ನೂತನ ವೀರಭದ್ರೇಶ್ವರ ಮಹಾದ್ವಾರ ಲೋಕಾರ್ಪಣೆ
ಇಂಡಿ05: ತಾಲೂಕಿನ ಚೋರಗಿ ಗ್ರಾಮದ ನೂತನ ವೀರಭದ್ರೇಶ್ವರ ಮಹಾದ್ವಾರ ಲೋಕಾರೆ್ಣ, ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ ಕಾರ್ಯಕ್ರಮ ಅ.8 ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ನೇತೃತ್ವವನ್ನು ತದ್ದೇವಾಡಿಯ ಮಾಂತಯ್ಯ ಹಿರೇಮಠ, ದುಂಡಯ್ಯಾ ಹಿರೇಮಠ, ಶಿವಯ್ಯ ಹಿರೇಮಠ, ರಾಚಯ್ಯ ಹಿರೇಮಠ, ರುದ್ರಮುನಿ ಹಿರೇಮಠ, ಮಾದೇವಯ್ಯ ಹಿರೇಮಠ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಉದ್ಯಮಿ ಬಾಬುಗೌಡ ಬಿರಾದಾರ, ಉದ್ಘಾಟನೆಯನ್ನು ಹಣಮಂತ್ರಾಯಗೌಡ ಬಿರಾದಾರ, ಶಾಸಕ ಯಶವಂತ್ರಾಯಗೌಡ ಪಾಟೀಲ, ಸೇರಿದಂತೆ ದಯಾಸಾಗರ ಪಾಟೀಲ, ಬಿ.ಡಿ. ಪಾಟೀಲ, ಕಾಸುಗೌಡ ಬಿರಾದಾರ, ಮಹೇಶ ರಾಂಪೂರ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಎಂದು ವೀರಭದ್ರೇಶ್ವರ ದೇವಸ್ಥಾನ ಕಮೀಟಿ ಪ್ರಕಟಣೆ ತಿಳಿಸಿದೆ.