ಜಮಖಂಡಿ

ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ

ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ

ಜಮಖಂಡಿ 15:  ರೋಟರಿ ಸಂಸ್ಥೆಯು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೊಂದು ಪ್ರವಾಸದ ದೋಣಿಯಾಗಿದೆ. ಪ್ರತಿ ವರ್ಷಕ್ಕೊಮ್ಮೆ ಅಧ್ಯಕ್ಷ ಹುದ್ದೆಗಳು ಬದಲಾವಣೆ ಮಾಡಿಕೊಂಡು ಬರುತ್ತಿದೆ. ಗೌರ್ನರ್ ಹುದ್ದೆಗಿಂತಲು ಅಧ್ಯಕ್ಷ ಹುದ್ದೆಯು ಒಳ್ಳೆಯ ಹುದ್ದೆಯಾಗಿದೆ. ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಮುಂದೆ ಸಾಗುವ ಜವಾಬ್ದಾರಿ ಮಹತ್ವದಾಗಿದೆ ಎಂದು ರೋಟರಿ ಸಂಸ್ಥೆಯ ಗೌರ್ನರ್ ಅವಿನಾಶ ಪೋದಾರ ಹೇಳಿದರು. 

ನಗರದ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ನಡೆದ ರೋಟರಿ ಮತ್ತು ಇನ್ನರ್‌ವ್ಹೀಲ್ ಸಂಸ್ಥೆಯ 2024-25 ನೇ ಸಾಲಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ಸಂಸ್ಥೆಯು ಪೋಲಿಯೊ ನಿರ್ಮೂಲನೆ ಮಾಡುವ ಮೂಲಕ ದೇಶಕ್ಕೆ ದೊಡ್ಡ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಒಬ್ಬ ವ್ಯಕ್ತಿಯು ಕೂಡಾ ಸುಧಾರಣೆಯಾಗುತ್ತಾನೆ. ಪ್ರತಿಯೊಬ್ಬ ಸದಸ್ಯನು ಬಹಳ ಜವಾಬ್ದಾರಿಯಿಂದ ಕೆಲಸವನ್ನು ನಿರ್ವಹಿಸುವ ಕಾರಣ ಸುಧಾರಣೆಯಾಗುತ್ತಾನೆ. ಅಧ್ಯಕ್ಷ ಹುದ್ದೆಯನ್ನು ಪಡೆದುಕೊಂಡವರು ತಮ್ಮ ಆಡಳಿತ ಅವಧಿಯಲ್ಲಿ ಎಲ್ಲ ಸದಸ್ಯರ ಮನಗೆದ್ದು ಸಾಮಾಜಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕಾಗುತ್ತದೆ. ಒಂದು ವರ್ಷದ ಅವಧಿಯು ನೀವು ತಿಳಿದುಕೊಳ್ಳುವಷ್ಟರಲ್ಲಿ ಅವಧಿ ಮುಗಿಯಲು ಬರುತ್ತದೆ.ಅಷ್ಟರಲ್ಲಿ ತಾವು ತಮ್ಮ ಅಧಿಕಾರದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು.ಮನಸು ದೊಡ್ಡದು ಇರಬೇಕು. ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬಾರದು. ಒಳ್ಳೆಯ ಕೆಲಸ ಮಾಡುವದರಿಂದ ತಮ್ಮಗೆ ಸಮಾಧಾನ, ತೃಪ್ತಿ ತರುವ ಹಾಗೆ ಕೆಲಸ ಮಾಡಬೇಕು. ತಾವುಗಳು ಮಾಡುವ ಕೆಲಸಕ್ಕೆ ಎಲ್ಲರೂ ತಮ್ಮನ್ನು ನೋಡಿ ಸೈಲ್ಯೂಟ್ ಮಾಡಬೇಕು ಎಂದರು. 

ನೂತನ ರೋಟರಿ ಸಂಸ್ಥೆಯ ಅಧ್ಯಕ್ಷ ಕಿರಣ ದೇಸಾಯಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಒಳ್ಳೆಯದನ್ನು ಮಾಡುವುದು ಹೊರೆತು ಕೆಟ್ಟದನ್ನು ಮಾಡಬಾರದು. ನಮ್ಮಗೆ ಜವಾಬ್ದಾರಿಯನ್ನು ನೀಡಿದಕ್ಕೆ ಸರಿಯಾಗಿ ನಿಭಾಯಿಸಿಕೊಂಡು. ಬನಹಟ್ಟಿ, ರಬಕವಿ ರೋಟರಿ ಸಂಸ್ಥೆಯ ಸದಸ್ಯರನ್ನು ವಿಸ್ವಾಸಕ್ಕೆ ಪಡೆದುಕೊಂಡು ನಮ್ಮ ಸಂಸ್ಥೆಯ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಕಾರ್ಯನಿರ್ವಹಿಸುತ್ತೇನೆ. ಸಂಸ್ಥೆಯ ಶ್ರೇಯೋಭಿವೃದಿಯನ್ಙು ಮಾಡುತ್ತೇನೆ. ಡೆಂಗ್ಯೂ,ಕ್ಯಾನ್ಸರ್ ಹೀಗೆ ಆರೋಗ್ಯದ ಬಗ್ಗೆ ರೈತರ ಕುರಿತು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಬಿರಗಳನ್ನು ಮಾಡುವ ಗುರಿಯನ್ನು ಹೊಂದಿದೆನೆ ಎಂದರು. 

ಡಾ,ಸುಖಣ್ಯಾ ಕಲೂತಿ, ಆರ್,ಪಿ, ನ್ಯಾಮಗೌಡ ಅಥಿತಿಗಳನ್ನು ಪರಿಚಯಿಸಿದರು, ಎಸ್,ವಾಯ್, ಬಿರಾದರ ವರದಿ ವಾಚನ ಮಾಡಿದರು. ಬಸವರಾಜ ಆಲಗೂರ. ರೋಟರಿ ಸಂಸ್ಥೆಯು ಒಂದು ವರ್ಷ ನಡೆದು ಬಂದ ಕಾರ್ಯಕ್ರಮದ ಕುರಿತು ಪರಿಚಯಿಸಿದರು. ಡಾ,ಅಶ್ವಿನಿ ಪೂಜಾರಿ ವರದಿ ವಾಚನ ಮಾಡಿದರು. ಶ್ರೀಧರ ಕಾಖಂಡಕಿ, ರಾಜು ಕುವಳ್ಳಿ ಪರಿಚಯಿಸಿದರು. ನೂತನವಾಗಿ ಉಪಾಧ್ಯಕ್ಷರಾಗಿ ಮುತ್ತುರಾಜ ಅತ್ತೇಪ್ಪನ್ನರ, ಕಾರ್ಯದರ್ಶಿ ಚಂದ್ರಗುಪ್ತ ಬೆಳಗಲಿ, ಸಹ ಕಾರ್ಯದರ್ಶಿ ಮಲ್ಲಪ್ಪ ಬೂಜರುಕ, ಖಜಾಂಚಿ ಪ್ರಕಾಶ ಶಿಂಧೆ, ಸಹ ಖಜಾಂಚಿ ಶಂಕರ ಪಟ್ಟಣಶೆಟ್ಟಿ, ಶೀತಲ ನ್ಯಾಮಗೌಡ ಅಧಿಕಾರವನ್ನು ಸ್ವೀಕರಿಸಿದರು.  

ಇನ್ನರ್‌ವ್ಹೀಲ್ ಸಂಸ್ಥೆಯ ಕುರಿತು ಅರ್ಚನಾ ಕಾಖಂಡಕಿ ಪರಿಚಯಿಸಿದರು. ಡಾ, ಅಶ್ವಿನಿ ಪೂಜಾರಿ ಒಂದು ವರ್ಷಗಳ ಕಾಲ ನಡೆದುಕೊಂಡ ಬಂದಿರುವ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿದರು.ಇನ್ನರ್‌ವ್ಹೀಲ್ ಸಂಸ್ಥೆಯ ನೂತನ ಅಧ್ಯಕ್ಷೆ ಅಲಕಾ ಮಾಳಗಿ, ಕಾರ್ಯದರ್ಶಿ ಗೀರೀಜಾ ಮೈತ್ರಿ, ಖಜಾಂಚಿ ಮೇಘಾ ಮಹಾಬಳಶೆಟ್ಟಿ ಅಧಿಕಾರವನ್ನು ಸ್ವೀಕರಿಸಿದರು. 

ರೂಪಾ ಪೋದಾರ, ಬೆಳಗಾವಿ ಶ್ರೀಹರ್ಷ ಶಾ ಮಾತನಾಡಿದರು, ಆಶಾದೇವಿ ಗುಡಗುಂಟಿ, ರವೀಂದ್ರ ಗೌಳಿ ವೇದಿಕೆಯಲ್ಲಿ ಉಪಸ್ಥಿತರಿದರು. ಡಾ, ಮಾಳೇಶ ಪೂಜಾರಿ, ಮಾಹಾನಂದಾ ಧರೀಗೌಡರ, ಡಾ, ಜೋತಿ ದೇವರಡ್ಡಿ ನಿರೂಪಿಸಿದರು. ಮಲ್ಲಪ್ಪ ಬೂಜರೂಕ ವಂದಿಸಿದರು. 


ಸುದ್ದಿ ಓದಿ