ಬ್ಯಾಡ್ಗಿ

ಬಾಲಕಿಯರ ಥ್ರೋಬಾಲ್ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟನೆ

ಬಾಲಕಿಯರ ಥ್ರೋಬಾಲ್ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟನೆ

ಲೋಕದರ್ಶನ ವರದಿ 

ಬ್ಯಾಡಗಿ 06: ಸದೃಢ ಭಾರತಕ್ಕಾಗಿ ಕ್ರೀಡೆಗಳು ಬೇಕು ಆದರೆ ದೈಹಿಕ ಚಟುವಟಿಕೆಯಲ್ಲಿ ಹಿಂದೆ ಬಿದ್ದಿರುವ ಭಾರತೀಯ ಯುವ ಕರು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ನೀರೀಕ್ಷಿತ ಯಶಸ್ಸು ಸಾಧಿಸುವಲ್ಲಿ ವಿಫಲವಾಗುತ್ತಿದ್ದಾರೆ, ರಾಜ್ಯ ಸರ್ಕಾರ ಘೋಷಿಸಿರುವ ಶೇ.2 ರಷ್ಟು ಕ್ರೀಡಾ ಮೀಸಲಾತಿ ಶೇ.13 ಹೆಚ್ಚಿಸಿದಲ್ಲಿ ಮಾತ್ರ ಕ್ರೀಡಾಂಗಣದತ್ತ ಯುವಕರು ಮುಖ ಮಾಡಲಿದ್ದಾರೆ ಎಂದು ಕೆಎಲ್‌ಐ ಸಂಸ್ಥೆಯ ​‍್ರಾಚಾರೆ್್ಯ ಸ್ವಪ್ನ ಲೋಬೋ ಅಭಿಪ್ರಾಯ ವ್ಯಕ್ತಪಡಿಸಿದರು. 

 ಪಟ್ಟಣದ ಆದರ್ಶ ಎಜ್ಯೂಕೇಶನ್ ಶಿಕ್ಷಣ ಸಂಸ್ಥೆಯ ಆದರ್ಶ ಸೆಂಟ್ರಲ್ ಸ್ಕೂಲ್ (ಸಿಬಿಎಸ್‌ಇ) ವಿದ್ಯಾರ್ಥಿಗಳ ಬಾಲಕರ ವಾಲಿಬಾಲ್ ಬಾಲಕಿಯರ ಥ್ರೋಬಾಲ್ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. 

 ಮೋಬೈಲ್ ಹಿಂದೆ ಬಿದ್ದಿರುವ ಯುವಜನಾಂಗ ಕ್ರೀಡಾಂಗಣದಿಂದ ದೂರ ಉಳಿಯುತ್ತಿರುವುದು ಖೇದದ ಸಂಗತಿ, ದೇಹದ ಜೊತೆ ಮಾನಸಿಕ ಸದೃಡತೆಯನ್ನು ಸಹ ಅವರು ಕಳೆದುಕೊಳ್ಳುತ್ತಿದ್ದಾರೆ, ನಿತ್ಯದ ಬದುಕಿನಲ್ಲಿ ಕ್ರೀಡೆಯನ್ನೂ ಸಹ ಒಂದು ಭಾಗವಾಗಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. 

ಸಾಧಕರ ಜಯಂತಿ ನಡೆಯಲಿ:ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ಪದಕಗಳಿಸಲು ಭಾರತೀಯ ಕ್ರೀಡಾಪಟುಗಳು ಇಂದಿಗೂ ಪರದಾಡುತಿದ್ದಾರೆ, ಕ್ರೀಡೆಗಳಿಗಾಗಿ ಜೀವನವನ್ನೇ ಮುಡುಪಾಗಿಟ್ಟು ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳು ಹೆಸರು ಮತ್ತು ಸಾಧನೆ ಜನಮಾನಸದಲ್ಲಿ ಉಳಿಯದಿರುವುದು ದುರಂತ, ಸರ್ಕಾರದ ಪರವಾಗಿ ಕ್ರೀಡಾ ಸಾಧಕರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಸಾಧನೆಗೆ ಗೌರವ ಸಲ್ಲಿಸುವ ಕೆಲಸವಾಗಬೇಕಾಗಿದೆ ಎಂದರು. 

ಕ್ರೀಡೆಗಳು ಮಂಕಾಗುತ್ತಿವೆ: ಸಂಸ್ಥೆಯ ಉಪಾಧ್ಯಕ್ಷ ಜಯದೇವ ಶಿರೂರ ಮಾತನಾಡಿ, ಪ್ರೋಕಬಡ್ಡಿ ಆಯೋಜನೆಯಿಂದ ಸ್ವಲ್ಪ ಮಟ್ಟಿಗೆ ಕಬಡ್ಡಿ ಚೇತರಿಕೆ ಪಡೆದುಕೊಂಡಿದೆಯಾದರೂ ವಿದೇಶಿಗರ ಅಬ್ಬರಕ್ಕೆ ದೇಶೀಯ ಕ್ರೀಡೆಗಳಾದ ಖೋಖೋ, ಕುಸ್ತಿ ಸೇರಿದಂತೆ ಮಲ್ಲಕಂಬ ಕ್ರೀಡೆಗಳು ಅನುದಾನವಿಲ್ಲದೇ ಮಂಕಾಗಿದ್ದು ಕ್ರಮೇಣವಾಗಿ ನೇಪಥ್ಯಕ್ಕೆ ಸರಿಯುತ್ತಿವೆ ಎಂದು ವಿಷಾ ದಿಸಿದರು. ಇದಕ್ಕೂ ಮುನ್ನ ಕ್ರೀಡಾಜ್ಯೋತಿಯನ್ನು ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ತರಲಾಯಿತು, ಬಳಿಕ ಓಲಂಪಿಕ್ ಧ್ವಜಾ ರೋಹಣೆ ನಡೆಸುವ ಮೂಲಕ ವಿದ್ಯುಕ್ತವಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. 

 ವೇದಿಕೆಯಲ್ಲಿ ಆದರ್ಶ ಸಂಸ್ಥೆ ಕಾರ್ಯದರ್ಶಿ ವಿರೇಶ ಶಿರೂರು, ನಿರ್ದೇಶಕರಾದ ಸ್ನೇಹ ಶಿರೂರು, ಬಿ.ಎಂ.ಕಡೇಕೊಪ್ಪ ಹಾವೇರಿ ಡಿಸ್ಟ್ರಿಕ್ಟ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಕಾರ‌್ಯದರ್ಶಿ ಶಿವಾನಂದ ಮಲ್ಲನಗೌಡ್ರ ಪ್ರಾಚಾರ್ಯ ಅವಿನಾಶ್ ಮೋಹಿತೆ, ಮಂಜುನಾಥ ನಿಂಗನಗೌಡ್ರ, ಶಿವಾಜಿ ಸೂರ‌್ಯವಂಶಿ, ಸಿದ್ಧಲಿಂಗೇಶ್ವರ ಬಾರ್ಕಿ, ದೈಹಿಕ ಶಿಕ್ಷಕರು ಎಚ್‌.ಮಾಲತೇಶ, ಶಿವರಾಜ ಅಜಮನಿ, ಉಪಸ್ಥಿತರಿದ್ದರು. ಪ್ರವೀಣ ಬಾರ್ಕಿ ಸ್ವಾಗತಿಸಿದರು, ಎಚ್‌.ಶಾಲಿನಿ ವಂದಿಸಿದರು. ಪೂರ್ಣಿಮಾ ಬಣಕಾರ ಹಾಗೂ ಪವಿತ್ರ ಭಟ್ ನಿರೂಪಿಸಿದರು. 


ಸುದ್ದಿ ಓದಿ