ದೇವಿ ಪುರಾಣ ಕಾರ್ಯಕ್ರಮ ಉದ್ಘಾಟನೆ
ಲೋಕದರ್ಶನ ವರದಿ
ಶಿಗ್ಗಾವಿ 08: ಧರ್ಮವೇ ನಮ್ಮ ಜೀವನ ನಾವು ಧರ್ಮದ ಆಚರಣೆಯ ಮುಖಾಂತರ ಸುಖ, ಶಾಂತಿ, ನೆಮ್ಮದಿ, ಯಶಸ್ಸನ್ನು ಪಡೆಯಬಹುದು ಎಂದು ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಶರನ್ನವರಾತ್ರಿಯ ನಿಮಿತ್ಯ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ದೇವಿ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾಡಿನಲ್ಲಿ 54 ಶಕ್ತಿ ಪೀಠಗಳಿವೆ ಅವುಗಳ ನಿತ್ಯ ದರ್ಶನ, ಪೂಜೆ ಪುನಸ್ಕಾರ, ಧಾರ್ಮಿಕ ವಿವಿಧ ಕಾರ್ಯಕ್ರಮ, ಅನ್ನಸಂತರೆ್ಣ ಇನ್ನೂಳಿದಂತೆ ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿ ಹೊರಹೊಮ್ಮಿವೆ ಅಲ್ಲದೇ ನಮ್ಮ ತಾಲೂಕಿನಲ್ಲಿ ಗಾಯತ್ರಿ ತಪೋಭೂಮಿ ಇರುವುದು ನಮ್ಮ ಪುಣ್ಯ ಹಾಗೂ ನಾವೇಲ್ಲರೂ ಭಾಗ್ಯವಂತರು ಆ ದೇವಿಯ ದರ್ಶನ ಪಡೆದು ಪುನಿತರಾಗಿರಿ ಎಂದರು.
ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ 18 ವರ್ಷದಿಂದ ಯಶಸ್ವಿಯಾಗಿ ನೆಡೆಸಿಕೊಂಡ ಬಂದ ಜಾತ್ರಾಮಹೋತ್ಸವ ಸಮಿತಿ ಸದಸ್ಯರ ಕಾರ್ಯವೈಖರಿಯನ್ನು ಶ್ಲಾಘೀಸಿದರು ಹಾಗೂ ಯುವಕರು ಹೆಚ್ಚಿನ ಸಂಖೈಯಲ್ಲಿ ಪಾಲ್ಗೋಂಡು ಗ್ರಾಮಗಳ ಅಭಿವೃದ್ದಿಯತ್ತ ಪಣತೊಡೋಣ ಎಂದರು.
ಹಂಗಾಮಿ ಅಧ್ಯಕ್ಷ ಭರಮಜ್ಜ ನವಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿ 2003 ರಿಂದ ಪ್ರಾರಂಭವಾಗಿ ನಿರಂತರವಾಗಿ ಇಲ್ಲಿಯವರೆಗೆ 18 ವರ್ಷ ಯಶಸ್ವಿಯಾಗಿ ನೆಡೆಯಲು ಕಾರಣೀಕರ್ತರಾದ ಎಲ್ಲ ಹಿರಿಯರು, ಗ್ರಾಮಸ್ಥರು, ಭಕ್ತರು ತನು ಮನ ಧನದಿಂದ ತಮ್ಮ ಸೇವೆಯನ್ನು ಸಲ್ಲಿಸಿದ ಫಲ ಎಂದರು.
ಸಾನಿಧ್ಯವಹಿಸಿ ಸಂಗನಬಸವ ಶ್ರೀಗಳು ಆರ್ಶಿವದಿಸಿ ಮಾತನಾಡಿ ಇನ್ನೂ ನಮ್ಮ ದೇಶದಲ್ಲಿ ಸಂಸ್ಕೃತಿ ಉಳಿಯಲು ಕಾರಣ ಮಠ, ಮಂದಿರಗಳು ಅವುಗಳ ಸದುಪಯೋಗ ಮಾಡಿಕೊಳ್ಳುವ ಕೆಲಸವಾಗಬೇಕಾಗಿದೆ ಅದನ್ನು ಜಾತ್ರಾಮಹೋತ್ಸವ ಸಮಿತಿ ಸದಸ್ಯರು ಮಾಡಬೇಕು ಎಂದರು.
ಪುರಾಣವನ್ನು ಶ್ರೀ ವೇದಮೂರ್ತಿ ರೇವಣಸಿದ್ದಯ್ಯಸ್ವಾಮಿ. ಗದಿಗೆಯ್ಯಸ್ವಾಮಿ. ಹಿರೇಮಠ ಪಠಿಸಿದರು, ಪುರಸಭೆ ಸದಸ್ಯ ಸಿದ್ದಾರ್ಥಗೌಡ ಪಾಟೀಲ, ರಮೇಶ ವನಹಳ್ಳಿ, ಟಿ.ವ್ಹಿ.ಸುರಗೀಮಠ, ಪಕ್ಕೀರಜ್ಜ ಯಲಿಗಾರ, ದತ್ತಣ್ಣಾ ವೆರ್ಣೇಕರ, ಈರಣ್ಣಾ ಬಡ್ಡಿ, ಚಂದ್ರು ಜವಳಿ, ವಿಶ್ವನಾಥ ಕಳ್ಳೀಮಠ, ಬೀಮಸೇನ ಹಿರೂಲಾಲ, ಡಿ.ಎಫ್.ಧಾರವಾಡ, ಶಿವಪ್ಪ ಗಂಜೀಗಟ್ಟಿ, ರಾಜು ದೇಸಾಯಿ, ನಿಜಗುಣಿ, ಆರ್.ಎಸ್.ಪಾಟೀಲ ಸೇರಿದಂತೆ ಸಧ್ಬಕ್ತರು ಉಪಸ್ಥಿತರಿದ್ದರು. ಎಸ್.ಪಿ.ಜೋಷಿ ಕಾರ್ಯಕ್ರಮ ನಿರ್ವಹಿಸಿದರು, ಶಂಕರಗೌಡ್ರ ಪಾಟೀಲ ವಂದಿಸಿದರು.