ಶಿಗ್ಗಾವ್

ಕ.ಜಾ.ವಿ.ವಿಯಲ್ಲಿ ಚಿತ್ರಕಲಾ ಪ್ರದರ್ಶನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಕ.ಜಾ.ವಿ.ವಿಯಲ್ಲಿ ಚಿತ್ರಕಲಾ ಪ್ರದರ್ಶನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ 

ಶಿಗ್ಗಾವಿ 10: ಒಬ್ಬ  ವ್ಶಕ್ತಿಗೆ ತಾನು ಮಾಡುವ ಕೆಲಸದ ಬಗ್ಗೆ ಆಸಕ್ತಿ ಇರಬೇಕು ಅಂದಾಗ ಅವನು ಏನನ್ನಾದರು ಸಾಧಿಸಲು ಸಾದ್ಯ ಎಂದು ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ.ಟಿ.ಎಮ್‌.ಭಾಸ್ಕರ ಹೇಳಿದರು.                                           

ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿವಿಯಲ್ಲಿ ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಏರಿ​‍್ಡಸಿದ ಚಿತ್ರಕಲಾ ಪ್ರದರ್ಶನ ಹಾಗೂ ಸಾಂಸ್ರ್ಕತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಬುದ್ದನಿಗೂ ಮತ್ತು ಚಿತ್ರಕಲೆಗೂ ಅವಿನಾಭಾವ ಸಂಭದವಿದೆ ಚಿತ್ರಕಲೆ ಎನ್ನುವುದು ಒಬ್ಬ ಕಲಾವಿದನ ಭಾವನೆಗಳ ಅಭಿವ್ಯಕ್ತಿ. ಹಾಗಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೋದಕರು ತಮ್ಮಲ್ಲಿರುವ ವಿಶೇಷ ಕಲೆಯ ಮೂಲಕ ವಿಶ್ವವಿದ್ಯಾಲಯವನ್ನು ಹೊರ ಜಗತ್ತಿಗೆ ಪರಿಚಯಿಸಬೇಕು ಎಂದರು.                                        

ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ್ ಮಾತನಾಡಿ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಆಜಾದಿ ಕಾ ಅಮ್ರತ ಮಹೋತ್ಸವ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಬೇಕೆಂಬ ನಿರ್ಧೇಶನ ನೀಡಿದೆ ಹಾಗಾಗಿ ಒಂದು ವಾರಗಳ ಕಾಲ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ,ಪ್ರಬಂಧ, ಭಾಷಣ, ಕಿರುನಾಟಕ, ಚರ್ಚಾಸ್ಪರ್ದೆಯಂತಹ ಅನೇಕ ಕಾರ್ಯಕ್ರಮಗಳನ್ನು ಏರಿ​‍್ಡಸಲಾಗಿದೆ ಎಂದರು.           

ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್‌.ಎಮ್‌.ಸಾಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಇತರ ಸಾಂಸ್ರ್ಕತಿಕ ಚಟುವಟಿಕೆಗಳು ಅತ್ಯಗತ್ಯ ತಾವು ಮಾಡುವ ಕೆಲಸದ ಪೂರ್ವಾಪರ ಮಾಹಿತಿ ತೀಳಿದಿರಬೇಕು ಹಾಗಾಗಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಭಾರತ ಸ್ವಾತಂತ್ರ್ಯ ಅಮ್ರುತ ಮಹೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದರು.            ಈ ಸಂದರ್ಭದಲ್ಲಿ ಹಿರಿಯ ಸಂಶೋಧನಾದಿಕಾರಿ ಡಾ.ಪ್ರೇಮಕುಮಾರ, ಸಹಾಯಕ ಕುಲಸಚಿವರಾದ ಶಹಜಾನ್ ಮುದಕವಿ, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ವಿಜಯಲಕ್ಷ್ಮೀ ಗೇಟಿಯವರ ಹಾಗೂ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 


ಸುದ್ದಿ ಓದಿ