ಯರಗಟ್ಟಿ

ಶ್ರೀ ಹೇಮರಡ್ಡಿ ಮಲ್ಲಮ್ಮನ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಶ್ರೀ ಹೇಮರಡ್ಡಿ ಮಲ್ಲಮ್ಮನ ನೂತನ ದೇವಸ್ಥಾನ ಉದ್ಘಾಟನೆ  ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಯರಗಟ್ಟಿ 12: ಸಮೀಪದ ತೋರಣಗಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಮಹಾಸ್ವಾದಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪಣೆ ಕಾರ್ಯಕ್ರಮ ಜರುಗಿತು. 

ಮಂಗಳವಾರ ದಿ 05 ರಿಂದ ಗುರುವಾರ 07 ರವರೆಗೆ ನಾನಾ ಕಾರ್ಯಕ್ರಮ ಜರುಗಿದವು, ಮಂಗಳವಾರದಂದು ಮುತ್ತೈದೆಯರು ಆರತಿ,ಕುಂಭಮೇಳ ವಿವಿಧ ವಾಧ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೇಮರಡ್ಡಿ ಮಲ್ಲಮ್ಮನ ಮೂರ್ತಿ ಜರುಗಿತು.  

ಬುಧವಾರದಂದು ಮುಂಜಾನೆ ಬ್ರಾಹ್ಮೀ ಮೂರ್ತದಲ್ಲಿ ವಿದಿವಿಧಾನಗಳಿಂದ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನವಾಗಿ ನಿರ್ಮಿಸಿದ ದೇವಸ್ಥಾನದ ಕಳಸಾರೊಹನ ಮಾಡಲಾಯಿತು. ಸಾಯಂಕಲ ಮುಂತದ ಭಜನಾ ಮಂಡಳಿ ಅವರಿಂದ ಭಕ್ತಿ ಬಜನೆ ಕಾರ್ಯಕ್ರಮವು ಜರುಗಿತು ನಂತರ ಗುರುವಾರದಂದು ಮುಂಜಾನೆ ದೇವಿ ಆರಧಕರಿಂದ ಸಾಮೊಹಿಕ ದೇವಿ ಪಾರಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ನಂತರ ಸತ್ಸಂಗ ಸಭೆ ನಡೆಸಿ ಕಗ್ಗಲ್ಲಣ್ಣನ ವಚನಗಳಲ್ಲಿ ವೇದಾಂತ ಸಾರ ಎಂಬ ಗ್ರಂಥವನ್ನು ಲೋಕಾರೆ​‍್ನ ಮಾಡಿದರು, ಸಂಜೆ 7 ಗಂಟೆಗೆ ಜ್ಯಾನಾಮೃತ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಂದ ಮಲ್ಲಕಂಬ ಹಾಗೂ ಕಸರತ್ತಿನ ಪ್ರರ್ಧಶನ ಮಾಡುವದರೊಂದಿಗೆ ಶ್ರೀ ಹೇಮರಡ್ಡಿ ಮಲ್ಲಮ್ಮಣ ನೂತನ ದೇವಸ್ಥಾನದ ಉದ್ಘಟನೆ ನಿಮಿತ್ಯ ಮೂರು ದಿನಗಳ ಕಾಲ ಕಾರ್ಯಕ್ರಮಗಳು ಅತಿ ವಿಜ್ರಂಭನೆಯಿಂದ ಜರುಗಿದವು. 


ಸುದ್ದಿ ಓದಿ