ಅಧ್ಯಾಪಕರ ಸಂಘದ ಅಂತರ್ಜಾಲ ಉದ್ಘಾಟನೆ
ಲೋಕದರ್ಶನ
ವರದಿ
ಬಳ್ಳಾರಿ: ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕಾಲೇಜುಗಳ ಅಧ್ಯಾಪಕರ ಸಂಘದ ಅಂತರ್ಜಾಲ ಉದ್ಘಾಟನೆಯನ್ನು ವಿಜಯನಗರ ಕೃಷ್ಣದೇವರಾಯ ವಿಶ್ವದ್ಯಾಲಯದ ಕುಲಸಚಿವರಾದ ಡಾ.ತುಲಸಿಮಾಲಾ ಅವರು ಉದ್ಘಾಟನೆಯನ್ನು ಮಾಡಿದರು .ಪ್ರಸ್ತುತ ದಿನಮಾನಗಳಲ್ಲಿ ಅಂತರ್ಜಾಲದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂತರ್ಜಾಲದ ಸದ್ಭಳಿಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿಕೊಳ್ಳಬೇಕು.
ಅದರಲ್ಲಿ ಸಿಗುವ ಅತ್ಯುಪಯುಕ್ತವಾದ ಮಾಹಿತಿಗಳನ್ನು ಪಡೆಯುವುದರಿಂದ ನಾವುಗಳು ಭೌದ್ದಿಕವಾಗಿ ಬೆಳೆಯಲು ಸಾದ್ಯವಾಗುತ್ತದೆ. ಅಂದಂದಿನ ಮಾಹಿತಿಯನ್ನು ಪಡೆಯಲು ಅಂತರ್ಜಾಲವು ತುಂಬ ಉಪಯುಕ್ತವಾಗಿದೆ.
ಅಲ್ಲದೆ ಅಂತರ್ಜಾಲವನ್ನು ಉದ್ಘಾಟನೆಗೆ ಮಾತ್ರವೆ ಸೀಮಿತಗೊಳಿಸದೆ ನಿರಂತರವಾಗಿ ಅದರ ಉಪಯೋಗವನ್ನು ಪಡೆಯಬೇಕು. ಆಗ ಮಾತ್ರ ಅಂತರ್ಜಾಲವು ಪರಿಣಾಮಕಾರಿಯಾಗಿ ನಮಗೆ ಉಪಯೋಗವಾಗುತ್ತದೆ ಎಂದರು.ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ಹೊನ್ನೂ ಸಿದ್ದಾರ್ಥ ಅವರು ಮಾತನಾಡಿ ಅಧ್ಯಾಪಕ ಸಂಘಟನೆಗಳ ಮಹತ್ವ, ಅದರ ಕಾರ್ಯ ಸೂಚಿ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ತುಂಬ ಮಹತ್ವದಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಮಾನ್ಯ ಕಾರ್ಯದಶರ್ಿಗಳಾದ ಚೋರನೂರು ಟಿ. ಕೊಟ್ರಪ್ಪ, ರಾಜ್ಯ ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘದ ಕಾರ್ಯದಶರ್ಿಯಾದ ಡಾ.ಚಂದ್ರಶೇಖರ ಪಾಟೀಲ್, ಸಂಘದ ಅಧ್ಯಕ್ಷರಾದ ಡಾ.ಬಿ.ನಾಗರಾಜ ರೆಡ್ಡಿ, ಗೌರವ ಅಧ್ಯಕ್ಷರಾದ ಡಿ.ಗಂಗಣ್ಣ, ವೀರಶೈವ ಕಾಲೇಜಿನ ಪ್ರಾಚಾರ್ಯರಾದ ಡಾ.ಜಿ.ರಾಜಶೇಖರ, ಪ್ರದಾನ ಕಾರ್ಯದಶರ್ಿಯಾದ ಡಾ.ಬಿ.ಆರ್.ಮಂಜುನಾಥ, ಖಂಜಾಂಚಿಗಳಾದ ಡಬ್ಲ್ಯೊ.ಶರಣಪ್ಪ ಉಪಸ್ಥಿತರಿದ್ದರು.ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣ ವಿದ್ಯಾಥರ್ಿಗಳು ಪ್ರಾರ್ಥನೆ ಮತ್ತು ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಕೊಟ್ಟೂರು ಸ್ವಾಮಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಜಗದೀಶ್ ಬಸಾಪುರ್ ಅವರು ಸ್ವಾಗತಿಸಿದರು.
ಸಂಘದ ಕಾರ್ಯದಶರ್ಿಯಾದ ಡಾ.ಟಿ.ಹೆಚ್.ಬಸವರಾಜ ಅವರು ಕಾರ್ಯಕ್ರಮ ನಿರೂಪನೆಯನ್ನು ಮಾಡಿದರು.