ಬ್ಯಾಡ್ಗಿ

ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಬ್ಯಾಡಗಿ 17:  ಸಮಾಜದ ಕಷ್ಟ ನಷ್ಟಗಳನ್ನು ರೋಟರಿ ಕ್ಲಬ್ನ ಸದಸ್ಯರು ಅರಿತು ಅದನ್ನು ಪರಿಹರಿಸುವತ್ತ ಗಮನ ನೀಡಬೇಕು ಎಂದು ಕೊಲ್ಲಾಪುರದ ಡಿಸ್ಟ್ರಿಕ್ ಗವರ್ನರ್ ನಾಸೀರ್ ಬೋರಸೆಡ್ವಾಲಾ ಹೇಳಿದರು. ಪಟ್ಟಣದ ಬಿಇಎಸ್ಎಂ ಡಿಗ್ರಿ ಕಾಲೇಜಿನ ಸಭಾಭವನದಲ್ಲಿ ನಡೆದ ರೋಟರಿ ಕ್ಲಬ್ ಬ್ಯಾಡಗಿ ಮತ್ತು ಇನ್ನರ್ವಿಲ್ ಕ್ಲಬ್ ಬ್ಯಾಡಗಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ಅವರು, ಯಾವುದೇ ಯೋಜನೆಗಳನ್ನು ಪ್ರಾಮಾಣಿಕತೆ, ಶಿಸ್ತಿನಿಂದ ರೂಪಿಸಬೇಕು. ಜನರನ್ನು ಒಂದು ಗೂಡಿಸುವುದು, ಸರಿಪಡಿಸುವುದು ನಮ್ಮ ಕೆಲಸ. 

ಸದಸ್ಯರೇ ರೋಟರಿ ಕ್ಲಬ್ನ ಬೆನ್ನೆಲುಬಾಗಿದ್ದಾರೆ. ಹೊಸದಾಗಿ ಪದಗ್ರಹಣ ಮಾಡಿದ ಪದಾಧಿಕಾರಿಗಳು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಬೆಂಬಲದೊಂದಿಗೆ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಬೇಕು ಎಂದರಲ್ಲದೇ, ಬ್ಯಾಡಗಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಒಣಮೆಣಸಿನಕಾಯಿ ಮಾರುಕಟ್ಟೆ, ದೊಡ್ದ ಮಟ್ಟದ ಬಹಳಷ್ಟು ಕೋಲ್ಡ್ ಸ್ಟೋರೇಜ್, ಮಿಲ್ಗಳಿದ್ದು, ಜೊತೆಗೆ ಬಹು ದೊಡ್ಡ ವರ್ತಕರು ಇದ್ದಾರೆ. ಅವರೆಲ್ಲರ ಸಹಾಯ ಸಹಕಾರವನ್ನು ಪಡೆದು ಬ್ಯಾಡಗಿಯಲ್ಲಿ ದೊಡ್ಡ ದೊಡ್ಡ ಸರ್ವೇ ಸ್ ಪ್ರಾಜೆಕ್ಟ್ಗಳನ್ನು ಮಾಡಿ ಹೆಚ್ಚು ಬಡವರ್ಗದ ಸಮುದಾಯದವರಿಗೆ ನೆರವಿನ ಹಸ್ತ ಚಾಚಬಹುದು ಎಂದು ಮಾರ್ಗದರ್ಶನ ನೀಡಿದರು. ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಮಂಜುನಾಥ ಉಪ್ಪಾರ ಅವರು ತಮ್ಮ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ನೂತನ ಅಧ್ಯಕ್ಷ ಮಾಲತೇಶ ಉಪ್ಪಾರ ಅವರಿಗೆ ಹಸ್ತಾಂತರ ಮಾಡಿ, ಕಳೆದ ವರ್ಷದಲ್ಲಿ ಎಲ್ಲರ ಸಹಕಾರದೊಂದಿಗೆ ಸುಮಾರು 60ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ನೆನಪಿಸಿಕೊಂಡರಲ್ಲದೇ, ನೂತನ ಅಧ್ಯಕ್ಷರು ಸಹ ಅವೆಲ್ಲವನ್ನು ಗಣನೆಗೆ ತೆಗೆದುಕೊಂಡು ಎಲ್ಲ ಸದಸ್ಯರ ಅಭಿಪ್ರಾಯ ಸಹಕಾರದೊಂದಿಗೆ ಹೆಚ್ಚಿನ ಸೇವಾಕಾರ್ಯಗಳಲ್ಲಿ ತೊಡಗುವಂತೆ ಕೋರಿದರು .ಇನ್ನರ್ವಿಲ್ ಕ್ಲಬ್ ಅಧ್ಯಕ್ಷರಾಗಿ ಮಹೇಶ್ವರಿ ಪ್ರಸಾರದ ಅವರು ನಿರ್ಗಮಿತ ಅಧ್ಯಕ್ಷೆ ಸಂಧ್ಯಾ ದೇಶಪಾಂಡೆ ಅವರಿಂದ ಅಧಿಕಾರ ಸ್ವೀಕರಿಸಿದರು. ರೋಟರಿ ಕ್ಲಬ್ಬಿಗೆ ಹೊಸದಾಗಿ ಆನಂದ ಗೌಡ ಸೊರಟೂರು, ಪ್ರಸನ್ನ ಶಿರ್ವಾಡ್ಕರ್, ಮಹದೇವಪ್ಪ ಕೆಂಚನಗೌಡ, ಚಂದ್ರು ಗಾಣಿಗೇರ, ಡಾ.ನಾಗರಾಜ, ಡಾ.ಬಸವರಾಜ ಗೋಂದಿ ಹೊಸ ಸದಸ್ಯತ್ವವನ್ನು ಪಡೆದುಕೊಂಡರು. ಹಾಗೂ ಇನ್ನರ್ ವ್ಹೀಲ್ ಕ್ಲಬ್ಬಿಗೆ ಹೊಸದಾಗಿ ಶ್ವೇತಾ ಬೂದಿಹಾಳಮಠ, ರಕ್ಷಿತಾ ಶೆಟ್ಟಿಹಳ್ಳಿ, ಅರುಣಾ ಬಾಗೊಜೀ, ಪುಷ್ಪಾ ಇಂಡಿಮಠ, ಗೀತಾ ಕಬ್ಬೂರ, ಜಾಹ್ನವಿ ಯಲಿ ಸದಸ್ಯತ್ವ ಪಡೆದರು 

ಸುದ್ದಿ ಓದಿ