ಸ್ಕೌಟ್ ಮತ್ತು ಗೈಡ್ಸ್ ಘಟಕ ದೇವಧರರಿಂದ ಉದ್ಘಾಟನೆ
ಬ್ಯಾಡಗಿ 19: ಸ್ಕೌಟ್ ಮತ್ತು ಗೈಡ್ಸ್ ವ್ಯಕ್ತಿಯ ಬದುಕಿನಲ್ಲಿ ವಿಶ್ವಾಸಾರ್ಹತೆಯಿಂದ ನಿಷ್ಠಾವಂತರಾಗಿ ಬದುಕುವುದನ್ನು ಕಲಿಸಿಕೊಡಲಿದೆ ಎಂದು ಜಿಲ್ಲಾ ಮುಖ್ಯ ಆಯುಕ್ತೆ ಮಾಧುರಿ ದೇವಧರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಿಇಎಸ್ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಘಟಕದ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಶಿಸ್ತುಬದ್ಧ ಜೀವನಕ್ಕೆ ಕಾಲಿಡುವಂತೆ ಸ್ಕೌಟ್ ಮತ್ತು ಗೈಡ್ಸ್ ಹೇಳಿಕೊಡುತ್ತದೆ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದನೆ ಜೊತೆಗೆ ದೇಶಭಕ್ತಿ ಸಾರ್ವಜನಿಕ ಆಸ್ತಿಗಳ ಬಗ್ಗೆ ವೈಯಕ್ತಿಕ ಕಾಳಜಿಯನ್ನು ತಿಳಿಸಲಿದೆ ಎಂದರು.
ಡಾ.ಎಸ್.ಎನ್.ನಿಡಗುಂದಿ ಮಾತನಾಡಿ, ಸ್ಕೌಟ್ ಮತ್ತು ಗೈಡ್ಸ್ ತರಬೇತಿಯನ್ನು ಪಡೆದು ಕೊಳ್ಳುವ ವ್ಯಕ್ತಿಗಳಿಗೆ ಯಾವುದೇ ಜಾತಿ-ಧರ್ಮ-ವರ್ಣಗಳ ಸೀಮಿತವಲ್ಲ, ವಿದ್ಯಾರ್ಥಿದೆಸೆಯಲ್ಲಿ ಒಂದು ತರಬೇತಿ ರೂಪವಾಗಿ ಬರುವಂತಹ ಸ್ಕೌಟ್ ಮತ್ತು ಗೈಡ್ಸ್ ನಂತರದಲ್ಲಿ ಉದ್ಯೋಗದಲ್ಲಿ ಮೀಸಲಾತಿಗೆ ಉತ್ತೇಜನ ನೀಡಲಿದೆ, ಹೀಗಾಗಿ ಇದನ್ನು ಪಠ್ಯೇತರ ಚಟುವಟಕೆಗಳ ಮಾದರಿಯಲ್ಲಿ ಸ್ಕೌಟ್ ಮತ್ತು ಗೈಡ್ಸ್ನ್ನು ಕಾಲೇಜಿನಲ್ಲಿ ನಡೆಸಲಾಗುವುದು ಎಂದರು.
ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ, ಭಾರತೀಯ ಪ್ರಜೆಗಳಿಗೆ ಸ್ಕೌಟ್ ಮತ್ತು ಗೈಡ್ಸ್ನಲ್ಲಿ ಅವಕಾಶವಿರಲಿಲ್ಲ, ಬಳಿಕ 1913 ಭಾರತೀಯರಿಗಾಗಿ ನ್ಯಾಯಮೂರ್ತಿ ವಿವಿಯನ್ ಬೋಸ್, ಪಂಡಿತ್ ಮದನ ಮೋಹನ್ ಮಾಳವಿಯಾ, ಹೃದಯನಾಥ ಕುಂಜ್ರು, ಗಿರಿಜಾ ಶಂಕರ್ ಬಾಜಪೇಯಿ ಹಾಗೂ ಇನ್ನಿತರರು ಪ್ರಾರಂಭಿಸಿದ್ದಾಗಿ ತಿಳಿಸಿದರು.
ಡಾ.ಸುರೇಶಕುಮಾರ ಪಾಂಗಿ, ಜ್ಯೋತಿ ಹಿರೇಮಠ ಇವರುಗಳನ್ನು ಘಟಕಾಧಿಕಾರಿಗಳಾಗಿ ನೇಮಕ ಮಾಡಲಾಯಿತು.
ಪ್ರಾಚಾರ್ಯ ಎಂ.ಜಿ.ನಂದರಗಿ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಎಂ. ಎಲ್.ಪಾಟೀಲ, ಎಂ.ಸಿ.ಜೋಷಿ, ಎ.ಟಿ.ಪೀಠದ, ಬಸವರಾಜಪ್ಪ, ಪ್ರವೀಣ ಬಾರ್ಕಿ, ಎಚ್.ಮಂಜುಳ, ಉಪನ್ಯಾಸಕ ಡಾ. ಎಸ್.ಜಿ.ವೈದ್ಯ, ಸಿ.ಶಿವಾನಂದಪ್ಪ ಕೆ.ಎಂ.ಕಟಗಿಹಳ್ಳಿ, ಎನ್.ಎಸ್.ಪ್ರ್ರಶಾಂತ್, ಪ್ರಭುಲಿಂಗ ದೊಡ್ಮನಿ, ಸಿ.ಎಂ.ಬಣಕಾರ, ಪ್ರವೀಣ ಬಿದರಿ, ನಿವೇದಿತಾ ವಾಲಿಶೆಟ್ಟರ, ಅರವಿಂದ ಹಳ್ಯಾಳ, ರಾಜು ಮಾಕನೂರ, ಡಾ.ಎಫ್.ಎಚ್.ಗಿಡ್ಡಣ್ಣವರ ಎಸ್.ಎನ್. ಮಾಗೋಡ, ಸಿಬ್ಬಂದಿಗಳಾದ ಎಸ್.ಎಚ್.ಕುರಕುಂದಿ, ಸಂತೋಷ ಉದ್ಯೋಗಣ್ಣನವರ, ಎಂ.ಆರ್.ಕೋಡಿಹಳ್ಳಿ, ಬಸಮ್ಮ ನಾಯ್ಕರ್ ಇನ್ನಿತರರು ಉಪಸ್ಥಿತರಿದ್ದರು.