ದಿ. 30 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಉದ್ಘಾಟನೆ
ಧಾರವಾಡ 29: ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಹುಬ್ಬಳ್ಳಿ, ಕೆ.ಇ.ಬೋರ್ಡ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ ಮತ್ತು ಕೌಶಲ್ಯಾಭಿವೃದ್ದಿ ಹಾಗೂ ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆಯ ಸಹಕಾರದೊಂದಿಗೆ ಧಾರವಾಡ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ದಿ. 30 ರ ಬೆಳಗ್ಗೆ 10-00 ಕ್ಕೆ ಶಿವಾಜಿ ಸರ್ಕಲ್ ನಲ್ಲಿರುವ ಕೆ.ಇ.ಬೋರ್ಡ್ ಮಹಾವಿದ್ಯಾಲಯದ ಆವರಣದಲ್ಲಿ ಏರಿ್ಡಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ನೆರೆವೇರಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರು, ಶಾಸಕರಾದ ಅರವಿಂದ ಬೆಲ್ಲದ, ಕವಿಪ ಶಾಸಕರಾದ ಪ್ರದೀಪ ಶೆಟ್ಟರ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಮ್ ಆರ್ ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಆಗಮಿಸುವರು. ಅಧ್ಯಕ್ಷತೆಯನ್ನು ಕೆ.ಇ ಬೋರ್ಡ್ ನ ಅಧ್ಯಕ್ಷರಾದ ಎಸ್ ಟಿ ಪಾಟೀಲ ವಹಿಸುವರು. ಕೆ.ಇ ಬೋರ್ಡ್ ನ ಕಾರ್ಯದರ್ಶಿ ಡಿ ಎಸ್ ರಾಜಪುರೋಹಿತ, ಪ್ರಾಚಾರ್ಯರಾದ ಮೋಹನ ಸಿದ್ದಾಂತಿ ಉಪಸ್ಥಿತರಿರುವರು ಎಂದು ಶಾಸಕರು, ಉದ್ಯೋಗ ಮೇಳದ ಆಯೋಜಕರಾದ ಎಸ್ ವ್ಹಿ ಸಂಕನೂರ ಪತ್ರಿಕಾ ಪ್ರಕಟೆಯಲ್ಲಿ ತಿಳಿಸಿದ್ದಾರೆ. ಈ ಮೇಳಕ್ಕೆ ಎಸ್ ಎಸ್ ಎಲ್ ಸಿ ಯಿಂದ ಎಲ್ಲ ಹಂತದ ವಿದ್ಯಾರ್ಹತೆ ಹೊಂದಿದವರು ಭಾಗವಹಿಸಿ ಉದ್ಯೋಗ ಪಡೆಯಬಹುದು ಎಂದು ವಿನಂತಿಸಿಕೊಂಡಿದ್ದಾರೆ.