ಜಮಖಂಡಿ

ನೂತನ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರ ಪದಗ್ರಹಣ ಸಮಾರಂಭ

ನೂತನ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರ ಪದಗ್ರಹಣ ಸಮಾರಂಭ

ಜಮಖಂಡಿ 23:  ನಗರಸಭೆಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಪರಮಾನಂದ ಗೌರೋಜಿ ಮತ್ತು ಉಪಾಧ್ಯಕ್ಷೆಯಾಗಿ ರೇಖಾ ಕಾಂಬಳೆ ಅವರು ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಸ್ವೀಕರಿಸಿಕೊಂಡರು. 

ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಪರಮಾನಂದ ಗೌರೋಜಿ ಮಾತನಾಡಿ, ಜಮಖಂಡಿ ನಗರವನ್ನು ಸುಂದರ ನಗರವನ್ನಾಗಿಸುವ ಜೊತೆಗೆ ಎಲ್ಲ ಸದಸ್ಯರನ್ನು ಒಳಗೊಂಡು ಅಭಿವೃದ್ದಿಯನ್ನು ಮಾಡುತ್ತೇನೆ. ಸ್ವಚ್ಛತೆಗಾಗಿ ಮೊದಲು ಆದ್ಯತೆಯನ್ನು ನೀಡಲಾಗುತ್ತದೆ. ಶುದ್ದಕುಡಿಯುವ ನೀರು, ಒಳಚರಂಡಿ, ವಿದ್ಯುತ್,ರಸ್ತೆಗಳ ಅಭಿವೃದ್ದಿ ಹೀಗೆ ಹಲವಾರು ಮೂಲಭೂತಸೌಕರ್ಯಗಳನ್ನು ಜನತೆಗೆ ಒದಗಿಸಲಾಗುತ್ತದೆ. ನಮ್ಮ ಮೇಲೆ ಜನತೆ  ವಿಶ್ವಾಸವನ್ನು ಇಟ್ಟಿದ್ದಾರೆ. ಜನರ ವಿಶ್ವಾಸಕ್ಕೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಮಾಜಿ ಶಾಸಕ ಆನಂದ ನ್ಯಾಮಗೌಡರ ಸಲಹೆ ಮೇರೆಗೆ ನಗರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕೆಲಸ ನಿರ್ವಹಿಸುತ್ತೇನೆ ಎಂದರು. 

ನೂತನವಾಗಿ ಉಪಾಧ್ಯಕ್ಷೆ ರೇಖಾ ಕಾಂಬಳೆ ಮಾತನಾಡಿ, ಮಾಜಿ ಶಾಸಕ ಆನಂದ ನ್ಯಾಮಗೌಡರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾನು ಪ್ರಾಮಾಣಿಕವಾಗಿ ನಗರದ ಜನತೆಯ ಸಮಸ್ಯೆಗಳು ಯಾವುದೇ ಇದ್ದರು. ಅವುಗಳನ್ನು ಕೂಡಲೇ ಇಥ್ಯಾರ್ತಗೊಳಿಸುವ ಪ್ರಯತ್ನ ಮಾಡುವ ಜೊತೆಗೆ ನಗರವನ್ನು ಸುಂದರ ನಗರವನ್ನಾಗಿಸುವ ಕೆಲಸ ಮಾಡುತ್ತೇನೆ. ಜಗರದ ಜನತೆಯ ಸಹಕಾರ ಬಹಳ ಮುಖ್ಯವಾಗಿದೆ ಎಂದರು. 

ನಗರಸಭೆಯಲ್ಲಿ ನಡೆದ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ,ಉಪಾಧ್ಯಕ್ಷೆ ಕೋಣೆಯ ಕೊಠಡಿಗಳು ಹೂವಿನಿಂದ ಅಲಂಕರಗೊಂಡು ಮದುವನಗಿತ್ತಿಯಂತೆ ಕಣ್ಮನಸೆಳೆದವು. ಅಧ್ಯಕ್ಷ,ಉಪಾಧ್ಯಕ್ಷೆ ಇಬ್ಬರು ತಮ್ಮ ಕೋಣೆಯಲ್ಲಿ ಲಕ್ಷ್ಮೀ ಭಾವಚಿತ್ರಕ್ಕೆ ಪೂಜೆಯನ್ನು ಸಲಿಸಿ. ಅಧಿಕಾರವನ್ನು ಪಡೆದುಕೊಂಡರು. 

ಮಾಜಿ ಶಾಸಕ ಆನಂದ ನ್ಯಾಮಗೌಡ, ಮುತ್ತಿನಕಂತಿಮಠದ ಶ್ರೀಗಳು,ಹುನ್ನೂರ ಗ್ರಾಮದ ಶ್ರೀಗಳು,ಬಸವರಾಜ ನ್ಯಾಮಗೌಡ ಸೇರಿದಂತೆ ಮಾಜಿ ನಗರಸಭೆ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಇದ್ದರು. ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಗರಸಭೆ ಆವರಣದ ಮುಂದೆ ಪಟ್ಟಾಕಿಯನ್ನು ಸಿಡಿಸಿ. ಸಿಹಿ ಹಂಚಿ ಸಂಭ್ರಮಾಚರಣೆ ಮೆರೆದರು. 


ಸುದ್ದಿ ಓದಿ