆಗೆ ಸಹಾಯಕವಾಗಿ ಯಾವಾಗಲೂ ನಿಂತಿದ್ದಾರೆ. ನಮ್ಮ ಇಲಾಖೆ ಸೂಚಿಸುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ನಮ್ಮೊಂದಿಗೆ ಇನ್ನು ಹೆಚ್ಚು ಸಹಕರಸಿ ಎಂದು ಕೇಳಿಕೊಂಡರು.
ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ ಎಚ್ ಮಾತನಾಡಿ ಆಟೋ ಚಾಲಕರು ಹೊಸ ನಾಗರೀಕನಿಗೆ ಒಬ್ಬ ರಾಯಬಾರಿ ಇದ್ದಂತೆ, ಇವರು ಜನರೊಂದಿಗೆ ನಡೆದುಕೊಳ್ಳುವ ರೀತಿಯಿಂದ ಊರಿನ ಗೌರವ ಪ್ರತಿಬಿಂಬಿಸುತ್ತದೆ. ಚಾಲಕರು ಮಾನವೀತೆಯ ತಳಹದದಿಯ ಮೇಲೆ ಕೆಲಸ ಮಾಡುತ್ತಾರೆ ಎಂದರು.
ಬಸವರಾಜ ಕುರಗೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನ ಆಟೋ ಚಾಲಕರ ಸಂಘದ ಅದ್ಯಕ್ಷ ಗೌಸಮೋದಿನ ದುಂಡಶಿ ವಹಿಸಿದ್ದರು, ಜಯಕರ್ನಾಟಕ ಸಂಘಟನೆಯ ತಾಲೂಕಾದ್ಯಕ್ಷ ದುರಗಪ್ಪ ವಡ್ಡರ, ನಿತಿನ್ ಬ್ರಹ್ಮಾವರ, ರೇಣುಕಾ, ಗುರುನಗೌಡ, ದುಂಡಿಗೌಡ, ಮುನ್ನಾ ದಖನಿ, , ನಿನ್ಹಾರ ವನಹಳ್ಳಿ, ಹನುಮಂತಪ್ಪ, ಬಂಡಿವಡ್ಡರ, ಮಂಜುನಾಥ ತಳವಾರ, ಮುಸ್ತಾಕಷ್ಯದ ಮೊತ್ತುಬಾಯಿ, ಬಸವರಾಜ ಜಾಧವ, ಗುಲಾಬಿ ಹುಲಗೂರ, ಲಕ್ಷ್ಮಣ ಬಂಡಿವಡ್ಡರ, ಶಣ್ಮುಖ ರಾಣಪ್ಪನವರ, ರುದ್ರ್ಪ ಗೌರವರ, ಜಯಪ್ಪ ನಂದಿ, ನಜೀರಹದ ನೀರಮನಿ, ವಿಠಲ ಮಾಳವಾದೆ, ಖಲಂದರ ಮಕಾನದಾರ, ದುಂಡಪ್ಪ ಕೂಟಗಿ ಸೇರಿದಂತೆ ಆಟೋ ಚಾಲಕ ಸಂಘದ ಉಳಿದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಇದ್ದರು.