ತಾಳಿಕೋಟಿ

3 ಮಂಗಳವಾರ ರಂದು ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ

3 ಮಂಗಳವಾರ ರಂದು ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ

ತಾಳಿಕೋಟೆ01: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಸಾಂಸ್ಕೃತಿಕ ಭವನದ ಶಂಕು ಸ್ಥಾಪನೆ ಹಾಗೂ ರೆಡ್ಡಿ ಸಮುದಾಯ ಭವನದ ಭೂಮಿ ಪೂಜಾ ಸಮಾರಂಭವು ದಿ.3 ಮಂಗಳವಾರ ಅದ್ದೂರಿಯಾಗಿ ನಡೆಯಲಿದೆ ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಸೋಶಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ. 

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಪಟ್ಟಣದ ಹಳೆಯ ಹುಡ್ಕೋ ಕಾಲನಿಯಲ್ಲಿ ಶಿವಶರನೆ ಹೇಮರೆಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದ್ದು, ದೇವಸ್ಥಾನ ಉದ್ಘಾಟನೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ. 3 ರಂದು ಬೆಳಿಗ್ಗೆ 7 ಗಂಟೆಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿ ಭವ್ಯ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾಡಲಾಗುವದು. ಮೆರವಣಿಗೆಯಲ್ಲಿ 500 ಸುಮಂಗಲೆಯರಿಂದ ಕುಂಬವನ್ನು ಹೊತ್ತು ಸಾಗಲಿದ್ದಾರೆ. ಮೆರವಣಿಗೆಗೆ ಎಮ್‌.ಬಿ.ಪಾಟೀಲ ಪೌಂಡೇಶನ್ ಮುಖ್ಯಸ್ಥೆ ಆಶಾ ಪಾಟೀಲ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ನಾಸಿಕ್ ಡೋಲ್, ಮಹಾಲಿಂಗಪೂರದ ಜಾಂಜ್, ಸಾಂಸ್ಕೃತಿಕ ಕಲಾ ತಂಡಗಳು ಇರಲಿವೆ. ಬೆಳಿಗ್ಗೆ 9 ಗಂಟೆಗೆ ದೇವಸ್ಥಾನವನ್ನು ಗಣಿ ಮತ್ತು ಬೂ ವಿಜ್ಞಾನ ಸಚಿವ ಹಾಲಪ್ಪ ಆಚಾರ ಉದ್ಘಾಟಿಸಲಿದ್ದಾರೆ. ದೇವಸ್ಥಾನದ ಕಳಸಾಹೋರಹಣವನ್ನು ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ನೇರವೇರಿಸಲಿದ್ದಾರೆ. ಮಾಜಿ ಸಚಿವರಾದ ಸಿ.ಎಸ್‌.ನಾಡಗೌಡ(ಅಪ್ಪಾಜಿ), ಎಸ್‌.ಆರ್‌.ಪಾಟೀಲ, ರೆಡ್ಡಿ ಸಮಾಜದ ಅಧ್ಯಕ್ಷ ಡಾ.ಬಿ.ಎಸ್‌.ಸಾಸನೂರ ಇರಲಿದ್ದಾರೆ.  ಬೆಳಿಗ್ಗೆ 11.00 ಗಂಟೆಗೆ ಎಸ್‌.ಎಸ್‌.ವಿದ್ಯಾ ಸಂಸ್ಥೆಯ ಆವರಣದಲ್ಲಿ ರೆಡ್ಡಿ ಸಮುದಾಯದ ಭೂಮಿ ಪೂಜೆ ಹಾಗೂ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿ.ಜನಾರ್ಧನರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಸೇರಿದಂತೆ ಹಲವು ರಾಜಕೀಯ ಗಣ್ಯರು, ಸಮಾಜದ ಮುಖಂಡರು, ಶಾಸಕರುಗಳು ಭಾಗವಹಿಸಲಿದ್ದಾರೆ. ವೈಧ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಮಾರ್ಚ 26 ರಂದು ಬೇಟಿ ನೀಡಿ ಶುಭವನ್ನು ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನ ಸೇರುವ ನೀರಿಕ್ಷೆ ಇದೆ ಎಂದರು. 

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ಬಸನಗೌಡ ಕುಪ್ಪಿ, ಪ್ರಭುಗೌಡ ಮದರಕಲ್ಲ, ಎಚ್‌.ಎಸ್‌.ಪಾಟೀಲ, ಶಂರಕಗೌಡ ಕಂತಲಗಾವಿ, ಬಸನಗೌಡ ಚೌಧರಿ, ಚಿಂತಪ್ಪಗೌಡ ಯಾಳಗಿ, ಬಸವರಾಜ ರಾಮನಗೌಡರ, ಅಶೋಕ ವಠಾರ, ಶರಣಗೌಡ ಬಿರಾದಾರ, ಸಂಗಮೇಶ ಮದರಕಲ್ಲ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ