ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ: ಪ್ರಚಾರ ರಥಕ್ಕೆ ಚಾಲನೆ
ತಾಳಿಕೋಟೆ 20: ಪಟ್ಟಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ ಹಾಗೂ ರೆಡ್ಡಿ ಸಮುದಾಯ ಭವನದ ಭೂಮಿಪೂಜೆ ಸಮಾರಂಭದ ಹಿನ್ನಲೆಯಲ್ಲಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆಯನ್ನು ನೀಡಲಾಯಿತು.
ಪಟ್ಟಣದ ಹಳೆ ಹುಡ್ಕೋ ಕಾಲನಿಯಲ್ಲಿ ಸಾದ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು ದೇವಸ್ಥಾನ ಉದ್ಘಾಟನೆ, ಮಲ್ಲಮ್ಮ ತಾಯಿ ಮೂರ್ತಿ ಪ್ರತಿಷ್ಠಾಪನೆ, ಸಾಂಸ್ಕೃತಿಕ ಭವನದ ಶಂಕುಸ್ಥಾಪನೆ ಹಾಗೂ ರೆಡ್ಡಿ ಸಮುದಾಯ ಭವನದ ಭೂಮಿ ಪೂಜೆಯನ್ನು ಮೇ. 3 ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ತಾಲೂಕಿನಾಧ್ಯಂತ ಸಂಚರಿಸಿ ಪ್ರಚಾರ ನಡೆಸಲು ಪ್ರಚಾರ ರಥಕ್ಕೆ ಚಾಲನೆಯನ್ನು ನೀಡಲಾಯಿತು. ಪಟ್ಟಣದ ಖಾಶ್ಗತೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ದೇವರು ವೇಮ-ಹೇಮ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಸಮಾಜದ ಮುಖಂಡರು, ಮೇ.3 ರಂದು ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ನಾಡಿನ ಶ್ರೀಗಳು, ಸಾಧು ಸಂತರು, ರಾಜಕೀಯ ಗಣ್ಯರು ಭಾಗವಹಿಸಿಲಿದ್ದಾರೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಇದೇ ಏ.22ರಿಂದ ಮೇ 2ರವರೆಗೆ ಪ್ರತಿ ದಿನ ಸಂಜೆ 6.30ರಿಂದ 7.30ರವರೆಗೆ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ತಾಯಿಯ ಪುರಾಣ ನಡೆಯಲಿದೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ರೆಡ್ಡಿ ಸಮಾಜದ ಬಾಂಧವರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರಚಾರ ರಥಕ್ಕೆ ಚಾಲನೆ ನೀಡಲಿದೆ. ಎರಡು ರಥಗಳು ಪ್ರತಿಯೊಂದು ಹಳ್ಳಿಗೆ ಹೋಗಿ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳನ್ನು ಆಹ್ವಾನಿಸಲಿದೆ ಎಂದರು.
ಈ ಸಂದರ್ಭದಲ್ಲಿ ಶರಣೆ ಶಾಂತಮ್ಮ ಕೋಳೂರ, ಸಮಾಜದ ಪ್ರಮುಖರಾದ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಿಂಗನಗೌಡ ದೊಡ್ಡಮನಿ, ಎಂ.ಜಿ.ಪಾಟೀಲ ಗುಂಡಕನಾಳ, ಸಿದ್ದನಗೌಡ ಪಾಟೀಲ ನಾವದಗಿ, ಬಿ.ಎಸ್.ಬಿರಾದಾರ, ಪ್ರಭುಗೌಡ ಮದರಕಲ್ಲ, ಎಚ್.ಎಸ್.ಪಾಟೀಲ, ಬಸನಗೌಡ ವಣಿಕ್ಯಾಳ, ಶಂಕ್ರಗೌಡ ಕಂತಲಗಾವಿ, ಶರಣಗೌಡ ಇಬ್ರಾಹಿಂಪುರ, ಎಸ್.ಐ.ಕಡಕೋಳ, ವಿ.ಸಿ.ಕವಡಿಮಟ್ಟಿ, ಎಂ.ಎಚ್.ಚೌದ್ರಿ, ಎಚ್.ಬಿ.ಕರೆಕಲ್ಲ, ಎ.ಎಂ.ಮೂಲಿಮನಿ, ಸಂಗನಗೌಡ ಅಸ್ಕಿ, ಸಂಗಮೇಶ ದೇಸಾಯಿ, ಪ್ರಭುಗೌಡ ಚೌದ್ರಿ, ಬಸನಗೌಡ ಮಾಳಿ, ಕಾಶಿಬಾಯಿ ಬಿರಾದಾರ, ಸುಮಂಗಲಾ ಕೋಳೂರ ಸೇರಿದಂತೆ ಇತರರು ಇದ್ದರು.