ಶಿಗ್ಗಾವ್

ವಾಲ್ಮೀಕಿ ಸಭಾ ಭವನ ಉದ್ಘಾಟನೆ

ವಾಲ್ಮೀಕಿ ಸಭಾ ಭವನ ಉದ್ಘಾಟನೆ

ಶಿಗ್ಗಾವಿ 07:ಕುಂದಗೋಳ ತಾಲೂಕಿನ ಕೊಡ್ಲಿವಾಡ ಗ್ರಾಮದಲ್ಲಿ ವಾಲ್ಮೀಕಿ ಸಭಾ ಭವನ ಉದ್ಘಾಟನೆ ಹಾಗೂ ಶ್ರಾವಣ ಮಾಸದ ಪ್ರಯುಕ್ತ ನೆಡೆದ ಭಜನೆ ಮುಕ್ತಾಯ ಸಮಾರಂಭಕ್ಕೆ ಪರಿಶಿಷ್ಟ ಪಂಗಡ ಸಚಿವಾಲಯದ ಸಚಿವರು ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರು ಸಭಾ ಭವನ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಶಿಗ್ಗಾವಿ ತಾಲೂಕ ಭಾರತೀಯ ಜನತಾ ಪಕ್ಷದ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸನಗೌಡ ರಾಮನಗೌಡ್ರ, ಎಸ್.ಟಿ. ಮೋರ್ಚಾ ಅಧ್ಯಕ್ಷ ಹನುಮಂತಪ್ಪ ಗುಳೇದ, ಪ್ರಧಾನ ಕಾರ್ಯದರ್ಶಿ ಸಂಜೀವ ಕುಮಾರ ಹುಲಗೂರ, ನಾಗರಾಜಕೋಶಪ್ಪನವರ, ಶರಣಪ್ಪಗೌಡ ನಾಯಕರ, ವೀರಪ್ಪರೊಟ್ಟಿಗವಾಡ, ಮಲ್ಲೇಶ ಮುಂದಿನಮನಿ ಸೇರಿದಂತೆ ಕಾರ್ಯಕ್ರಮದಲ್ಲಿ ಎಸ್.ಟಿ. ಮೋರ್ಚಾದ ಪಧಾದಿಕಾರಿಗಳು ಹಾಗೂ ಯುವ ಮೋರ್ಚಾದ ಸದ್ಯಸರು ಸೇರಿದಂತೆ ಗ್ರಾಮದ ಸಮಸ್ತ ರೈತ ಭಾಂದವರು  ಉಪಸ್ಥಿತರಿದ್ದರು.

ಸುದ್ದಿ ಓದಿ