ಶಾಸಕರ ಅನುದಾನದಲ್ಲಿ ನಿರ್ಮಿಸಿದ ಸಮುದಾಯ ಭವನದ ಉದ್ಘಾಟನೆ
ಲೋಕದರ್ಶನ ವರದಿ
ರಾಣಿಬೆನ್ನೂರ 30: ಸರ್ವ ಮಹಿಳೆಯರನ್ನು ಮಾತೃ ಸ್ವರೂಪದಿಂದ ಕಂಡ ಶಿವಾಜಿ ಮಹಾರಾಜರ ಚರಿತ್ರೆ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾನುಭಾವಿಗಳ ಇತಿಹಾಸವನ್ನು ಶಿಕ್ಷಕರು ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕಲಿಸಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಬ್ರಹನ್ಮಠದ ಜಗದ್ಗುರು ಡಾಽ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಚಳಗೇರಿ ಗ್ರಾಮದ ರೇಲ್ವೆ ಸ್ಟೇಷನ್ ರಸ್ತೆಯ ತುಕ್ಕಾಭವಾನಿ ದೇವಸ್ಥಾನದಲ್ಲಿ ಶುಕ್ರವಾರ ಏರಿ್ಡಸಿದ್ದ ಶಾಸಕರ ಅನುದಾನದಲ್ಲಿ ನಿರ್ಮಿಸಿದ ಸಮುದಾಯ ಭವನದ ಉದ್ಘಾಟನೆ ಹಾಗೂ ತುಕ್ಕಾಭವಾನಿ ದೇವಸ್ಥಾನದ 25ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರುಣಕುಮಾರ ಪೂಜಾರ, ಮಾಜಿ ಸಂಸದ ಐ.ಜಿ. ಸನದಿ, ದಾವಣಗೆರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ, ಬಿಜೆಪಿ ಯುವ ಮುಖಂಡ ಮಂಜುನಾಥ ಗೌಡಶಿವಣ್ಣನವರ, ಕಾಂಗ್ರೇಸ್ ಮುಖಂಡ ಜಟ್ಟೆಪ್ಪ ಕರೆಗೌಡ್ರ, ದೇವಸ್ಥಾನ ಸಮಿತಿ ಅಧ್ಯಕ್ಷ ಮಾರುತೆಪ್ಪ ಭೋಂಸ್ಲೆ ಮಾತನಾಡಿದರು.
ಸ್ಥಳೀಯ ಕಟಗಿಹಳ್ಳಿ ಮಠದ ಡಾಽ ಮಹಾಂತೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವನ ನೀಡಿದರು. ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಬಸವಂತಣ್ಣನವರ, ಉಪಾಧ್ಯಕ್ಷೆ ಮಂಜುಳಾ ಯಲವಟ್ಟಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಪವಿತ್ರಕುಮಾರ ನಾಗೇನಹಳ್ಳಿ, ಮಂಜಣ್ಣ ನಾಗೇನಹಳ್ಳಿ, ಶಿವಪ್ಪ ನಂದಿಹಳ್ಳಿ, ಶಿವಾಜಿ ಮಾಕನೂರ, ಮಹೇಶ ಜಾಧವ, ಶಿವಮೂರ್ತಿ ದಿಲ್ಲವಾಲ, ಪರುಶರಾಮ ಕಾಳೇರ, ಫಕ್ಕೀರೇಶ ಜಾಧವ, ರಮೇಶ ಲೋಕಿಕೇರಿ, ನಾಗವೇಣಿ ಪವಾರ, ಮಾಲತೇಶ ಅಂಗಡಿ, ಸರ್ವಪ್ಪ ಮಾಕನೂರ, ಕುಮಾರ ಅಂಗಡಿ ಸೇರಿದಂತೆ ಮತ್ತಿತರರು ಇದ್ದರು.
ನಯನ ನಾಗೇನಹಳ್ಳಿ ಪ್ರಾರ್ಥಿಸಿದರು. ಮಾಲತೇಶ ಅಂಗಡಿ ಸ್ವಾಗತಿಸಿದರು. ಸುನಿತಾ ಕುಸಗೂರ ಮತ್ತು ಕುಮಾರ ಅಂಗಡಿ ನಿರೂಪಿಸಿದರು. ಶಿವಾಜಿ ಮಾಕನೂರ ವಂದಿಸಿದರು.