ಜಿಲ್ಲಾಮಟ್ಟದ ಕಾನೂನು ಕಾರ್ಯಾಗಾರ ಉದ್ಘಾಟನೆ
ಬ್ಯಾಡಗಿ 28: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಕೀಲರು ಇತಿಹಾಸ ಸೃಷ್ಟಿಸಿದ್ದಾರೆ, ಹೀಗಾಗಿ ವೃತ್ತಿ ಯಲ್ಲಿರುವ ತೊಡಗಿರುವ ವಕೀಲರ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಪ್ರಸ್ತುತ ಸಮಾಜಕ್ಕೆ ಪಾರದರ್ಶಕವಾಗಿ ನ್ಯಾಯ ಒದಗಿಸುವಂತಹ ವೃತ್ತಿಪರ ವಕೀಲರ ಅವಶ್ಯಕತೆಯಿದ್ದು, ರಾಜ್ಯದ ಯುವ ವಕೀಲರಿಂದ ಗೌರವಾನ್ವಿತ ನ್ಯಾಯಾಲಯಗಳು ಇದನ್ನು ನೀರೀಕ್ಷಿಸುತ್ತಿವೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಆರ್.ನಟರಾಜ್ ಹೇಳಿದರು.
ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ರಾಜ್ಯ ವಕೀಲರ ಪರಿಷತ್ ಬೆಂಗಳೂರು, ಜಿಲ್ಲಾ ನ್ಯಾಯಾಂಗ ಹಾವೇರಿ ಹಾಗೂ ಸ್ಥಳೀಯ ನ್ಯಾಯವಾದಿಗಳ ಸಂಘ ಇವರ ಸಹಯೋಗದೊಂದಿಗೆ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ‘ಜಿಲ್ಲಾಮಟ್ಟದ ಕಾನೂನು ಕಾರಾ್ಯಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ನ್ಯಾಯಾಂಗ ವ್ಯವಸ್ಥೆ ಕೇವಲ ಎವಿಡೆನ್ಸ್ ಆಕ್ಟ್ ಆಧಾರದ ಮೇಲೆಯೇ ನಡೆಯುತ್ತಿದೆ, ವಕೀಲರು ಕೋರ್ಟಗಳಿಗೆ ನೀಡುವ ಸಾಕ್ಷಿ ಅಧಾರಗಳ ಮೇಲೆಯೇ ನ್ಯಾಯಾಧೀಶರು ತೀರ್ುಗಳನ್ನು ನೀಡುತ್ತಾ ಬಂದಿರುತ್ತಾರೆ, ಮಾನವೀಯ ನೆಲೆ ಗಟ್ಟು (ಹುಮ್ಯಾನಿಟಿ ಗ್ರೌಂಡ್ಸ್) ಹಾಗೂ ಸಾಮಾಜಿಕ ನ್ಯಾಯದ (ಸೋಷಿಯಲ್ ಜಸ್ಟೀಸ್) ಮೇಲೆ ತೀರ್ು ನೀಡಲು ಅವ ಕಾಶವಿದ್ದರೂ ಕೂಡ ಪೂರ್ಣ ಪ್ರಮಾಣದಲ್ಲಿ ಅವುಗಳನ್ನೇ ಆಧಾರವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಯುವ ವಕೀಲರು ತಮ್ಮ ಕಕ್ಷಿದಾರರಿಗೆ ಯಾವುದೇ ಕಾರಣಕ್ಕೂ ನ್ಯಾಯ ಒದಗಿಸುವ ವಿಚಾರದಲ್ಲಿ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ ಎಂದರು.
ಜವಾಬ್ದಾರಿ ಹೆಚ್ಚಾಗುತ್ತಿದೆ: ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್ ಮಾತನಾಡಿ, ಪ್ರತಿಯೊಂದು ಕೇಸ್ಗಳಲ್ಲಿ ವಕೀಲರ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತಿವೆ, ಕಾರಣವಿಷ್ಟೇ ತಾಂತ್ರಿಕತೆ ಹೆಚ್ಚಾದಂತೆ ಸಾಕ್ಷಿ ಆಧಾರಗಳ ಮೂಲಗಳನ್ನು ಹುಡುಕಾಟದ ಭಾಗಗಳು ಹೆಚ್ಚಾಗುತ್ತಿವೆ, ಅದರಲ್ಲೂ ಕೌಟುಂಬಿಕ ನ್ಯಾಯಾಲಯದ ಕೇಸ್ಗಳಲ್ಲಿ ಮೋಬೈಲ್ಗಳಲ್ಲಿನ ಮೆಸೇಜ್ಗಳು ವೈವಾಹಿಕ ಜೀವನದ ಬಿಡುಗಡೆಗೆ ಕಾರಣಗಳಾಗುತ್ತಿದ್ದು ಅದರ ಮೂಲವನ್ನು ಹುಡುಕು ವುದೂ ಸಹ ವಕೀಲರಿಗೆ ಅತ್ಯಂತ ಕಷ್ಟದ ಕೆಲಸವಾಗುತ್ತಿದೆ ಎಂದರು.
ನ್ಯಾಯಾಧೀಶರಂತೆ ವಕೀಲರಿಗೂ ತರಬೇತಿ: ವಕೀಲರ ಪರಿಷತ್ ಸದಸ್ಯ ಎ.ಎ.ಮುಗದಮ್ ಮಾತನಾಡಿ, ರಾಜ್ಯದ ಯುವ ವಕೀಲರಿಗೆ ಪರಿಷತ್ ವತಿಯಿಂದ ರಾಜ್ಯದೆಲ್ಲೆಡೆ ನೂರಾರು ತರಬೇತಿ ಕಾರಾ್ಯಗಾರಗಳನ್ನು ನಡೆಸಿದ್ದೇವೆ ಮತ್ತು ಕಾರಾ್ಯಗಾರ ನಡೆಸುವವರಿಗೂ ಪರಿಷತ್ನಿಂದ ಅಗತ್ಯವಿರುವ ತನು-ಮನ-ಧನ ಸಹಕಾರ ನೀಡಲಾಗುತ್ತಿದೆ, ನ್ಯಾಯಾಧೀಶರಿಗೆ ನೀಡು ವಂತೆ ಸರ್ಕಾರದಿಂದಲೇ ವಕೀಲರಿಗೂ ಕನಿಷ್ಟ ಒಂದು ವರ್ಷದ ತರಬೇತಿ ನೀಡುವಂತಹ ಕೆಲಸವಾಗಬೇಕಾಗಿದೆ ಎಂದರು.
ಸೀನಿಯರ್ ತ್ಯಜಿಸಿದರಷ್ಟೇ ವೃತ್ತಿಯಲ್ಲಿ ಪರಿಪೂರ್ಣರಲ್ಲ:ವಕೀಲರ ಪರಿಷತ್ ಸದಸ್ಯ ಎಚ್.ಎಸ್.ಆಸೀಫ್ ಅಲಿ ಮಾತನಾಡಿ, ಸೀನಿಯರ್ ವಕೀಲರನ್ನು ತ್ಯಜಿಸಿ ವೈಯಕ್ತಿಕವಾಗಿ ಕೇಸ್ಗಳನ್ನು ನಡೆಸುವುದರಿಂದ ಮಾತ್ರವಷ್ಟೇ ವಕೀಲಿ ವೃತ್ತಿ ಪರಿಪೂರ್ಣ ಗೊಳ್ಳುವುದಿಲ್ಲ, ಮಾಡುವ ಕೆಲಸದಲ್ಲಿ ನಂಬಿಕೆ, ಶ್ರದ್ಧೆ, ಗುರಿಮುಟ್ಟುವವರೆಗೂ ನಿರಂತರ ಪರಿಶ್ರಮವಿದ್ದಲ್ಲಿ ಹಿಡಿದ ಕೆಲಸಗ ಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಕ್ಷಿದಾರರೇ ಬ್ರಾಂಡ್ ಅಂಬಾಸಿಡರ್:ಕಾನೂನುಗಳನ್ನು ಯಾರಿಂದಲೂ ಪರಿಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ ನಾವು ಬದುಕಿರುವವರೆಗೂ ಕಲಿಯುವಂತಹದ್ದಾಗಿದೆ, ಕಕ್ಷಿದಾರರು ನಮ್ಮ ಮೇಲೆ ನಂಬಿಕೆ ಇಟ್ಟಾಗಲಷ್ಟೇ ನಾವೊಬ್ಬ ಪರಿಪೂರ್ಣ ವಕೀಲರಾಗಲು ಸಾಧ್ಯವಾಗುತ್ತದೆ, ಕಕ್ಷಿದಾರರೇ ಬ್ರಾಂಡ್ ಅಂಬಾಸಿಡರ್ಗಳು ಯಾವುದೇ ಕಾರಣಕ್ಕೂ ಅವರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದಂತೆ ಸಲಹೆ ನೀಡಿದರು, ಅನಕ್ಷರಸ್ಥ ಕಕ್ಷಿದಾರರಿಗೆ ವಿಶೇಷ ಕಾಳಜಿ ತೋರುವಂತೆ ಯುವ ವಕೀಲರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿಗಳ ಕಲ್ಯಾಣ ಟ್ರಸ್ಟ್ನ್ನು ಹೈಕೋರ್ಟ ನ್ಯಾಯಮೂರ್ತಿ ಆರ್.ನಟರಾಜ್ ಉದ್ಘಾ ಟಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು, ಹೈಕೋರ್ಟನ ಹಿರಿಯ ನ್ಯಾಯವಾದಿ ಎಂ.ವಿ.ಹಿರೇಮಠ ಸೇರಿದಂತೆ ಕೌಟುಂಬಿಕ ನ್ಯಾಯಾಲಯ ಪ್ರಧಾನ ನ್ಯಾಯಾಧೀಶರಾದ ಎಂ.ಜಿ.ಶಿವಳ್ಳಿ, ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನಿಂಗನಗೌಡ ಪಾಟೀಲ, ನ್ಯಾಯಾಧೀಶರಾದ ಎಸ್.ಟಿ.ಸತೀಶ್, ಸುರೇಶ ವಗ್ಗನವರ, ಕಿರಣ್ ಗಂಗಣ್ಣನವರ, ಎಸ್.ಎಲ್.ಲಾಡ್ಖಾನ್, ರಾಜು ಸಂಕಣ್ಣನವರ ಇನ್ನಿತರರಿದ್ದರು.
ಇದಕ್ಕೂ ಮುನ್ನ ಗೌರವಾನ್ವಿತ ನ್ಯಾಯಾಧೀಶರು ಸೇರಿದಂತೆ ಗಣ್ಯರನ್ನು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಹಿರಿಯ ವಕೀಲ ಪ್ರಭು ಶೀಗಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವೈ.ಟಿ.ಹೆಬ್ಬಳ್ಳಿ ಸಂಗಡಿ ಗರು ನಾಡಗೀತೆ ಹೇಳಿದರು, ವಕೀಲರಾದ ಭಾರತಿ ಕುಲ್ಕರ್ಣಿ ಪ್ರಾರ್ಥಿಸಿದರು, ಮಂಜುನಾಥ ಹಂಜಗಿ ಸ್ವಾಗತಿಸಿದರು, ಮೃತ್ಯುಂಜಯ ಕಾಯ್ಕದ, ಎಂ.ಎಫ್.ಮುಳಗುಂದ, ಮೃತ್ಯುಂಜಯ ಲಕ್ಕಣ್ಣನವರ ನಿರೂಪಿಸಿದರು, ನವೀನ ಮುಳಗುಂದ ವಂದಿಸಿದರು.