ಸಾಮೂಹಿಕ ಒಗ್ಗಟ್ಟಿನ ಪ್ರತಿಪಾದನೆ ಅವಶ್ಯ: ಸೊಬಟಿ
ಶಿಗ್ಗಾವಿ 16: ಸಾಮೂಹಿಕ ಒಗ್ಗಟ್ಟಿನ ಪ್ರತಿಪಾದನೆ ಇಂದು ಅವಶ್ಯವಾಗಿದ್ದು ಆಡಳಿತ ವ್ಯವಸ್ಥೆಯಲ್ಲಿ ಒಕ್ಕೂಟ ವ್ಯವಸ್ಥೆ ಬೇಕಿದೆ ಎಂದು ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಡಾ. ಚಂದ್ರಪ್ಪ ಸೊಬಟಿ ಅಭಿಪ್ರಾಯಪಟ್ಟರು.
ಸೋಮವಾರ ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ನಡೆದ ಕಾಲೇಜು ಒಕ್ಕೂಟದ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುಟುಂಬ ವ್ಯವಸ್ಥೆ ಛಿದ್ರ ಛಿದ್ರವಾಗಿದೆ, ನವ ಬಂಡವಾಳ ಶಾಹಿಗಳ ಗುಲಾಮರಾಗುತ್ತಿದ್ದೇವೆ, ಮನುಷ್ಯ ಸಂಬಂಧಗಳು ಯಾಂತ್ರಿಕೃತವಾಗುತ್ತಿವೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯವ ವಾತಾವರಣ ಮರೆಯಾಗಿದೆ, ಶರಣರ ಕಾಯಕ ಪರಂಪರೆಯನ್ನು ಮೆಲುಕು ಹಾಕುವ ಅವಶ್ಯಕತೆ ಇದೆ, ವೈವಿದ್ಯತೆಯ ಗುಣಗಳಿಗೆ ಒಗ್ಗಟ್ಟು ತರುವ ವ್ಯವಸ್ಥೆಯೇ ಒಕ್ಕೂಟ ವ್ಯವಸ್ಥೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾಲೇಜಿನ ಪ್ರಾಚಾರ್ಯರಿಗೆ ಪೋಸ್ಟ್ ಡಾಕ್ಟರೇಟ್ ಪೆಲೋ ವರದಿಯನ್ನು ಅರ್ಪಿಸಿ ಮಾತನಾಡಿದ ಡಾ. ಸುಮಂಗಲಾ ಅತ್ತೀಗೇರಿ ಸದುಪಯೋಗವಾಗಲೆಂದೆ ಹಲವಾರು ಸರಕಾರದ ಯೋಜನೆಗಳಿವೆ ಅವುಗಳನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಜೊತೆಗೆ ಯುಜಿಸಿ ಯಿಂದ ಪೋಸ್ಟ್ ಡಾಕ್ಟರೇಟ್ ಫಿಲೋಸಫಿಗಳ ಕುರಿತು ವಿವರಿಸಿದರು.
ಕಾಲೇಜಿನ ಕಾರ್ಯದರ್ಶಿ ಎಸ್ ಬಿ ಹಿರೇಮಠ ಅದ್ಯಕ್ಷತೆವಹಿಸಿ ಮಾತನಾಡಿದರು, ಪ್ರಾಚಾರ್ಯ ಪ್ರೊ. ಪಿ ಸಿ ಹಿರೇಮಠ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು, ಕಾಲೇಜಿನ ಪ್ರೊ. ಡಿ ಎ ಗೊಬ್ಬರಗುಂಪಿ ಅವರು ಕಾಲೇಜು ನಡೆದು ಬಂದ ದಾರಿಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾದ್ಯಾಪಕ ವೃಂದ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ದೈಹಿಕ ಶಿಕ್ಷಕ, ಡಾ. ವಿನಯ ಎಚ್ ಕೆ ಸ್ವಾಗತಿಸಿದರು. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಎಚ್ ಡಿ ದೇವಿಹೊಸೂರ ವಂದಿಸಿದರು. ಸಾಧಿಕ ನದಾಫ್ ನಿರ್ವಹಿಸಿದರು.