ಯರಗಟ್ಟಿ

ಯರಗಟ್ಟಿ ಸಂಚಾರಿ ಸಿವಿಲ್ ಜಡ್ಜ್‌, ಜೆ.ಎಂ.ಎಫ್‌.ಸಿ ನ್ಯಾಯಾಲಯದ ಉದ್ಘಾಟನೆ

ಯರಗಟ್ಟಿ ಸಂಚಾರಿ ಸಿವಿಲ್ ಜಡ್ಜ್‌, ಜೆ.ಎಂ.ಎಫ್‌.ಸಿ ನ್ಯಾಯಾಲಯದ ಉದ್ಘಾಟನೆ

ಯರಗಟ್ಟಿ 26: ಬೆಳಗಾವಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ಯರಗಟ್ಟಿ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಯರಗಟ್ಟಿಯಲ್ಲಿ ನೂತನವಾಗಿ ಆರಂಭಗೊಂಡ ಯರಗಟ್ಟಿ ಸಂಚಾರಿ ಸಿವಿಲ್ ಜಡ್ಜ್‌ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯದ ಉದ್ಘಾಟನೆ ಶನಿವಾರ ನಡೆಯಿತು. 

ಬೆಳಗಾವಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಎಲ್‌. ವಿಜಯಲಕ್ಷ್ಮೀ ಅವರು ಯರಗಟ್ಟಿ ನ್ಯಾಯಾಲಯದ ಕಛೇರಿ ಉದ್ಘಾಟಿಸಿ ಮಾತನಾಡಿ, ಯರಗಟ್ಟಿ ಭಾಗದಲ್ಲಿ 2800 ವಿವಿಧ ಪ್ರಕರಣಗಳಿದ್ದು ಇದ್ದು, ಒಂದು ಕೋರ್ಟ್‌ನಲ್ಲಿ 1000 ಸಾವಿರ ಪ್ರಕರಣಗಳಿಗೆ ಮಾತ್ರ ಅವಕಾಶ ನೀಡಬಹುದು ಆದರೆ ಈ ಕೇಸ್‌ಗಳಿಗೆ ಎರಡು ಶಾಶ್ವತ ಕೋರ್ಟ್‌ನ ಅವಶ್ಯಕತೆ ಇದೆ. ಈ ಭಾಗದಲ್ಲಿ ಕೋರ್ಟ್‌ ಆಗಿದ್ದು, ಹಲವಾರು ಜನರಿಗೆ ಸಹಾಯ ಸಹಕಾರವಾಗಿದೆ ಎಂದರು. 

ಜಿಲ್ಲಾ ಕಾನೂನು ಸೇವಾ ಸಮಿತಿ ಕಾರ್ಯದರ್ಶಿಯಾದ ಪಿ. ಮುರಳಿ ಮೋಹನರಡ್ಡಿ ಮಾತನಾಡಿ ಈ ಇಪ್ಪತ್ತೊಂದನೇ ಶತಮಾನವನ್ನು ಭಾರತೀಯ ಶತಮಾನ ಎಂಬ ಮಾತಿದೆ 

ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು  ಬದಲಾವಣೆಯನ್ನು ನೋಡುತ್ತಿದ್ದೇವೆ, ನ್ಯಾಯಾಲಯಗಳು ಜನಸ್ನೇಹಿಯಾಗಿ ಇಂದು ಇಂಟರ್ನೆಟ್ ಸೌಲಭ್ಯಗಳು, ಸಾಮಾಜಿಕ ಜಾಲತಾಣಗಳು ಜನರಿಗೆ ಪೂರಕದ ಜೊತೆಗೆ ಮಾರಕವು ಆಗಿದೆ ಏಕೆಂದರೆ ಅನೇಕ ರೀತಿಯ ಕ್ರಿಮಿನಲ್ ಚಟುವಟಿಗೆಗಳು ಈ ಇಂಟರ್ ನೆಟ್ ಸೌಲಭ್ಯದಿಂದ ಆಗುತ್ತಿರುವುದು ವಿಷಾದದ ಸಂಗತಿಯಾಗಿದೆ.  

ಯರಗಟ್ಟಿ ನ್ಯಾಯಾಲಯ ಪ್ರಾರಂಭ ಸಂತೋಷ ತಂದಿದೆ ನೂತನ ಯರಗಟ್ಟಿ ತಾಲೂಕು ಕೇಂದ್ರಸ್ಥಾನವಾಗಿರುವದರಿಂದ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ ಆಗಿರುವುದು ಈ ಭಾಗದ ನ್ಯಾಯವಾದಿಗಳಿಗೆ ಹಾಗೂ ಕಕ್ಷಿದಾರರು ಅನುಕೂಲವಾಗಿದೆ. 

ಮತ್ತು ಬರುವ ಸ.9 ರಂದು ನಡೆಯುವ ಮೇಘಾ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಆದರಿಂದ ಸಣ್ಣ ಪುಟ್ಟ ಕೇಸುಗಳನ್ನು ಬಗಿಹರಿಸಿಕೊಳ್ಳಬೇಕು ಎಂದು ಹೇಳಿದರು. ಹಾಗೂ ಕಾನೂನು ಸೇವಾ ಸಮಿತಿಯಿಂದ ಅಲವಾರು ಪ್ರಕರಣಗಳು ಬಗಿಹರಿಸಲು ಸರಕಾರಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು. 

ಸವದತ್ತಿ ನ್ಯಾಯಾಧೀಶ ಶಶಿಧರ ಎಮ್‌. ಗೌಡ, ಪ್ರಧಾನ ದಿವಾಣಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸಿದ್ದರಾಮರಡ್ಡಿ, ಯರಗಟ್ಟಿ ತಹಶಿಲ್ದಾರ ಎಮ್‌. ಎನ್‌. ಮಠದ, ಡಿಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಈರಯ್ಯ ಮಠಪತಿ, ಮಾಜಿ ಜಿ. ಪಂ. ಸದಸ್ಯರಾದ ಅಜೀತಕುಮಾರ ದೇಸಾಯಿ, ಮಾಜಿ ಪ್ರಧಾನರಾದ ನಿಖಿಲ ದೇಸಾಯಿ, ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಎಸ್‌. ಆರ್‌. ರೆಬ್ಬನ್ನವರ, ಸವದತ್ತಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್‌. ಎನ್‌. ಮುತ್ತಿನ, ಬೈಲಹೊಂಗಲ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಾನಂದ ಆನಿಗೋಳ, ಸ್ಥಳಿಯ ನ್ಯಾಯವಾದಿಗಳಾದ ಎಸ್‌. ಎನ್‌. ರಾಯರ, ಆರ್‌. ಎಸ್‌. ಆಲದಕಟ್ಟಿ, ಡಿ. ಎ. ಜಮಾದಾರ, ವಿ. ಜಿ. ಬಿರಾದಾರಪಾಟೀಲ, ಎನ್‌. ಆಯ್‌. ನೇಗಿನಾಳ, ಎಸ್‌. ಎಸ್‌. ಯಕ್ಕೇರಿಮಠ, ಆಯ್‌. ಬಿ. ಗೌಡರ, ವಿ. ಬಿ. ಹೊಸಮನಿ, ಎಂ. ಎಂ. ಮಡಿವಾಳರ, ಎಸ್‌. ಕೆ. ಸುಭಾಸರಡ್ಡಿ, ಸ್ಥಳಿಯರಾದ ಶಿವಾನಂದ ಕರಿಗೊಣ್ಣವರ, ವಿಶಾಲಗೌಡ ಪಾಟೀಲ, ಎಮ್‌. ಆರ್ ಅಡಕಿ, ಸೋಮು ರೈನಾಪೂರ, ನಿಖಿಲ ಪಾಟೀಲ, ಸುರೇಶ ಭಜಂತ್ರಿ, ರಫಿಕ ಡಿ. ಕೆ. ಹಾಗೂ ಸರಕಾರಿ ನ್ಯಾಯವಾಧಿಗಳು ಕಕ್ಷಿದಾರರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ