ತಾಳಿಕೋಟಿ

ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಉದ್ಘಾಟನೆ

ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಉದ್ಘಾಟನೆ
ತಾಳಿಕೋಟೆ ತಾಲೂಕಿನ ಬಾವೂರ ಗ್ರಾಮದ ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಉದ್ಘಾಟನಾ ಸಮಾರಂಭ ನಡೆಯಿತು.

ತಾಳಿಕೋಟೆ 15: ಕುರುಹಿನಶೆಟ್ಟಿ ಸಮಾಜ ಬಡ ಸಮುದಾಯವಾದರು ಸ್ವಾಭಿಮಾನಿ ಸಮುದಾಯ. ಆದರೆ ನೇಕಾರಿಕೆ ಇಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದು ಸರಕಾರ ಮಧ್ಯ ಪ್ರವೇಶ ಮಾಡಿ ಆರ್ಥಿಕ ನೆರವು ನೀಡಿ ನೇಕಾರಿಕೆಯನ್ನು ಉಳಿಸಬೇಕಾಗಿದೆ ಎಂದು ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿಮಠದ ಶಿವಶಂಕರ ಸ್ವಾಮಿಗಳು ಹೇಳಿದರು. 

ತಾಲೂಕಿನ ಬಾವೂರ ಗ್ರಾಮದಲ್ಲಿ ಗ್ರಾಮದ ಕುರುಹಿನಶೆಟ್ಟಿ ಸಮಾಜದ ಯುವಕರು ಸೇರಿಕೊಂಡು ಆರಂಭಿಸಿರುವ ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 

ಸಮುದಾಯದ ಜನರು ಇದೇ ತರನಾಗಿ ಒಗ್ಗಟ್ಟಾಗಿ ಮುಂದುವರೆದರೆ ಭವಿಷ್ಯದಲ್ಲಿ ದೊಡ್ಡ ಪ್ರಮಾಣದ ಸಮಾಜವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ. ಮುಂದಿನ ಪೀಳಿಗೆಯು ಸಮುದಾಯದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಬೇಕಾದರೆ ಹಿರಿಯರ ಮಾರ್ಗದರ್ಶನ ಅವಶ್ಯಕ ಎಂದರು. 

ಜಿಲಾ ಬಿಜೆಪಿ ಅದ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಮಾತನಾಡಿ, ಕುರುಹಿನ ಶೇಟ್ಟಿ ಸಮಾಜದವರು ಶ್ರಮಿಕರಾಗಿದ್ದಾರೆ. ನೇಕಾರಿಕೆ ಸಂಕಷ್ಠದಲ್ಲಿರುವದನ್ನು ಸರಕಾರದ ಗಮನಕ್ಕೆ ತರಲಾಗುವದು ಎಂದರು. 

ಅಧ್ಯಕ್ಷತೆಯನ್ನು ಬಾವೂರ ಗ್ರಾಮದ ಹಿರಿಯ ಮುಖಂಡ ಎಂ.ಎಂ.ದೇಶಮುಖ ವಹಿಸಿದ್ದರು. ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರ ಸಹೋದರ ಸೋಮನಗೌಡ ಪಾಟೀಲ, ಹೊಸಪೇಟೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಲತವಾಡ, ನಿವೃತ್ತ ಪ್ರಾಚಾರ್ಯ  ಎಸ್‌.ಎನ್‌.ಅಗ್ನಿ, ಕುರುವಿನಶೆಟ್ಟಿ ಸಮಾಜದ ಅಧ್ಯಕ್ಷ ಈರಣ್ಣ ಕಾರಗನೂರ ಬಾವೂರ,  ಹನುಮಂತಪ್ಪ ನಿಂಗಪ್ಪ ಅರಬಿ, ರಾಮಚಂದ್ರ​‍್ಪ ಮ್ಯಾಗಡಿ, ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಶಿವಕುಮಾರ ಮುರಾಳ, ಉಪಾಧ್ಯಕ್ಷ ನೆಹರು ಮ್ಯಾಗಡಿ ಸೇರಿದಂತೆ ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟನ ಪದಾಧಿಕಾರಿಗಳು ಹಾಗೂ ಸದಸ್ಯರು, ಮತ್ತು ಬಾವೂರ ಗ್ರಾಮದ ಕುರುಹಿನಶೆಟ್ಟಿ ಸಮಾಜದವರು ಉಪಸ್ಥಿತರಿದ್ದರು. 

ಸುದ್ದಿ ಓದಿ