ಬೈಲಹೊಂಗಲ

ವೀರಕೇಸರಿ ಅಮಟೂರ ಬಾಳಪ್ಪನವರ ಕೀರ್ತಿ ಅಜರಾಮರ ; ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಹೇಳಿಕೆ: ಅಮಟೂರ ಬಾಳಪ್ಪ ಉತ್ಸವ-2022 ಉದ್ಘಾಟನೆ

ವೀರಕೇಸರಿ ಅಮಟೂರ ಬಾಳಪ್ಪನವರ ಕೀರ್ತಿ ಅಜರಾಮರ  ; ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಹೇಳಿಕೆ: ಅಮಟೂರ ಬಾಳಪ್ಪ ಉತ್ಸವ-2022 ಉದ್ಘಾಟನೆ

ಲೋಕದರ್ಶನ ವರದಿ 

ಬೈಲಹೊಂಗಲ 07: ಕಿತ್ತೂರಿನ ಗತವೈಭವಕ್ಕೆ ಕಾರಣರಾಗಿರುವ ವೀರಕೇಸರಿ ಅಮಟೂರ ಬಾಳಪ್ಪನವರ ಕೀರ್ತಿ ಅಜರಾಮರವಾಗಿದೆ. ಅವರೊಬ್ಬ ಅಪ್ಪಟ್ಟ ನಂಬಿಕಸ್ಥ, ದೇಶಪ್ರೇಮಿ ಆಗಿದ್ದರೆಂದು ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.  

   ತಾಲೂಕಿನ ಅಮಟೂರ ಗ್ರಾಮದಲ್ಲಿ ಅಮಟೂರ ಬಾಳಪ್ಪನವರ ಉತ್ಸವ 2022 ನ್ನು  ಉದ್ಘಾಟಿಸಿ ಅವರು ಮಾತನಾಡಿದರು. ವೀರರಾಣಿ ಕಿತ್ತೂರ ಚನ್ನಮ್ಮನವರ ಅಂಗರಕ್ಷಕನಾಗಿದ್ದ ಅಮಟೂರ ಬಾಳಪ್ಪ ಗುಂಡು ಹೊಡೆಯದಿದ್ದರೆ ಮಹಾರಾಣಿಯ ಜೀವಕ್ಕೆ ಅಪಾಯವಿತ್ತು. ದೈತ್ಯ ಬ್ರಿಟಿಷ  ಸೈನ್ಯದ ವಿರುದ್ಧ ದಿಟ್ಟತನದ, ಜೀವದ ಹಂಗು ತೊರೆದು ಹೋರಾಟ ಮಾಡಿರುವ ವೀರಕೇಸರಿ ಅಮಟೂರ ಬಾಳಪ್ಪ ಅವರ ಉತ್ಸವವನ್ನು ಇನ್ನು ಮುಂದೆ ಸರಕಾರದ ಧನಸಹಾಯದೊಂದಿಗೆ ಆಚರಿಸಲಾಗುವುದು. ಬರುವ ವರ್ಷದಿಂದ 5 ಲಕ್ಷ ರೂ.ಗಳನ್ನು ಒದಗಿಸಲಾಗುವುದು. ಪ್ರಸ್ತುತ ವರ್ಷದಿಂದ ಸರಕಾರದಿಂದ ಉತ್ಸವ ಆಚರಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ನಾಡಿನ ಜನರಲ್ಲಿ ಸ್ಪೂರ್ತಿ ತುಂಬಿದರು.  

  ಶಾಸಕ ಮಹಾಂತೇಶ ಕೌಜಲಗಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷದಿಂದ ಅದ್ಧೂರಿ ಉತ್ಸವಕ್ಕೆ ವಿಶೇಷ ಕಾಳಜಿವಹಿಸಲಾಗುವದು. ಭವಿಷ್ಯದಲ್ಲಿ ಯಾವದೇ ಸರಕಾರ ಬಂದರೂ ಇಂಥಹ ವೀರ ಮಹಣೀಯರ ಸಾಧನೆ ಬಿಂಬಿಸುವ ಕೆಲಸ ನಿರಂತರವಾಗಬೇಕಾಗಿದ್ದು ಬೈಲಹೊಂಗಲ ತಾಲೂಕು ತನ್ನದೇ ಆದ ಮಹತ್ವ ಹೊಂದಿದೆ. ಈ ಹಿಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಅಮಟೂರಿನಲ್ಲಿ ಬಾಳಪ್ಪನವರ ಮೂರ್ತಿ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರೆಂದು ನೆನಪು ಮಾಡಿದರು.  

   ಬೇವಿನಕೊಪ್ಪ ನಿತ್ಯಾನಂದ ಆಶ್ರಮದ ವಿಜಯಾನಂದ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಯಾನಗರ ಅಭಿನವಸಿದ್ಧಲಿಂಗ ಸ್ವಾಮೀಜಿ, ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಪ್ರಭಾ ಅಕ್ಕನವರು, ಬೈಲಹೊಂಗಲದ ಆರಾದ್ರಿಮಠದ ಡಾ.ಮಹಾಂತಯ್ಯ ಶಾಸ್ತ್ರೀಗಳು ಸಾನಿಧ್ಯವಹಿಸಿದ್ದರು.  

  ಶ್ರೀಗಳು ಮಾತನಾಡಿ, ಅಮಟೂರ ಬಾಳಪ್ಪನ ಉತ್ಸವವನ್ನು ಕಳೆದ 40 ವರ್ಷಗಳಿಂದ ಆಚರಿಸುತ್ತಾ ಬಂದಿದ್ದ ದಿ.ನಾಗನಗೌಡ ಪಾಟೀಲರ ಸೇವೆ ಸ್ಮರಣೀಯವಾಗಿದೆ. ಅದರ ಪ್ರತಿಫಲವಾಗಿ ಸರಕಾರ ಬಾಳಪ್ಪನ ಉತ್ಸವಕ್ಕೆ ಮನಸ್ಸು ಮಾಡಿರುವುದು ಖುಷಿ ತಂದಿದೆ. ವರ್ಷದಿಂದ ವರ್ಷಕ್ಕೆ ಉತ್ಸವ ಅದ್ಧೂರಿಯಾಗಿ ಮೂಡಿ ಬರಲೆಂದು ಶುಭ ಹಾರೈಸಿದರು. ಬಾಳಪ್ಪನ ಉತ್ಸವದ ವೇದಿಕೆಗೆ ದಿ.ನಾಗನಗೌಡ ಪಾಟೀಲ ವೇದಿಕೆ ಎಂದು ಹೆಸರಿಡಬೇಕೆಂದು ಒತ್ತಾಯಿಸಿದರು.  

   ಹಿರಿಯ ಸಾಹಿತಿ ಯ.ರು.ಪಾಟೀಲ ಅಮಟೂರ ಬಾಳಪ್ಪನ ಕುರಿತು ಉಪನ್ಯಾಸ ನೀಡಿದರು. ಉಪವಿಭಾಗಾಧಿಕಾರಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶಶಿಧರ ಬಗಲಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಕಾಂಗ್ರೇಸ್ ಮುಖಂಡ ಮಹಾಂತೇಶ ಮತ್ತಿಕೊಪ್ಪ, ಗ್ರಾಮದ ಯುವ ಮುಖಂಡ, ಗ್ರಾ.ಪಂ.ಸದಸ್ಯ ದೀಪಕ ಶಟೋಜಿ, ತಾ.ಪಂ.ಇಒ ಸುಭಾಸ ಸಂಪಗಾಂವಿ, ಬಿಇಒ ಎ.ಎನ್‌.ಪ್ಯಾಟಿ, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಮುದಕೈನವರ, ಉಪಾಧ್ಯಕ್ಷ ಮಹಾಂತೇಶ ಮರೆಕ್ಕನವರ, ಪಿಡಿಒ ಶಾಂತಲಾ ನಾಯಕ, ಶ್ರೀ ವೀರಕೇಸರಿ ಅಮಟೂರ ಬಾಳಪ್ಪ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಸೋಮನಗೌಡ ಪಾಟೀಲ, ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ, ಗ್ರಾ.ಪಂ.ಸದಸ್ಯರಾದ ರಾಘವೇಂದ್ರ ಸಂಗಪ್ಪನವರ, ಮಲ್ಲವ್ವ ದಳವಾಯಿ, ಕಸ್ತೂರಿ ಸುಣಗಾರ, ನಾರಾಯಣ ಶಿರೋಮಣಿ, ಉಮೇಶ ಹುಲಮನಿ, ರವೀಂದ್ರ ಹುಡೇದ, ಗಣ್ಯರಾದ ಶಿವಾಜಿ ಸೋಗಿಮನಿ, ಶಂಕರಗೌಡ ಪಾಟೀಲ, ಈಶ್ವರ ಉಳ್ಳಾಗಡ್ಡಿ, ದೇಮನಗೌಡ ಶೀಲವಂತರ, ಜಿ.ಬಿ.ತುರಮರಿ, ಬಸವರಾಜ ಕಾಲಗಗ್ಗರಿ, ವೀರಣಗೌಡ ಪಾಟೀಲ, ದುಂಡಪ್ಪ ಕಾಲಗಗ್ಗರಿ, ಕಾಕತಿಯ ಚನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಡಾ.ಎಸ್‌.ಡಿ.ಪಾಟೀಲ ಹಾಗೂ ಗ್ರಾ.ಪಂ.ಸಿಬ್ಬಂದಿ, ಅಮಟೂರ ಬಾಳಪ್ಪನ ಅಭಿಮಾನಿಗಳು, ಅಮಟೂರ ಗ್ರಾಮಸ್ಥರು ಉಪಸ್ಥಿತರಿದ್ದರು. ತಹಶೀಲ್ದಾರ ಬಸವರಾಜ ನಾಗರಾಳ ಸ್ವಾಗತಿಸಿದರು. ಶಿಕ್ಷಕ ರಾಜು ಹಕ್ಕಿ ನಿರೂಪಿಸಿದರು. ಸಮನ್ವಯಾಧಿಕಾರಿ ಬಿ.ಎನ್‌.ಕಸಾಳೆ ವಂದಿಸಿದರು. 


ಸುದ್ದಿ ಓದಿ