ಯರಗಟ್ಟಿ

ಬಸವೇಶ್ವರ ಜಾತ್ರಾಮಹೋತ್ಸವದಲ್ಲಿ ಸಿಡದೆದ್ದ ಸೂರ್ಯ ಚಂದ್ರ ನಾಟಕ ಉದ್ಘಾಟನೆ

ಬಸವೇಶ್ವರ ಜಾತ್ರಾಮಹೋತ್ಸವದಲ್ಲಿ ಸಿಡದೆದ್ದ ಸೂರ್ಯ ಚಂದ್ರ ನಾಟಕ ಉದ್ಘಾಟನೆ

ಲೋಕದರ್ಶನ ವರದಿ

ಯರಗಟ್ಟಿ :  ನಾಟಕಗಳು ನಮ್ಮ ಪ್ರಾಚೀನ ಕಲೆಯ ಹಾಗೂ ನಮ್ಮ ಸಂಸ್ಕೃತಿಯ ಪಾವಿತ್ಯ್ರ ಸಾರುತ್ತವೆ. ಪ್ರಾಚೀನ ಕಲೆಗಳು ಉಳಿಯಬೇಕು ಹಾಗೂ ಉಳಿಸಬೇಕು ಎಂದು ಗುತ್ತಿಗೋಳಿ ಹೊಸಕೊಟಿ ಅಭಿನವ ರೇವಯ್ಯ ಸ್ವಾಮೀಜಿ ಹೇಳಿದರು.

ಸಮೀಪದ  ಜಾಲಿಕಟ್ಟಿ ಗ್ರಾಮದಲ್ಲಿ ಮಂಗಳವಾರ ಶ್ರಾವಣ ಮಾಸದ ನಿಮಿತ್ಯ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವದಲ್ಲಿ, ಕೂಗು ಬಸವೇಶ್ವರ ಯಂಗ ಸ್ಟಾರ ನಾಟ್ಯ ಸಂಘ ಇವರು ಹಮ್ಮಿಕೊಂಡಿದ್ದ ಸಿಡದೆದ್ದ ಸೂರ್ಯ ಚಂದ್ರ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಧಾರ್ಮಿಕ ಮನೋಭಾವನೆ ಬೆಳಸಿಕೊಳ್ಳಬೇಕು. ಧಾಮರ್ಿಕ ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇತ್ತೀಚೆಗೆ ದೃಶ್ಯ ಮಾಧಮಗಳ ಹಾವಳಿಯಿಂದ ರಂಗಭೂಮಿ ನಶಿಸಿ ಹೋಗುತ್ತಿದೆ ರಂಗಭೂಮಿ ಕಲೆ ಉಳುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

  ಗ್ರಾಪಂ ಸದಸ್ಯ ಚನ್ನಯ್ಯ ಪೂಜೇರ ಮಾತನಾಡಿ, ಧಾಮರ್ಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗಗಳಾಗಿವೆ. ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಬರುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರು, ಶಿಕ್ಷಕರು,ಗಣ್ಯರನ್ನು ಶ್ರೀಗಳು ಸನ್ಮಾನಿಸಿದರು..

 ವೇದ ಮುರ್ತಿ ಸಂಗಯ್ಯ ಹಿರೇಮಠ, ಬಸವರಾಜ ಕಡಬಿ, ವಾಯ್.ಎಫ್.ನಾಯ್ಕರ, ಗಂಗಯ್ಯ ಹಿರೇಮಠ, ಈರಯ್ಯ ಗೌಡರ, ಬಸಯ್ಯ ಅಟಿಗಲ್ಲಮಠ, ಬಸವರಾಜ ಕಂಬಾರ, ಎಮ್.ಬಿ.ಯಡಳ್ಳಿ, ಶಿವಾನಂದ ನಾಯ್ಕರ, ಶಂಕರಯ್ಯ ದರೆಪ್ಪನವರ, ಬಸಪ್ಪ ಬಂಡ್ರೊಳಿ, ಗುರಬಸಯ್ಯ ಪೂಜೇರ, ಮಂಜು ನಾಯ್ಕರ, ಮಲ್ಲಪ್ಪ ಕಂಬಾರ, ಜಿ.ಬಿ.ಗೌಡರ ಸೇರಿದಂತೆ ಇತರರು ಇದ್ದರು 

ಸುದ್ದಿ ಓದಿ