ಭೀಮಾ ಶಂಕರ ಸೌಹಾರ್ದ ಸಹಕಾರಿ ಉದ್ಘಾಟನೆ
ಚಿಕ್ಕೋಡಿ: ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದು. ಗ್ರಾಹಕರ ಮತ್ತು ಸದಸ್ಯರ ವಿಶ್ವಾಸ ಪಡೆಯುವ ಮೂಲಕ ಸಹಕಾರಿ ಸಂಸ್ಥೆಗಳನ್ನು ಬೆಳೆಸಬೇಕು ಎಂದು ಕವಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.
ತಾಲೂಕಿನ ಸದಲಗಾ ಪಟ್ಟಣದ ಭೀಮಾ ಶಂಕರ ಸೌಹಾರ್ದ ಸಹಕಾರಿ ಸಂಘ ಹಾಗೂ ಸಾಯಿ ಸೋಶಿಯಲ್ ಫೌಂಡೇಶನ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಸಂಘದ ಸ್ಥಾಪನೆ ವೇಳೆಯಲ್ಲಿ ಅನೇಕರು ಕಾಲೆಳೆಯುವಾಗ ಸಮಾಜಕ್ಕೆ ಕೈಜೋಡಿಸುವ ಪರೋಪಕಾರ ಮಹಾದೇವ ಮಧಾಳೆ ಮತ್ತು ಅವರ ಕುಟುಂಬದವರು. ಅವರ ಮೇಲಿನ ಸಾರ್ವಜನಿಕರ ನಂಬಿಕೆಯು ಅವರನ್ನು ಈಗಾಗಲೇ ಬಾಲಕೃಷ್ಣ ಸೊಸೈಟಿ ಮುನ್ನಡೆಸಿಕೊಂಡುವ ಹೋಗುವ ರೀತಿಯಲ್ಲಿ ಅವರ ಅರ್ಹತೆ ನೀಡಿದೆ. ಅವರಿಂದ ರಚನಾತ್ಮಕ ಕೆಲಸಗಳು ನಡೆಯಲಿ. ಸಮಾಜ ಸೇವೆ ಮಾಡಿ ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಯಶಸ್ವಿಯಾಗಿ ಈಡೇರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭಿಜಿತ ಪಾಟೀಲ, ಬಸವರಾಜ ಗುಂಡಕಲ್ಲೆ, ದಕ್ಷಿಣ ಪಿಕೆಪಿಎಸ್ ಒಕ್ಕೂಟದ ಅಧ್ಯಕ್ಷ ಪಿರಗೊಂಡ ಪಾಟೀಲ, ಜವಾಹರ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುಮೇರು ಪಾಟೀಲ, ಸತೀಶ ಪಾಟೀಲ, ಭೀಮಾ ಶಂಕರ ಸೌಹಾರ್ದ ಸಹಕಾರಿ ಸಂಘ ಮತ್ತು ಶ್ರೀ ಸಾಯಿ ಸೋಶಿಯಲ್ ಫೌಂಡೇಶನ್ನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಬಾಲಕೃಷ್ಣ ಸಮಾಜದ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಮಧಾಳೆ ಪ್ರಾಸ್ತಾವಿಕ ಮಾತನಾಡಿದರು. ಶೃತಿ ಕಾಮತೆ ಸ್ವಾಗತಿಸಿದರು.